Tuesday, January 7, 2014

ಪುಸ್ತಕ ಪರಿಚಯ: ಭಾರತೀಪುರ (ಅನಂತ ಮೂರ್ತಿ)

ಕರ್ನಾಟಕದ ಪಶ್ಚಿಮ ಘಟ್ಟಗಳ ನಡುವಿನ ಒಂದು ಊರು ಭಾರತೀಪುರ. ಆ ಊರಿಗೆ ಪ್ರಸಿದ್ದಿ ಬಂದಿದ್ದು ಅಲ್ಲಿನ ಮಂಜುನಾಥ ಸ್ವಾಮಿಯ ದೇವಸ್ಥಾನದಿಂದ. ಊರಿನ ಎಲ್ಲ ನಿವಾಸಿಗಳೂ ಮಂಜುನಾಥ ಸ್ವಾಮಿಯ ಭಕ್ತರು. ಎಲ್ಲ ಜಾತಿ, ವರ್ಗದ ಜನರು ಮಂಜುನಾಥ ಸ್ವಾಮಿಗೆ ಭಯ ಭೀತಿ ಯಿಂದ ನಡೆದು ಕೊಳ್ಳುತ್ತಾರೆ. ಆ ದೇವಸ್ಥಾನಕ್ಕೆ ರಾಷ್ಟ್ರಪತಿಗಳು ಭೇಟಿ ನೀಡಿದಾಗಿಂದ ಅದರ ಪ್ರಸಿದ್ದಿ ಇನ್ನು ಉದ್ದಗಲಕ್ಕೂ ಹರಡಿ ಇನ್ನು ಹೆಚ್ಚಿನ ಸಂಖ್ಯೆಯ ಭಕ್ತರನ್ನು ಆಕರ್ಷಿಸಿಕೊಂಡಿದೆ.

ಭಾರತೀಪುರದ ಶ್ರೀಮಂತ ಕುಟುಂಬದಲ್ಲಿ ಜನಿಸಿದವನು ಜಗನ್ನಾಥ. ಅವನೇ ಈ ಕಾದಂಬರಿಯ ಕೇಂದ್ರ ಬಿಂದು. ದೂರದ ಇಂಗ್ಲಂಡ್ ನಲ್ಲಿ ತನ್ನ ವಿದ್ಯಾಭ್ಯಾಸ ಮುಗಿಸಿ ಊರಿಗೆ ಮರಳುತ್ತಾನೆ. ಆತ್ಮ ಅನ್ವೇಷಣೆಯಲ್ಲಿ ತೊಡಗಿರುವ ಆತನಿಗೆ ಸಮಾಜ ಸುಧಾರಣೆಯ ಹಂಬಲವಿದೆ. ಅವನಿಗೆ ತನ್ನ ಪೂರ್ವಜರಿಗೆ ಇದ್ದಂತ, ಕುಟುಂಬದ ಜಮೀನ್ದಾರಿಕೆಯನ್ನು ಉಳಿಸುಕೊಂಡು ಹೋಗುವ ಮತ್ತು ಇರುವ ಆಸ್ತಿಯನ್ನು ವೃದ್ಧಿಗೊಳಿಸುವ ಬಯಕೆ ಉಳಿದಿಲ್ಲ. ಬದಲಿಗೆ ಭಾರತೀಪುರದ ಜನ ಜೀವನವನ್ನು ಪ್ರಗತಿ ಪಥದ ಹಾದಿಗೆ ತರುವ ಕನಸಿದೆ. ಅಲ್ಲಿನ ಜನರಲ್ಲಿ ವೈಚಾರಿಕತೆಯನ್ನು ಬೆಳೆಸುವ ಪ್ರಯತ್ನ, ಅಲ್ಲಿನ ಹರಿಜನ ಮತ್ತು ಹಿಂದುಳಿದ ವರ್ಗಗಳಿಂದ ಪ್ರಾರಂಭ ಆಗಬೇಕು ಎನ್ನುವುದು ಅವನ ಅಭಿಪ್ರಾಯ. ಆದರೆ ಜನ ಎಲ್ಲಿಯವರೆಗೆ ತಮ್ಮ ಕಷ್ಟ-ನಷ್ಟಗಳೆಲ್ಲ ಮಂಜುನಾಥ ಸ್ವಾಮಿ ಕೊಟ್ಟಿದ್ದು ಎಂದುಕೊಳ್ಳುತ್ತಾರೋ ಅಲ್ಲಿಯವರೆಗೆ ಆ ಜನರ ಜೀವನ ಶೈಲಿ ಬದಲಾಗದು ಎನ್ನುವುದು ಅವನ ಅನಿಸಿಕೆ. ಜನರ ಮೂಢ ನಂಬಿಕೆಯನ್ನು ದೂರಗೊಳಿಸುವ ಪ್ರಥಮ ಪ್ರಯತ್ನವಾಗಿ, ಅದುವರೆಗೆ ಹರಿಜನರಿಗೆ ಪ್ರವೇಶ ನಿಷಿದ್ಧವಾಗಿದ್ದ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಪ್ರವೇಶಿಸುವದರೊಂದಿಗೆ ಆರಂಭವಾಗಬೇಕೆಂದು ಪತ್ರಿಕೆಯಲ್ಲಿ ಬರೆಯುತ್ತಾನೆ. ಆ ವಿಷಯ ಕಾಳ್ಗಿಚ್ಚಿನಂತೆ ಎಲ್ಲಡೆ ಹರಡುತ್ತದೆ. ಜಗನ್ನಾಥನ ಪರವಾಗಿ ಮತ್ತು ವಿರೋಧವಾಗಿ ಅಭಿಪ್ರಾಯಗಳು ವ್ಯಕ್ತವಾಗುತ್ತವೆ. ಅವಕಾಶದ ಸದುಪಯೋಗ ಮಾಡಿಕೊಳ್ಳಲು ರಾಜಕೀಯ ಪಕ್ಷವೊಂದು ಜಗನ್ನಾಥನ ಪರವಾಗಿ ನಿಲ್ಲುತ್ತದೆ. ಆದರೆ ಈ ಪ್ರಯತ್ನಕ್ಕೆ ಹರಿಜನರು ಸಿದ್ಧರಿದ್ದಾರೆಯೇ? ಈ ಪ್ರಯತ್ನ ಜಗನ್ನಾಥ ಬಯಸುವ ಬದಲಾವಣೆ ಸಮಾಜದಲ್ಲಿ ತರಲು ಸಾಧ್ಯವಾಗುವುದೇ? ಅದನ್ನು ಈ ಕಾದಂಬರಿಯನ್ನು ಓದಿ ನೀವೇ ತಿಳಿದುಕೊಳ್ಳಿ.

೧೯೭೩ ರಲ್ಲಿ ಪ್ರಥಮ ಬಾರಿಗೆ ಮುದ್ರಣಗೊಂಡ ಈ ಕಾದಂಬರಿಯ ವಿಷಯ ವಸ್ತು ಇಂದಿನ ತಲೆಮಾರಿಗೆ ಹಳೆತು ಎನಿಸಬಹುದು. ಆದರೆ ಲೇಖಕರ ಶೈಲಿ ಮತ್ತು ಸಾಹಿತ್ಯ ಅನುಭವ ಈ ಪುಸ್ತಕದಲ್ಲಿ ಅನಾವರಣಗೊಂಡು ಒಂದು ಉತ್ತಮ ಓದು ಎನಿಸುತ್ತದೆ.
-0-

The story begins with Jagannatha, son of a landlord, who had been to England for higher studies returning to his native Bharathipura. Bharathipura is a village situated in the western hills of Karnataka, famous for it's temple. All the village residents are devotees of Lord Manjunatha. All castes and classes are fearful of the God. A visit to temple by President of India had made the temple and Lord Manjunatha even more popular and acceptable across the regions and religions attracts even higher number of devotees to the place.

Jagannatha, who is on the path of self-discovery, has socialistic bent of mind too. He does not find comfort in remaining a landlord and protecting and growing his assets. He wants to bring in a meteoric change in the society he lives in. He wants the thinking, lifestyle and the way people of Bharathipura lead their life to change for better. He thinks it has to start with Harijan or the backward class people. And he strongly believes that as long as common people fear Lord Manjunatha and hold him responsible for what happens in their life, good and bad but not themselves, their lives would not change. For breaking this belief he plans to take Harijan into Lord Manjunatha’s temple by breaking the tradition followed from old ages. He writes to newspapers about his plan and the message spreads across. It attracts both support and criticism. An opportunistic political party joins hands with Jagannatha. But are Harijan ready for this? Can this really bring in the change Jagannatha expects? Read this novel to find out yourself.

This novel was first published in 1973, so the subject matter may seem old to the readers of the current times but the gripping style and literary capabilities of the author are amusing and makes the novel a good read.

No comments:

Post a Comment