Wednesday, August 6, 2014

ಪುಸ್ತಕ ಪರಿಚಯ: ಗಂಗವ್ವ ಗಂಗಾಮಾಯಿ (ಶಂಕರ ಮೊಕಾಶಿ ಪುಣೇಕರ)

ಈ ಕಾದಂಬರಿಯ ಕಥಾ ವಸ್ತು ಎರಡು ಕುಟುಂಬಗಳ ಮೇಲೆ ಕೇಂದ್ರೀಕೃತವಾಗಿದೆ. ಮೊದಲನೆಯ ಕುಟುಂಬ ಗಂಗವ್ವ, ಅವಳ ಮಗ ಕಿಟ್ಟಿ ಮತ್ತು ಗಂಗವ್ವಳ ತಮ್ಮ ರಾಘಪ್ಪನದ್ದು. ಇನ್ನೊಂದು ದೇಸಾಯಿಯವರ ಕುಟುಂಬ. ಅದು ವಿಧವೆಯಾದ ಗಂಗವ್ವಳಿಗೆ ಆಸರೆಯಾಗಿ ನಿಂತ ಕುಟುಂಬ. ಈ ಕಥೆ ಹಳೆಯ ನೆನಪುಗಳನ್ನು ಕೆದಕುತ್ತಾ ಮುಂದೆ ಸಾಗುತ್ತದೆ.
ದುರ್ಘಟನೆಯೊಂದರಲ್ಲಿ ಪತಿಯನ್ನು ಕಳೆದುಕೊಂಡ ಗಂಗವ್ವಳಿಗೆ ಜೀವನದಲ್ಲಿ ಇರುವುದು ಒಂದೇ ಉದ್ದೇಶ. ತನ್ನ ಮಗ ಕಿಟ್ಟಿ (ಕೃಷ್ಣಪ್ಪ) ಯನ್ನು ಬೆಳೆಸಿ, ಸ್ವತಂತ್ರನನ್ನಾಗಿ ಮಾಡುವುದು. ಅವಳ ಸೆರಗಲ್ಲಿ ಬೆಳೆದ ಕಿಟ್ಟಿ ತನ್ನ ಓದು ಮುಗಿದ ನಂತರ, ಸರ್ಕಾರೀ ಉದ್ಯೋಗ ಒಂದನ್ನು ಗಿಟ್ಟಿಸಿಕೊಳ್ಳುತ್ತಾನೆ. ಆದರೆ ಅವನ ಮುಗ್ಧತೆ ಅವನನ್ನು ಆಫೀಸಿನಲ್ಲಿ ನಗೆ ಪಾಟಲಿಗೆ ಈಡು ಮಾಡುತ್ತದೆ. ಹೇಗಾದರೂ ಮಾಡಿ ಮೇಲಾಧಿಕಾರಿಗಳಿಂದ ಹೌದು ಅನಿಸಿಕೊಳ್ಳುವ ಹವಣಿಕೆಯಲ್ಲಿರುವ ಅವನಿಗೆ ಗಂಗವ್ವಳ ತಮ್ಮ ರಾಘಪ್ಪನ ಪರಿಚಯ ಆಗುತ್ತದೆ. ಅಲ್ಲಿಯವರೆಗೆ ಗಂಗವ್ವಳ ಕುಟುಂಬದಿಂದ ದೂರ ಇದ್ದ  ರಾಘಪ್ಪನಿಗೆ ಇಬ್ಬರು ಹೆಣ್ಣು ಮಕ್ಕಳು. ತನ್ನ ಮೊದಲನೆಯ ಮಗಳನ್ನು ಕಿಟ್ಟಿಗೆ ಜೊತೆ ಮಾಡುವ ಬಯಕೆಯಿಂದ ರಾಘಪ್ಪ ಜಾಲ ಬೀಸುತ್ತಾನೆ. ತನ್ನ ಮೇಲಾಧಿಕಾರಿ ಜೊತೆಗೆ ಸ್ನೇಹ ಹೊಂದಿರುವ ರಾಘಪ್ಪನ ಮೇಲೆ ಕಿಟ್ಟಿಗೆ ಗೌರವ ಬೆಳೆಯುತ್ತದೆ. ಕ್ರಮೇಣ ರಾಘಪ್ಪನ ಜಾಲದಲ್ಲಿ ಕಿಟ್ಟಿ ಬಂದಿಯಾಗುತ್ತಾನೆ. ಆದರೆ ಕಿಟ್ಟಿಯ ಈ ಹೊಂದಾಣಿಕೆ ಗಂಗವ್ವಳಿಗೆ ಸರಿ ಕಾಣುವುದಿಲ್ಲ. ತನ್ನ ತಮ್ಮ ರಾಘಪ್ಪನ ಧೂರ್ತತನದಿಂದ ತನ್ನ ಕುಟುಂಬ ಅವನತಿ ಹೊಂದಿದ್ದು ಮತ್ತು  ತನ್ನ ಗಂಡ ಅಕಾಲ ಸಾವಿಗೆ ಈಡಾಗಿದ್ದು ಅವಳು ಮರೆತಿರುವುದಿಲ್ಲ. ಗಂಗವ್ವ ಈ ಸಮಸ್ಯೆಯಿಂದ ಹೊರ ಬರಲು ತನಗೆ ಕಷ್ಟ ಕಾಲಕ್ಕೆ ಬೆಂಗಾವಲಾಗಿದ್ದ ದೇಸಾಯಿಯವರ ಮೊರೆ ಹೋಗುತ್ತಾಳೆ. ಆದರೆ ಪಟ್ಟು ಬಿಡದ ರಾಘಪ್ಪ ತನ್ನ ಮಗಳನ್ನು ಕಿಟ್ಟಿ ಜೊತೆ ಮದುವೆ ಮಾಡುವದರಲ್ಲಿ ಯಶ ಕಾಣುತ್ತಾನೆ.
 ನಂತರ ಕಥೆಯು ರಾಘಪ್ಪನ ಸುತ್ತ ಗಿರಕಿ ಹೊಡೆಯುತ್ತದೆ. ಅವನ ಅಂತರಂಗ, ಚಾಣಾಕ್ಷತೆ ಮತ್ತು ಬಲ ಹೀನತೆಗಳ ಪರಿಚಯವಾಗುತ್ತದೆ. ರಾಘಪ್ಪನ ಉಪಾಯ ಮತ್ತು ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಇರುವ ಪ್ರಮುಖ ಅಡ್ಡಿ ಎಂದರೆ ದೇಸಾಯಿ ಕುಟುಂಬದ್ದು. ಇತ್ತ  ದೇಸಾಯಿ ಕುಟುಂಬದಲ್ಲಿ, ದೇಸಾಯಿವರ ಎರಡನೇ ಮಗ ವಸಂತ ಅವರ ಬಲ ಹೀನತೆ. ರಾಘಪ್ಪ ತನ್ನ  ಎರಡನೆಯ ಮಗಳನ್ನು ವಸಂತನಿಗೆ ಕೊಟ್ಟು ಮದುವೆ ಮಾಡುವ ಯೋಜನೆ ರೂಪಿಸುತ್ತಾನೆ. ರಾಘಪ್ಪ ಮತ್ತು ದೇಸಾಯಿ ಇಬ್ಬರು ತಮ್ಮ ಚದುರಂಗದಾಟದಲ್ಲಿ ತಮ್ಮ ಕಾಯಿಗಳನ್ನು ನಡೆಸುತ್ತ ಹೋಗುತ್ತಾರೆ. ಆ ಶೀತಲ ಸಮರದಲ್ಲಿ  ರಾಘಪ್ಪನಿಗೆ ಸೋಲುಂಟಾಗುತ್ತದೆ. ಇದರ ಜೊತೆಯಲ್ಲಿ ನಡೆಯುವ ಘಟನೆಗಳಲ್ಲಿ, ರಾಘಪ್ಪನ ಪ್ರೇಯಸಿ ಮೆಹಬೂಬಾಳ ಮತ್ತು ಪತ್ನಿಯ ಸಾವು, ರಾಘಪ್ಪನನ್ನು ಮಾನಸಿಕವಾಗಿ ಜರ್ಜರಿತನನ್ನಾಗಿ ಮಾಡುತ್ತವೆ. ಕುಗ್ಗಿ ಹೋದ ರಾಘಪ್ಪ ಆತ್ಮಹತ್ಯೆಗೆ ಶರಣಾಗುತ್ತಾನೆ. ಆದರೆ ನೀತಿವಂತರಾದ ದೇಸಾಯಿ ತಮ್ಮ ಮಗ ವಸಂತನ ಮದುವೆಯನ್ನು ರಾಘಪ್ಪನ ಎರಡನೇ ಮಗಳ ಜೊತೆಗೆ ನೆರವೇರಿಸುತ್ತಾರೆ. ಇದರ ಜೊತೆಗೆ ಗಂಗವ್ವಳ ಕುಟುಂಬವು ಸಹಜ ಜೀವನಕ್ಕೆ ಮರಳುತ್ತದೆ.
 ಇದು ಶಂಕರ ಮೊಕಾಶಿ ಪುಣೇಕರ ರವರ ಮೊದಲನೇ ಕಾದಂಬರಿ. ಕೆಲವೇ ಪಾತ್ರಗಳನ್ನು ಸೃಷ್ಟಿಸಿ, ಆದರೆ ಅವರ ಮನಸ್ಸಿನ ಆಳಕ್ಕೆ ಇಳಿದು ಕಥೆಗೆ ಗಂಭೀರತೆ ತಂದು ಕೊಡುತ್ತಾರೆ. ಈ ಕಾದಂಬರಿ ಲೇಖಕರಿಗೆ ಹೆಸರು ತಂದು ಕೊಡುವುದಲ್ಲದೆ ಇದನ್ನು ಚಲನ ಚಿತ್ರವನ್ನಾಗಿ ಮಾಡಿದವರಿಗೂ ಪ್ರಶಸ್ತಿಗಳನ್ನು ತಂದು ಕೊಟ್ಟಿತು.

-0-

The plot of this novel revolves around two families. One of Gangavva, her son Kitty and her younger brother Raghappa. And of Desai family who are a great support to Gangavva after her husband’s death. And the story makes frequent travels to the past while it makes progress.

Gangavva after losing her husband due to tragic events has only one purpose in her life, bringing up her only son Kitty (Krishnappa). Her son joins a Govt. office after completing his education but becomes a funny subject at his office due to his innocence. While he is on the lookout for ways to become closer to his higher officials, he comes across Raghappa, Gangavva’s brother who was not in contact with the family for many years. Kitty is drawn to Raghappa sensing he has closer relationship with his boss which would be of some help to him. Raghappa has a secret ambition, of marrying his daughter to Kitty in the name of reviving old relationship. Gangavva does not approve this as she knows that Raghappa is the reason for her family losing the riches and untimely death of her husband. She seeks support of Desai who is a great support to her in the course of events. But the adamant Raghappa succeeds in making Kitty marry his daughter Ratna.

Then the story develops around Raghappa, his past, and his plans for the future. And Desai is the prime opponent for bringing his plans to life. Desai’s family too is not perfect and Desai’s second son Vasant is his weakness. Raghappa develops a plot to marry his second daughter to Vasant. Both Raghappa and Desai make their moves but eventually Raghappa loses out the cold war and in the ethical war, Desai emerges the victor. Other events in Raghappa’s life such as death of Mehabuba, a singer who was in relationship with him and death of his wife makes him lose all his life energy and commit suicide. But Desai ensures that his son Vasanth marries Raghappa’s second daughter. And Gangavva’s family returns to normal life.

This is the first novel of Shankar Mokashi Punekar. Limited characters in this novel make the story interesting read and bring the desired impact through their psychological depths. This was made into a Kannada movie which fetched art awards and brought fame to those associated with it.

No comments:

Post a Comment