Tuesday, November 11, 2014

ಪುಸ್ತಕ ಪರಿಚಯ: ಹುಚ್ಚು ಮನಸಿನ ಹತ್ತು ಮುಖಗಳು (ಶಿವರಾಮ ಕಾರಂತ)

ಇದು 'ಕಡಲ ತಡಿಯ ಭಾರ್ಗವ' ಎನಿಸಿಕೊಂಡಿರುವ ಶಿವರಾಮ ಕಾರಂತರ ಆತ್ಮ ಚರಿತ್ರೆ. ಈ ಪುಸ್ತಕದಲ್ಲಿ ಅವರು ತಮ್ಮ ಜೀವನದ ಬಹು ಮುಖ್ಯ ಘಟ್ಟಗಳನ್ನು ಮೆಲುಕು ಹಾಕಿ, ತಾವು ಸಾಗಿ ಬಂದ ಹಾದಿಯನ್ನು ವಿಶ್ಲೇಸಿಸುತ್ತ, ತಮ್ಮ ಬದುಕು ಹಾಗೂ ವ್ಯಕ್ತಿತ್ವ ರೂಪುಗೊಂಡ ಬಗೆಯನ್ನು ಅನಾವರಣಗೊಳಿಸುತ್ತ ಹೊಗುತ್ತಾರೆ.

ಅಪರಿಮಿತ ಕುತೂಹಲ ತುಂಬಿದ, ಜೀವನ್ಮುಖಿಯಾದ ಒಬ್ಬ ವ್ಯಕ್ತಿ ಜಗತ್ತಿನ ಅನ್ವೇಷಣೆಗೆ ತೊಡಗಿದಾಗ, ಆತ ಹಲವಾರು ವಿಷಯಗಳಲ್ಲಿ ಸುಲಭದಲ್ಲಿ ಹಿಡಿತ ಸಾಧಿಸುತ್ತ, ಸಾಹಿತ್ಯ, ಸಂಗೀತ, ನೃತ್ಯಗಳನ್ನು ಒಲಿಸಿಕೊಂಡು, ಇತಿಹಾಸ, ರಾಜಕೀಯ, ತತ್ವಶಾಸ್ತ್ರಗಳಲ್ಲಿ ಪ್ರೌಢಿಮೆ ತನ್ನದಾಗಿಸಿಕೊಂಡು, ಜಗತ್ತಿನ ಉದ್ದಗಲಕ್ಕೂ ಅಲೆಯುತ್ತಾ, ನಾನಾ ಸಂಸ್ಕೃತಿಗಳ, ವಿವಿಧ ವ್ಯಕ್ತಿತ್ವಗಳ ಪರಿಚಯ ಮಾಡಿಕೊಳ್ಳುತ್ತ, ಅದುವರೆಗೂ ಜನ ಗಮನಿಸದಂತ ವಿಷಯಗಳನ್ನು ಗ್ರಹಿಸುತ್ತಾ ಸಾಗುತ್ತಾನೆ. ಅವನ ಜ್ಞಾನದ ಪರಿಮಿತಿ ವಿಸ್ತಾರಗೊಳ್ಳುತ್ತ, ಅವನು 'ನಡೆದಾಡುವ ಜ್ಞಾನಕೋಶ' ಎನಿಸಿಕೊಳ್ಳುತ್ತಾನೆ.

ಒಬ್ಬ ಬರಹಗಾರ ತನ್ನ ಜೀವನ ಅನುಭವದ ತಳಹದಿಯ ಮೇಲೆ, ತನ್ನ ಕಥೆ, ಕಾದಂಬರಿಯ ಪಾತ್ರಗಳನ್ನು ಸೃಷ್ಟಿಸುತ್ತಾನೆ. ಬರಹಗಾರನ ಬದುಕು ಎಷ್ಟು ವಿಸ್ತಾರವಾಗಿರುತ್ತದೋ ಅಷ್ಟು ಅವನ ಕೃತಿಗಳು ಸಂಪತ್ದ್ಭರಿತ ವಾಗಿರುತ್ತವೆ. 'ಚೋಮನ ದುಡಿ' ಯಿಂದ 'ಮೂಕಜ್ಜಿಯ ಕನಸು'  ವರೆಗಿನ ಕಾದಂಬರಿಗಳಲ್ಲಿ ಕಾಣ ಬರುವ ಪಾತ್ರಗಳ ವೈವಿಧ್ಯತೆಗಳು, ಕಥೆಯ ಸಾರ, ಅವುಗಳ ಕರ್ತೃವಿನ ಜೀವನಾನುಭವ ಸೂಚಿಸುತ್ತವೆ. ಬಹು ಮುಖ ಪ್ರತಿಭೆಯ, ಪ್ರತಿಯೊಂದನ್ನು ಪ್ರತಿಶೋಧನಗೆ, ತುಲನೆಗೆ ಒಳ ಪಡಿಸುವ ವ್ಯಕ್ತಿಗೆ, ಬರೆಯುವ ಕಲೆ ಸಹಜವಾಗಿ ಸಿದ್ದಿಸಿ ಬಂದಿತ್ತು. ಕಲೆಯ ಇತರೇ ಪ್ರಾಕಾರಗಳು ಈ ಸರಸ್ವತಿ ಪುತ್ರನಲ್ಲಿ ಮಿಳಿತಗೊಂಡಿದ್ದವು. ಶಿವರಾಮ ಕಾರಂತರು ಕಾಲೇಜು ಪದವಿ ಪಡೆಯದಿದ್ದರೂ, ಎಂಟು ವಿಶ್ವ ವಿದ್ಯಾನಿಲಯಗಳಿಂದ ಗೌರವ ಪೂರ್ವಕ ಪ್ರಧಾನ ಮಾಡಿದಂತ ಡಾಕ್ಟರೇಟ್ ಪದವಿಗಳು, ಅವರ ಬೌದ್ಧಿಕ ಆಳ ಮತ್ತು ಸಾಹಿತ್ಯ ಸಾಧನೆಗಳನ್ನು ಎತ್ತಿ ಹಿಡಿಯುತ್ತವೆ.

ಶಿವರಾಮ ಕಾರಂತರ ಜೀವನ ಚರಿತ್ರೆ ತಿಳಿದುಕೊಳ್ಳಲು ಆಸಕ್ತಿ ಇರುವವರಿಗೆ ಅವರದೇ ಬರವಣಿಗೆ ಇರುವ ಈ ಪುಸ್ತಕ ಉತ್ತಮ ಆಯ್ಕೆ. ಅವರ ಕಾದಂಬರಿಗಳಲ್ಲಿ ಕಂಡು ಬರುವ ಜೀವನ ಸ್ಪೂರ್ತಿ, ಈ ಪುಸ್ತಕದ ಉದ್ದಕ್ಕೂ ಕಾಣಬಹುದು. ಕಾರಂತರು ಈ ಪುಸ್ತಕಕ್ಕೆ 'ಹುಚ್ಚು ಮನಸಿನ ಹತ್ತು ಮುಖಗಳು' ಎಂದು ಹೆಸರಿಟ್ಟರೂ, ನನ್ನ ಪ್ರಕಾರ ಕನ್ನಡ ನಾಡು ಕಂಡ ಹತ್ತು ಪ್ರತಿಭಾನ್ವತರಲ್ಲಿ ಅವರು ಒಬ್ಬರು.

-0-

This is the autobiographical work of veteran writer Shivaram Karanth. In this book he revisits the major milestones of his long and fulfilling life.

When a curious person begins exploring the life, he quickly learns the subject of his interest and moves to another (Literature, Music, Dance, History, Politics, Philosophy and so on), travels from one place to another (all over the world), meets variety of people, witnesses strange incidents and observes what many others overlooked. As the repository of knowledge gets bigger and bigger, he becomes a ‘Walking Encyclopedia’.


A writer, a novelist in particular, creates characters for his fictional work from his own life experiences. Wider the experience of the writer, richer is the novel. From ‘Chomana Dudi’ to award winning ‘Mookajjiya Kanasugalu’ characters and plot of the novels show the breadth and depth of life experiences of their creator. For the multi-talented, well-traveled, exploratory nature person, writing came naturally as a form of creative expression but he was equally successful in other forms of arts as well. Shivaram Karnath did not have a college degree, but the honorary Ph. D’s from at least 8 universities were more of a tribute to his intellectual depth and literary achievements.


For those who are interested in knowing the making and personal life of Shivaram Karanth, this book serves best in his own words. Like in his fictional works, one can observe presence of the life force throughout the length of this autobiography. Though this book is named ‘Ten Faces of a Crazy Mind’, I think Shivaram Karnath is one of the ten wisest men Karnataka has seen.

2 comments: