ಮಾಗಿದಂತೆಲ್ಲ ಅಭಿಪ್ರಾಯಗಳು ಬದಲಾಗುತ್ತ ಹೋಗುತ್ತವೆ. ದುಡ್ಡು, ಜನಪ್ರಿಯತೆ, ಸ್ಥಾನ-ಮಾನಗಳ ಸೆಳೆತ ಕಡಿಮೆಯಾದಂತೆ ಮೂಲ ಪ್ರಶ್ನೆ ಹುಟ್ಟುತ್ತದೆ. ಜೀವನದ ಸಾರ್ಥಕತೆ ಏನು? ಅದು ನಿಮ್ಮ ಕುಟುಂಬದ ಅಥವಾ ಸಮಾಜದ ಒಳಿತಿಗಾಗಿ ದುಡಿಯುವದೋ? ಎಲ್ಲ ಆಸೆಗಳನ್ನು ಮೀರಿ ಸನ್ಯಾಸ ಸ್ವೀಕರಿಸುವದೋ? ಸ್ವಾರ್ಥಕ್ಕೆ ಒಳಗಾಗದ ಯಾವುದೇ ಕೆಲಸವಾದರೂ ಆದಿತೋ? ಯಾವುದು ಜೀವನದ ಸಾರ್ಥಕತೆ?
ಪ್ರಾಣಿ-ಪಕ್ಷಿಗಳನ್ನು ಗಮನಿಸಿ ನೋಡಿ. ಅವು ಯಾವುದೇ ಧರ್ಮ, ನ್ಯಾಯ, ನೀತಿಗಳ ಬಗ್ಗೆ ಚಿಂತಿಸುವುದಿಲ್ಲ. ಅವುಗಳಿಗೆ ದುಡ್ಡಿನ ಉಪಯೋಗ ಗೊತ್ತಿಲ್ಲ. ದೇವರ ಗೊಡವೆ ಬೇಕಿಲ್ಲ. ನ್ಯಾಯ-ಅನ್ಯಾಯಗಳ ಪರಾಮರ್ಶೆಯ ಅಗತ್ಯವಿಲ್ಲ. ಹಾಗಾದರೆ ಯಾರ ಜೀವನ ಆನಂದಮಯ? ತತ್ವಶಾಸ್ತ್ರದ ಜ್ಞಾನಮಯಿ ಮನುಷ್ಯನದೋ ಅಥವಾ ಆ ಕ್ಷಣ-ಕ್ಷಣದ ಬದುಕು ಸವಿಯುವ ಪ್ರಾಣಿ ಪಕ್ಷಿಗಳದೋ? ಯಾರ ಜೀವನ ಹೆಚ್ಚು ಸಾರ್ಥಕ?
ಮನುಷ್ಯರನ್ನು ಮನುಷ್ಯರಿಗೆ ಮಾತ್ರ ಹೋಲಿಕೆ ಮಾಡಬೇಕು ಎಂದಾದರೆ, ಮತ್ತೆ ಅದೇ ಪ್ರಶ್ನೆ ನನ್ನದು. ಯಾರ ಜೀವನ ಹೆಚ್ಚು ಸಾರ್ಥಕ? ಹಿಂದೆ ಬೆಟ್ಟ ಗುಡ್ಡಗಳಲ್ಲಿ ವಾಸಿಸುತ್ತ, ಬೇಟೆಯಾಡಿ ಬದುಕುತ್ತಿದ್ದ ಆದಿ ವಾಸಿ ಜನಾಂಗದವರೋ, ಅಥವಾ ನಂತರ ವಿಕಾಸಗೊಂಡು ಕೃಷಿ ಮಾಡುತ್ತಾ, ಸಾಕು ಪ್ರಾಣಿಗಳನ್ನು ತನ್ನ ಹಿತಕ್ಕೆ ಬಳಸುತ್ತ ಬೆಳೆದ ಸಮಾಜವೊ ಅಥವಾ ಇಂದಿನ ಆಧುನಿಕ ಜಗತ್ತಿನಲ್ಲಿ ವಿದ್ಯುತ್ ಅನ್ನು ತನ್ನ ಆಳಾಗಿ, ವಿಧ ವಿಧದ ಉಪಕರಣಗಳನ್ನು ತನ್ನ ಶ್ರಮಕ್ಕೆ ಪೂರಕವಾಗಿ ಬಳಸಿಕೊಂಡು, ಆರಾಮದಾಯಕ ಎನ್ನುವಂಥ ಜೀವನ ನಡೆಸುವ ಈಗಿನ ಪೀಳಿಗೆಯ ಮನುಷ್ಯನದ್ದೋ? ಯಾರು ಹೆಚ್ಚು ನೆಮ್ಮದಿಯಾಗಿದ್ದರು?
ಆಯಾ ಕಾಲಕ್ಕೆ ತಕ್ಕಂತೆ ಸಮಸ್ಯೆಗಳ ರೂಪ ಬೇರೆ ಇದ್ದಿತಿನೋ? ಗುಹೆಗಳಲ್ಲಿ ಗೆರೆಗಳಿಂದ ಗೀಚಿದ ಆದಿ ಮಾನವನಿಗೂ, ಇಂದಿಗೆ ವಾಸ್ತವಿಕತೆಗೆ ಹತ್ತಿರವಾಗಿರುವ ಬಹು ವರ್ಣದ ಚಿತ್ರ ಬಿಡಿಸುವ ಕಲಾವಿದನಿಗೂ ಎಲ್ಲಿಯ ಹೋಲಿಕೆ ಎನ್ನುವಿರಾ? ಆದರೆ ನನ್ನ ಪ್ರಶ್ನೆ ಕುಶಲತೆ, ಜಾಣ್ಮೆ, ನೈಪಣ್ಯತೆಯದಲ್ಲ. ಸಾರ್ಥಕತೆಯದು.
ಆಲ್ಬರ್ಟ್ ಐನ್ಸ್ಟೀನ್ ವಿಜ್ಞಾನದಲ್ಲಿ ಸಾಧಿಸುದ್ದು ಬಹಳಷ್ಟು ಆದರೆ ಅವರು ಅವರ ಹೆಂಡತಿಯನ್ನು ಜೀವನ ಪೂರ್ತಿ ಕಾಡಿದ್ದು ಅವರ ಜೀವನವನ್ನು ಸಾರ್ಥಕಗೊಳಿಸುತ್ತದೆಯೇ? ಅಂಬಾನಿಗಳ ಶ್ರೀಮಂತಿಕೆ ಅಪರಿಮಿತ ಆದರೆ ಅದರಿಂದ ಸಮಾಜಕ್ಕೆ ಆದ ಉಪಯೋಗ ಅಷ್ಟರಲ್ಲೇ ಇದೆ ಎಂದರೆ ಅವರ ಜೀವನದ ಸಾರ್ಥಕತೆ ಸಾಮಾನ್ಯ ಮನುಷ್ಯನ ಜೀವನಕ್ಕಿಂತ ಹೆಚ್ಚಿನದೋ? ಒಬ್ಬ ಮನುಷ್ಯ ಒಂದು ರಂಗದಲ್ಲಿ ಪ್ರವೀಣನಾಗಿದ್ದು, ಇನ್ನೊಂದರಲ್ಲಿ ತೀರಾ ಕಳಪೆ (ಇವರ ಜೀವನಕ್ಕೆ ಬೆಂಕಿ ಬೀಳಲಿ) ಎನ್ನುವಂತಿದ್ದರೆ, ಅವರು ಜೀವನದ ಸಾರ್ಥಕತೆ ಕಂಡುಕೊಳ್ಳುವುದು ಎಲ್ಲಿ?
ಈ ಸಾರ್ಥಕತೆಯ ಹುಡುಕಾಟ ಮರೀಚಿಕೆಯ ಬೆನ್ನತ್ತಿದಂತೆ ಅನಿಸುತ್ತದೆ. ಕಾಣಿಸಿದಂತಾದರೂ, ಕೈಗೆ ದೊರಕದು. ಅದೇ ಮನುಷ್ಯ ವಿಕಾಸದ ಗುಟ್ಟು ಇದ್ದರು ಇರಬಹುದು. ಆದರೆ ನನಗೆ ಈ ಸಾರ್ಥಕತೆಯ ಪ್ರಶ್ನೆಯೇ ನಿರರ್ಥಕ ಅನಿಸುತ್ತದೆ.