Monday, February 11, 2019

Visit to Ilkal
ಶ್ರೀ ವಿಜಯ ಮಹಾಂತ ಸ್ವಾಮಿಗಳ ಗದ್ದುಗೆ
ಚಿತ್ತರಗಿಯ ಚರತಾತ 
ಇಳಕಲ್ಲ ಪುರ ವಿರತ 
ಆದಿ ಅಂತ್ಯ ರಹಿತ 
ಶ್ರೀ ವಿಜಯ ಮಹಾಂತ


ಉತ್ತರ ಕರ್ನಾಟಕದ ನೆಲದಲ್ಲಿ ರಾಜ ಮಹಾರಾಜರುಗಳು ಸಾಧಿಸಿದ್ದಕ್ಕಿಂತ ಹೆಚ್ಚಿನ ಸಾಧನೆ ಮಾಡಿದ್ದು ಇಲ್ಲಿನ ಸಾಧು-ಸಂತರು. ಇವರು ಕಟ್ಟಿದ್ದು ಕೋಟೆ-ಅರಮನೆಗಳಲ್ಲ. ಬದಲಿಗೆ ಸಮಾಜದ ಹಸಿವು ನೀಗಿಸುತ್ತ, ಬಡವರ ವಿದ್ಯೆ- ಶಿಕ್ಷಣದ ಅಗತ್ಯಗಳನ್ನು ಪೂರೈಸುತ್ತಾ, ಬದುಕಿಗೆ ಮಾರ್ಗದರ್ಶನ ನೀಡುವ ಸಂಸ್ಥೆಗಳನ್ನು. ಹಾಗಾಗಿಯೇ ಇವು ರಾಜ ಮನೆತನಗಳಂತೆ ಕಾಲನ ವಿನಾಶಕ್ಕೊಳಗಾಗದೆ, ಇಂದಿಗೂ ಜೀವಂತವಾಗಿವೆ. ಇದಕ್ಕೆ ಇಳಕಲ್ ಸಂಸ್ಥಾನ ಒಂದು ಉದಾಹರಣೆ. ಬಸವ ತತ್ವ ಸಾರುವ ಈ ವಾಕ್ಯ ಇಂಥ ಸಂಸ್ಥೆಗಳ ತಳಹದಿ ಎಷ್ಟು ಭದ್ರವಾಗಿದೆ ಎಂಬುದರ ಸಂಕೇತ.

Sunday, February 3, 2019

Who is responsible for Mirage crash?

In the last week, a trainer Mirage Aircraft crashed at HAL Airport in Bangalore killing its two pilots. (Link: https://timesofindia.indiatimes.com/city/bengaluru/2-pilots-killed-as-upgraded-mirage-trainer-crashes-after-takeoff/articleshow/67799191.cms)

This Aircraft was on a test ride out of the factory after its upgrade. It failed to take off properly. What went wrong is not known yet.  Though the newspapers report that a detailed inquiry is ordered, I wonder why neither HAL nor Indian Air Force took responsibility and apologize to the society for failing in their duty? Are they waiting for final report to fix a blame on one party?

Though they will formally make someone a scapegoat, this incident raises more questions. Is HAL doing the right job of inspecting before they let the aircraft hit the runway? Why IAF is not furious for losing both Aircraft and its finest men? Why does not defense ministry pay attention to this?

If we let this pass as one-off situation, it is going to haunt us again and again. Tax payers fund the Govt. to take care of country's defense. And when an expensive aircraft, worth a few hundred crores crashes and two of bright young dedicated men lose lives, no one comes forward accepting the responsibility and promising to correct the mistake. Will it motivate the new generation to join IAF? What kind of credibility HAL sports? Why does Govt. remain tolerant of both? If no one pays for it, how things will change? Mera Bharat Mahan.

Saturday, January 19, 2019

ಸ್ಮಾರ್ಟ್ ಫೋನ್ ವ್ಯಸನಿ: ಕಲ್ಪನಾ ಜೀವಿ ಮನುಷ್ಯ

ನಾವು ಸಿನೆಮಾಗೆ ಏಕೆ ಹೋಗುತ್ತೇವೆ ಹೇಳಿ? ಮೂರು ತಾಸು ಮೈ ಮರೆತು, ಕಾಲ್ಪನಿಕ ಕಥೆಯಲ್ಲಿ, ಅದರ ಪಾತ್ರಗಳ ಜೊತೆ ಬೆರೆತು, ಭಾವನೆಗಳಲ್ಲಿ ಮುಳುಗಿ, ವಾಸ್ತವಿಕತೆಯನ್ನು ಮರೆಯುವುದೋಸ್ಕರ ಅಲ್ಲವೇ? ಹಾಗೆಯೇ ಪ್ರವಾಸ ಮಾಡುವುದೇತಕ್ಕೆ ಹೇಳಿ? ಒಂದೇ ಊರಿನ, ಪ್ರತಿನಿತ್ಯದ ವಾಡಿಕೆ ಬದುಕಿನಿಂದ ಹೊರ ಬಂದು, ಹೊಸ ಹೊಸ ಅನುಭವಗಳು ಹೊಂದುವುದಕ್ಕೆ ತಾನೇ? ದಿನ ನಿತ್ಯದ ಸಂಗತಿಗಳಲ್ಲಿ, ಹಾಗು-ಹೋಗುಗಳಲ್ಲಿ, ಮನುಷ್ಯನಿಗೆ ಹೊಸತೇನು ಕಾಣ ಸಿಗದು. ಅದಕ್ಕೆ ಅವನು ಕಲ್ಪನಾ ಲೋಕದ ಸೆಳೆತಕ್ಕೆ ಸಿಕ್ಕುತ್ತಾನೆ. ಯಾವಾಗ ಸಾಧ್ಯವೋ ಆವಾಗ, ವಾಸ್ತವಿಕತೆಗೆ ಕಡಿಮೆ ಒತ್ತು ಕೊಟ್ಟು, ತನ್ನ ಸುತ್ತ ಇರಲಾರದ ಜಗತ್ತಿಗೆ, ಬದುಕಿಗೆ ಹೆಚ್ಚಿನ ಮಹತ್ವ ಕೊಡತೊಡಗುತ್ತಾನೆ.

ಬಹುಶ ಜ್ಯೋತಿಷ್ಯ ಶಾಸ್ತ್ರ ಜನಪ್ರಿಯತೆಗೆ ಬಂದದ್ದು ಇದೇ ಕಾರಣಕ್ಕೆ ಏನೋ? ಮುಂದೆ ಬರಲಿರುವ ದಿನಗಳು ತರುವ ಆಶಾದಾಯಕತೆ, ಈ ಕ್ಷಣದ ಬದುಕಿಗೆಲ್ಲಿದೆ? ಧನ ಲಾಭ ಎಂದು ಜ್ಯೋತಿಷ್ಯ ಹೇಳಿದರೆ  ಅಥವಾ ಗಿಳಿ ಶಾಸ್ತ್ರ ಉಲಿದರೆ, ಅದು ಎಂಥ ಬಡವನಲ್ಲಿಯಾದರು ಅರೆ ಕ್ಷಣದ ಉಲ್ಲಾಸ ಮೂಡಿಸದೆ ಇರದು. ಇದು ಮನುಷ್ಯನು ವಾಸ್ತವದಲ್ಲಿ ಬದುಕುವದಕ್ಕಿಂತ, ಭವಿಷ್ಯ ತರುವ ಕಲ್ಪನೆ ಹೆಚ್ಚು ಇಷ್ಟ ಪಡುವದನ್ನು ಸಾಬೀತು ಪಡಿಸುತ್ತದೆ.

ಜ್ಯೋತಿಷ್ಯ ಕೆಲ ಕ್ಷಣ ಮೈ ಮರೆಸಿದರೆ, ಸಿನೆಮಾ ಅದನ್ನು ಕೆಲವು ತಾಸುಗಳವರೆಗೆ ಮಾಡಬಲ್ಲದು. ಒಂದು ಒಳ್ಳೆಯ ಪ್ರವಾಸ ಕೆಲ ದಿನಗಳಿಗೆ ನಿಮ್ಮನ್ನು ಉಲ್ಲಾಸಮಯ ಭಾವನೆಯಲ್ಲಿಡಬಹುದು. ಆದರೆ ಹೊಸ ವಿಷಯ, ಹೊಸ ಹೊಸ ಅನುಭವಗಳು, ನಿಮಗೆ ಬೇಕೆಂದ ತಕ್ಷಣ ಸಿಗುವುವಂತಾದರೆ, ನೀವು ಅದರ ಉಪಯೋಗ ಮಾಡಿಕೊಳ್ಳುವುದು ಖಂಡಿತ ತಾನೇ?

ಅದು ಸಾಧ್ಯವಾಗಿದ್ದು ಮೂರು ತಂತ್ರಜ್ಞಾನದ ಮಿಲನಗಳಿಂದ. ಒಂದು ಇಂಟರ್ನೆಟ್ ಆವಿಷ್ಕಾರ. ಎರಡನೆಯದ್ದು ಸ್ಮಾರ್ಟ್ ಫೋನ್. ಮೂರನೆಯದ್ದು ಅದರಲ್ಲಿನ ವಾಟ್ಸ್ ಆಪ್, ಫೇಸ್ ಬುಕ್ ಮುಂತಾದ ಆಪ್ ಗಳಿಂದ. ದೂರದ ಊರಿನ ಆತ್ಮೀಯ ಗೆಳೆಯ ಇಂದು ದೂರದವನು ಅಲ್ಲವೇ ಅಲ್ಲ. ಬೆರಳ ತುದಿಯ ಮೆಸೇಜ್ ಸಾಕು. ಹಾಗೆಯೇ ಜಗತ್ತಿನ ಎಲ್ಲ ಮೂಲೆಗಳಲ್ಲಿ ನಡೆಯುವ ವರ್ತಮಾನ, ಅದಕ್ಕೆ ಜನರ ಸ್ಪಂದನೆ ಎಲ್ಲ ಟ್ವಿಟ್ಟರ್ ನಲ್ಲಿ ಉಂಟು.

ಹೀಗಿರುವಾಗ ಪಕ್ಕದ ಮನೆಯಲ್ಲಿ ನಡೆಯುವ ಅದೇ ಹಳೆ ಜಗಳ ಎಷ್ಟು ದಿನ ಕುತೂಹಲ ಉಳಿಸಿಕೊಂಡಿತು ಹೇಳಿ? ಕೈಯಲ್ಲಿ ಇರುವ ಸ್ಮಾರ್ಟ್ ಫೋನ್ ಅದನ್ನೆಲ್ಲ ಬದಲು ಮಾಡಿತು. ಬೇಸರ ತರುವ ಪಕ್ಕದ ಜನರಿಗಿಂತ, ನಾವು ಕಂಡರಿಯದ, ಎಲ್ಲೋ ನಡೆಯುವ ಸಂಗತಿಗಳು ಆಸಕ್ತಿ ಮೂಡಿಸುವುದಿಲ್ಲವೇ? ಅದಕ್ಕೆ ಈ ಪೀಳಿಗೆಯ ಜನ ಸ್ಮಾರ್ಟ್ ಫೋನ್ ಜೊತೆ, ತಮ್ಮ ಸುತ್ತ ಮುತ್ತಲಿನ ಜನರಿನ ಜೊತೆ ಕಳೆಯುವ ವೇಳೆಗಿಂತ ಹೆಚ್ಚು ಸಮಯವನ್ನು ಕಳೆಯುತ್ತಾರೆ.

ಅವರನ್ನು ದೂರುವ ಮುಂಚೆ ಸ್ವಲ್ಪ ವಿಚಾರ ಮಾಡಿ ನೋಡಿ. ಮನುಷ್ಯ ಸ್ವಭಾವತಃ ಕಲ್ಪನಾ ಜೀವಿ. ಅವನ ಕಲ್ಪನೆಯ ಸಾಮರ್ಥ್ಯವೇ, ಅವನನ್ನು ಮಂಗಗಳಿಂದ ಮನುಷ್ಯನಾಗಿ ವಿಕಾಸ ಹೊಂದುವಂತೆ ಮಾಡಿದ್ದು. ಈ ಸ್ಮಾರ್ಟ್ ಫೋನ್ ಅವನನ್ನು ದಿನದ ಹೆಚ್ಚು ಸಮಯ ವಾಸವಿಕತೆಯಿಂದ ದೂರ ಇರುವಂತೆ ಮಾಡಿದೆ. ಅದು ಒಳ್ಳೆಯದು ಅಥವಾ ಕೆಟ್ಟದು ಎನ್ನುವುದರ ವಿವೇಚನೆ ಈ ಬರಹದ್ದಲ್ಲ. ಬದಲಿಗೆ ಇಂತಹ ನಡವಳಿಕೆ ಮನುಷ್ಯನ ಸ್ವಭಾವದಲ್ಲಿ ಹಾಸು ಹೊಕ್ಕಾಗಿರುವುದನ್ನು ತೋರಿಸುವ ಪ್ರಯತ್ನ ಇದರದ್ದು. ಬರಿ ಈ ಪೀಳಿಗೆಯ ಜನರಲ್ಲ, ಗುಡ್ಡ, ಗವಿಗಳಲ್ಲಿ ವಾಸ ಮಾಡುತ್ತಿದ್ದ ಸಾವಿರಾರು ವರ್ಷ ಹಿಂದೆ ಬದುಕಿದ್ದ ಪೀಳಿಗೆ ಕೂಡ ಸ್ಮಾರ್ಟ್ ಫೋನ್ ದೊರಕಿದ್ದರೆ, ಅವರ ಜೀವನ ಶೈಲಿ ಕೂಡ ಇಂದಿನ ಪೀಳಿಗೆಯವರಿಗಿಂತ ಬೇರೆ ಇರುತ್ತಿರಲಿಲ್ಲವೇನೋ?

Sunday, December 16, 2018

Nehru was right. And Manmohan Singh and Modi too

Rich-poor divide

Have you thought why rich remain rich and poor remain poor? What drives this phenomenon? Let us see through few simple facts.

a. Access to education: If a child is born in a poor family, it’s parents do not have the affordability to send him/her to good school. Despite the talent and interests, higher education may not be possible for economic reasons.

b. Job and Income level: Without higher education, it is not easy to get a high paying job. Accepting a menial job would mean the income is not sufficient to get out of poverty zone.

c. Marriage and inheritance: A rich room is likely to get a match from the well to do family. That marriage will result in a union of two rich families. And they are likely to inherit the wealth of their parents. So, the cycle of rich becoming richer continues while for the poor gets trapped in vicious cycle of poverty.

So how do you create a level playing ground? Not at individual level but at the country level.

Creating a level playing ground for India

Nehru’s socialist approach: When India became independent, majority of the residents were poor and if left on own, things would not have changed. Nehru was a socialist. His Govt. was not a liberal one but that was what India needed. He taxed the rich as poor were not able to pay any, but he built Govt. machinery to help the poor. Not only primary education, IIT, IIM’s got built where the education fee structure was subsidized. Both poor and rich could have the same opportunity as the talent was the selection criteria and not the economical background. It needed to be so for few decades. At least until two generations got access to better education.

ManMohan Singh’s economic reforms: When you have a good number of people with good education, you should let them start businesses, support them by minimizing Govt. intervention. That’s what ManMohan Singh did. He ended the license raj. Gave liberty to businessmen who created the new wave of service industry which provided employment to the new generation of workforce.

Modi’s protectionist policies: With so much protection given to backward castes and the likes for a longer period since independence, at the disadvantage of General Merit class, someone had to revive the Hindu religion. Also, its farmers with efforts to double their incomes to catch up the with the rest. And carry out tough reforms like GST.

You might think I am pointing out only the good things each of these PM did. But think of Modi as first PM of India, it would not have worked well. Similarly, Nehru’s socialist policies in today’s world would have done more harm than help to India. But these happened in the ways beneficial to India. All these PM’s did good to India and did what was the need of the hour.

When I hear criticism of these PM's, it appears to me like we are forgetting the context these PM's operated in.

Saturday, December 15, 2018

ಸಾರ್ಥಕತೆ ಎಂಬ ನಿರರ್ಥಕತೆ

ಮಾಗಿದಂತೆಲ್ಲ ಅಭಿಪ್ರಾಯಗಳು ಬದಲಾಗುತ್ತ ಹೋಗುತ್ತವೆ. ದುಡ್ಡು, ಜನಪ್ರಿಯತೆ, ಸ್ಥಾನ-ಮಾನಗಳ ಸೆಳೆತ ಕಡಿಮೆಯಾದಂತೆ ಮೂಲ ಪ್ರಶ್ನೆ ಹುಟ್ಟುತ್ತದೆ. ಜೀವನದ ಸಾರ್ಥಕತೆ ಏನು? ಅದು ನಿಮ್ಮ ಕುಟುಂಬದ ಅಥವಾ ಸಮಾಜದ ಒಳಿತಿಗಾಗಿ ದುಡಿಯುವದೋ? ಎಲ್ಲ ಆಸೆಗಳನ್ನು ಮೀರಿ ಸನ್ಯಾಸ ಸ್ವೀಕರಿಸುವದೋ? ಸ್ವಾರ್ಥಕ್ಕೆ ಒಳಗಾಗದ ಯಾವುದೇ ಕೆಲಸವಾದರೂ ಆದಿತೋ? ಯಾವುದು ಜೀವನದ ಸಾರ್ಥಕತೆ?

ಪ್ರಾಣಿ-ಪಕ್ಷಿಗಳನ್ನು ಗಮನಿಸಿ ನೋಡಿ. ಅವು ಯಾವುದೇ ಧರ್ಮ, ನ್ಯಾಯ, ನೀತಿಗಳ ಬಗ್ಗೆ ಚಿಂತಿಸುವುದಿಲ್ಲ. ಅವುಗಳಿಗೆ ದುಡ್ಡಿನ ಉಪಯೋಗ ಗೊತ್ತಿಲ್ಲ. ದೇವರ ಗೊಡವೆ ಬೇಕಿಲ್ಲ. ನ್ಯಾಯ-ಅನ್ಯಾಯಗಳ ಪರಾಮರ್ಶೆಯ ಅಗತ್ಯವಿಲ್ಲ. ಹಾಗಾದರೆ ಯಾರ ಜೀವನ ಆನಂದಮಯ? ತತ್ವಶಾಸ್ತ್ರದ ಜ್ಞಾನಮಯಿ ಮನುಷ್ಯನದೋ ಅಥವಾ ಆ ಕ್ಷಣ-ಕ್ಷಣದ ಬದುಕು ಸವಿಯುವ ಪ್ರಾಣಿ ಪಕ್ಷಿಗಳದೋ? ಯಾರ ಜೀವನ ಹೆಚ್ಚು ಸಾರ್ಥಕ?

ಮನುಷ್ಯರನ್ನು ಮನುಷ್ಯರಿಗೆ ಮಾತ್ರ ಹೋಲಿಕೆ ಮಾಡಬೇಕು ಎಂದಾದರೆ, ಮತ್ತೆ ಅದೇ ಪ್ರಶ್ನೆ ನನ್ನದು. ಯಾರ ಜೀವನ ಹೆಚ್ಚು ಸಾರ್ಥಕ? ಹಿಂದೆ ಬೆಟ್ಟ ಗುಡ್ಡಗಳಲ್ಲಿ ವಾಸಿಸುತ್ತ, ಬೇಟೆಯಾಡಿ ಬದುಕುತ್ತಿದ್ದ ಆದಿ ವಾಸಿ ಜನಾಂಗದವರೋ, ಅಥವಾ ನಂತರ ವಿಕಾಸಗೊಂಡು ಕೃಷಿ ಮಾಡುತ್ತಾ, ಸಾಕು ಪ್ರಾಣಿಗಳನ್ನು ತನ್ನ ಹಿತಕ್ಕೆ ಬಳಸುತ್ತ ಬೆಳೆದ ಸಮಾಜವೊ ಅಥವಾ ಇಂದಿನ ಆಧುನಿಕ ಜಗತ್ತಿನಲ್ಲಿ ವಿದ್ಯುತ್ ಅನ್ನು ತನ್ನ ಆಳಾಗಿ, ವಿಧ ವಿಧದ ಉಪಕರಣಗಳನ್ನು ತನ್ನ ಶ್ರಮಕ್ಕೆ ಪೂರಕವಾಗಿ ಬಳಸಿಕೊಂಡು, ಆರಾಮದಾಯಕ ಎನ್ನುವಂಥ ಜೀವನ ನಡೆಸುವ ಈಗಿನ ಪೀಳಿಗೆಯ ಮನುಷ್ಯನದ್ದೋ? ಯಾರು ಹೆಚ್ಚು ನೆಮ್ಮದಿಯಾಗಿದ್ದರು?

ಆಯಾ ಕಾಲಕ್ಕೆ ತಕ್ಕಂತೆ ಸಮಸ್ಯೆಗಳ ರೂಪ  ಬೇರೆ ಇದ್ದಿತಿನೋ? ಗುಹೆಗಳಲ್ಲಿ ಗೆರೆಗಳಿಂದ ಗೀಚಿದ ಆದಿ ಮಾನವನಿಗೂ, ಇಂದಿಗೆ ವಾಸ್ತವಿಕತೆಗೆ ಹತ್ತಿರವಾಗಿರುವ ಬಹು ವರ್ಣದ ಚಿತ್ರ ಬಿಡಿಸುವ ಕಲಾವಿದನಿಗೂ ಎಲ್ಲಿಯ ಹೋಲಿಕೆ  ಎನ್ನುವಿರಾ? ಆದರೆ ನನ್ನ ಪ್ರಶ್ನೆ ಕುಶಲತೆ, ಜಾಣ್ಮೆ, ನೈಪಣ್ಯತೆಯದಲ್ಲ. ಸಾರ್ಥಕತೆಯದು.

ಆಲ್ಬರ್ಟ್ ಐನ್ಸ್ಟೀನ್ ವಿಜ್ಞಾನದಲ್ಲಿ ಸಾಧಿಸುದ್ದು ಬಹಳಷ್ಟು ಆದರೆ ಅವರು ಅವರ ಹೆಂಡತಿಯನ್ನು ಜೀವನ ಪೂರ್ತಿ ಕಾಡಿದ್ದು ಅವರ ಜೀವನವನ್ನು ಸಾರ್ಥಕಗೊಳಿಸುತ್ತದೆಯೇ? ಅಂಬಾನಿಗಳ ಶ್ರೀಮಂತಿಕೆ ಅಪರಿಮಿತ ಆದರೆ ಅದರಿಂದ ಸಮಾಜಕ್ಕೆ ಆದ ಉಪಯೋಗ ಅಷ್ಟರಲ್ಲೇ ಇದೆ ಎಂದರೆ ಅವರ ಜೀವನದ ಸಾರ್ಥಕತೆ ಸಾಮಾನ್ಯ ಮನುಷ್ಯನ ಜೀವನಕ್ಕಿಂತ ಹೆಚ್ಚಿನದೋ? ಒಬ್ಬ ಮನುಷ್ಯ ಒಂದು ರಂಗದಲ್ಲಿ ಪ್ರವೀಣನಾಗಿದ್ದು, ಇನ್ನೊಂದರಲ್ಲಿ ತೀರಾ ಕಳಪೆ (ಇವರ ಜೀವನಕ್ಕೆ ಬೆಂಕಿ ಬೀಳಲಿ) ಎನ್ನುವಂತಿದ್ದರೆ, ಅವರು ಜೀವನದ ಸಾರ್ಥಕತೆ ಕಂಡುಕೊಳ್ಳುವುದು ಎಲ್ಲಿ?

ಈ ಸಾರ್ಥಕತೆಯ ಹುಡುಕಾಟ ಮರೀಚಿಕೆಯ ಬೆನ್ನತ್ತಿದಂತೆ ಅನಿಸುತ್ತದೆ. ಕಾಣಿಸಿದಂತಾದರೂ, ಕೈಗೆ ದೊರಕದು. ಅದೇ ಮನುಷ್ಯ ವಿಕಾಸದ ಗುಟ್ಟು ಇದ್ದರು ಇರಬಹುದು. ಆದರೆ ನನಗೆ ಈ ಸಾರ್ಥಕತೆಯ ಪ್ರಶ್ನೆಯೇ ನಿರರ್ಥಕ ಅನಿಸುತ್ತದೆ.