Tuesday, August 2, 2016

ದಾಹ ತೀರಿಸೇ ಮಹಾದಾಯಿ

ಅಂಕಿ-ಅಂಶಗಳು

ಕರ್ನಾಟಕ
ಗೋವಾ
ಮಹಾದಾಯಿ ನದಿ ಉಗಮ
ಭೀಮಗಢಕರ್ನಾಟಕ

ಉದ್ದ (ಕಿ.ಮೀ)
29
52
ನೀರು ಸಂಗ್ರಹ (ಟಿ.ಎಂ.ಸಿ)
44
176
ಸಮುದ್ರಕ್ಕೆ ಹರಿದು ಹೋಗುತ್ತಿರುವ ನೀರು (ಟಿ.ಎಂ.ಸಿ)

200
ಕಳಸಾ-ಬಂಡೂರಿ ಕುಡಿಯುವ ನೀರು ಯೋಜನೆ (ಟಿ.ಎಂ.ಸಿ)
7.56

ಅವಶ್ಯಕತೆ
(ಕರ್ನಾಟಕದಲ್ಲಿ ಸಂಗ್ರಹಗೊಂಡಿದ್ದು ಕರ್ನಾಟಕದ ಉಪಯೋಗಕ್ಕೆ)
17%(Data Source: https://en.wikipedia.org/wiki/Mandovi_River)

ಇದೆಯೇ ಪರಿಸರಕ್ಕೆ ಹಾನಿ?
ಸಮುದ್ರಕ್ಕೆ ಹರಿದು ಹೋಗುತ್ತಿರುವ ನೀರು 200 ಟಿ.ಎಂ.ಸಿ. ಯಲ್ಲಿ ಕುಡಿಯುವ ನೀರಿಗಾಗಿ ಬಳಕೆಯಾಗುವ ಪ್ರಮಾಣ ಕೇವಲ 7.56 ಟಿ.ಎಂ.ಸಿ. ಮಾತ್ರ. ನಾಲ್ಕು ಪ್ರತಿಶತ (೪%) ನೀರು, ಸಮುದ್ರಕ್ಕೆ ಕಡಿಮೆ ಹರಿದು ಹೋದರೆ ಪರಿಸರಕ್ಕೆ ಯಾವ ಹಾನಿಯಾದೀತು?

ಹಾಗಾದರೆ ಯಾರಿದಕ್ಕೇ ಅಡ್ಡಿ?
ನೆರೆ ರಾಜ್ಯದ ಸಾಮಾನ್ಯ ಜನತೆ ಕುಡಿಯುವ ನೀರಿನ ಯೋಜನೆಗೆ ಪ್ರತಿರೋಧ ನಡೆಸರು. ಆದರೆ ಅವರ ಜೊತೆ ಸರಿಯಾದ ರೀತಿಯ ಮಾಹಿತಿ ಸಂಹವನೆಯ ಅವಶ್ಯಕತೆ ಇದೆ.  ಎಲ್ಲಕಿಂತ ಮುಖ್ಯವಾಗಿ ಅಲ್ಲಿಯ ರಾಜಕಾರಣಿಗಳಿಗೆ, ನಾವು ಕೇಳುತ್ತಿರುವುದು ಸಹಾಯ ಅಲ್ಲ ಬದಲಿಗೆ ಅದು ನಮ್ಮ ಹಕ್ಕು ಎನ್ನುವ ಸಂದೇಶ ತಲುಪಬೇಕು.

ಅದು ಯಾರ ಕರ್ತವ್ಯ?
ಅದು ನಮ್ಮ ನಾಯಕರು, ನಮ್ಮ ಜನ ಪ್ರತಿನಿಧಿಗಳು ಮಾಡಬೇಕಾದ ಕೆಲಸ.

No comments:

Post a Comment