Sunday, December 29, 2024

ದಿಲ್ಲಿ ಸುಲ್ತಾನರನ್ನು ಸೋಲಿಸಿದ್ದ ಕುಮಾರ ರಾಮ

ಉತ್ತರ ಕರ್ನಾಟಕದಲ್ಲಿ ಆಡು ಭಾಷೆಯಲ್ಲಿ ಯಾರನ್ನಾದರೂ ಹೀಗಳೆಯೇಬೇಕೆಂದರೆ ಆಡುವ ಮಾತು 'ಬಂದುಬಿಟ್ಟ, ಭಾರಿ ದೊಡ್ಡ ಕೋಮ್ರಮ'.  ಈ ಕೋಮ್ರಮ ನೇ ಕುಮಾರ ರಾಮ. ಇಲ್ಲಿಯ ಜನರಿಗೆ ಅವನಂಥ ಗಂಡುಗಲಿ ಇನ್ನಾರಿಲ್ಲ ಎನ್ನುವ ನಂಬಿಕೆ. ಅದು ಸುಮ್ಮನೆ ಬಂದುದು ಅಲ್ಲವಲ್ಲ.


ಕುಮಾರ ರಾಮ ಬರೀ ಕಂಪಿಲ ರಾಜ್ಯದ ರಾಜಕುಮಾರ ಅಷ್ಟೇ ಆಗಿರಲಿಲ್ಲ. ಅವನು ಧೈರ್ಯವೇ ದೇಹದ ರೂಪ ತಾಳಿ ಬಂದಂತಿದ್ದ. ಅವನ ಚೆಲುವಿಗೆ, ಅವನ ಸಾಹಸಕ್ಕೆ, ಯುದ್ಧ ಕೌಶಲ್ಯಗಳಿಗೆ ಮನಸೋತ ಕಾಕತಿಯ ದೊರೆ ಅವನಿಗೆ ಕುದುರೆ 'ಬೊಲ್ಲ' ನನ್ನ ಉಡುಗೊರೆಯಾಗಿ ಕೊಟ್ಟಿದ್ದ. ಕುಮಾರ ರಾಮನಿಗೆ ಅವನಷ್ಟೇ ಸಾಹಸ-ಧೈರ್ಯಗಳಿಂದ ಕಾದಾಡುವ ಸೇನೆ ಜೊತೆಗಿತ್ತು. ತನ್ನ ರಾಜ್ಯವನ್ನು ಹಲವು ಬಾರಿ ದಿಲ್ಲಿ ದೊರೆಗಳ ಧಾಳಿಯಿಂದ ಕಾಪಾಡುವ ಕುಮಾರ ರಾಮನ ಧೈರ್ಯ-ಸಾಹಸಗಳು, ರಣ ತಂತ್ರಗಳು ಅವನಿಗೆ ದೊಡ್ಡ ಹೆಸರನ್ನು ತಂದು ಕೊಟ್ಟವು. ಅದನ್ನು ಕೇಳಿದ ದಿಲ್ಲಿ ತುಘಲಕ್ ಸುಲ್ತಾನನ ಮಗಳು ಕೂಡ ಅವನನ್ನು ವರಿಸಲು ಇಷ್ಟ ಪಟ್ಟಿದ್ದಳು.  


ಅದು ೧೨ ನೇ ಶತಮಾನ. ವಿಜಯನಗರ ಸಾಮ್ರಾಜ್ಯ ಅಸ್ಥಿತ್ವಕ್ಕೆ  ಬರುವ ಮುಂಚೆ ಅದೇ ಪ್ರದೇಶದಲ್ಲಿ ಇದ್ದ ರಾಜ್ಯಕ್ಕೆ ದೊರೆ ಕಂಪಿಲರಾಯ. ಅವನ ಮಗನೆ ಕುಮಾರ ರಾಮ. ಇಂದಿನ ಕೊಪ್ಪಳ ಜಿಲ್ಲೆಯ ಗಂಗಾವತಿ ಹತ್ತಿರದ ಕಂಪ್ಲಿ, ಆನೆಗುಂದಿ ಮತ್ತು ಕುಮ್ಮಟದುರ್ಗದಲ್ಲಿ ಅವರು ನಿರ್ಮಿಸಿದ್ದ ಅವಶೇಷಗಳು ಉಳಿದಿವೆ. ಕುಮಾರ ರಾಮನ ಅರಮನೆ ಇದ್ದದ್ದು ಕುಮ್ಮಟ ದುರ್ಗದ ಬೆಟ್ಟದ ಮೇಲೆ. ಮೂರು ಸುತ್ತಿನ ಕೋಟೆ ಇಂದಿಗೆ ಹೆಚ್ಚು ಕಡಿಮೆ ನೆಲ ಸಮ ಆಗಿದೆ. ಆದರೂ ರೂಪು-ರೇಷೆಯ ಅಂದಾಜು ಸಿಗುತ್ತದೆ.


ಕಂಪಿಲ ರಾಜ್ಯಕ್ಕೆ ಇದ್ದ ದೊಡ್ಡ ಸಮಸ್ಯೆ ದಿಲ್ಲಿ ಸುಲ್ತಾನರ ಹಾವಳಿ. ಅದು ದಿಲ್ಲಿ ಸುಲ್ತಾನ ತುಘಲಕ  ತನ್ನ ಬಂಗಾರದ ಪಾದರಕ್ಷೆಗಳನ್ನು ಕಳಿಸಿ ಕಪ್ಪ-ಕಾಣಿಕೆ ಕೇಳುತ್ತಿದ್ದ ಕಾಲ. ಅವರ ದಬ್ಬಾಳಿಕೆಗೆ ಹಲವಾರು ರಾಜ ಮನೆತನಗಳು ಮೂಲೆಗುಂಪಾಗುತ್ತವೆ. ಆದರೆ ಕಪ್ಪ-ಕಾಣಿಕೆ ನೀಡಲೊಲ್ಲದ ಕುಮಾರ ರಾಮ ಆ ಬಂಗಾರದ ಪಾದರಕ್ಷೆಗಳನ್ನು ಮೆಟ್ಟಿ ನಿಲ್ಲುತ್ತಾನೆ. ಆ ಸುದ್ದಿ ದಿಲ್ಲಿ ಸುಲ್ತಾನರಿಗೂ ತಲುಪುತ್ತದೆ. ಅವರು ಕಳಿಸುವ ಸಣ್ಣ ಪ್ರಮಾಣದ ಸೈನ್ಯಗಳನ್ನು ಧೂಳಿಪಟ ಮಾಡಿ ಕಳಿಸುತ್ತಾನೆ ಕುಮಾರ ರಾಮ. ಮತ್ತೆ ಹೆಚ್ಚಿನ ಪಡೆಗಳು ಬಂದಾಗ ಅದು ಮತ್ತೆ ಪುನರಾವರ್ತನೆ ಆಗುತ್ತದೆ. ಕೊನೆಗೆ ಅಪಾರ ಪ್ರಮಾಣದ ಸೈನ್ಯ ಬಂದಾಗ ಕುಮಾರ ರಾಮ ಸೋಲುತ್ತಾನೆ, ಯುದ್ಧ ನಡೆದ ಪ್ರದೇಶದಲ್ಲಿ ಅವನ ತಲೆ ಕಡಿಯಲಾಗುತ್ತದೆ. ಆ ಜಾಗಕ್ಕೆ ಈಗ ತಲೇಖಾನ್ ಎಂದು ಹೆಸರು. ಅಲ್ಲಿಂದ ಅವನ ತಲೆ ದೆಹಲಿ ತಲುಪುತ್ತದೆ. ಅದೇ ಸಮಯಕ್ಕೆ ದೆಹಲಿಯಲ್ಲಿ ಕ್ಷಾಮ ಬಂದೊಗುತ್ತದೆ. ಸುಲ್ತಾನರು ಅವರ ಆಸ್ಥಾನ ಜ್ಯೋತಿಷಿಗಳು ಹೇಳಿದ ಹಾಗೆ ಕುಮಾರ ರಾಮನ ತಲೆಯನ್ನು ಮತ್ತೆ ವಾಪಸ್ಸು ಅನೆಗೊಂದಿಗೆ ಕಳಿಸುತ್ತಾರೆ. ಅಲ್ಲಿ ಅವನ ರುಂಡಕ್ಕೆ ಪೂಜಿಸಿ ಗುಡಿ ಕಟ್ಟಲಾಗುತ್ತದೆ. ಹೀಗೆ ಅವನ ಮುಂಡ ತಲೇಖಾನ್ ಗ್ರಾಮದಲ್ಲಿ (ಇಂದಿಗೆ ಮಸ್ಕಿ ತಾಲೂಕಿನಲ್ಲಿದೆ) ಆದರೆ ರುಂಡ ಆನೆಗೊಂದಿಯ ಹತ್ತಿರ ದೇವಸ್ಥಾನದಲ್ಲಿ ಅಂತ್ಯ ಸಂಸ್ಕಾರ ಕಾಣುತ್ತದೆ.


ದಿಲ್ಲಿಯ ಸುಲ್ತಾನರನ್ನು ಹಾಡಿ ಹೊಗಳುವ ಜನಕ್ಕೆ ಅವರಿಗೆ ಹಲವು ಬಾರಿ ಸೋಲಿನ ರುಚಿ ತೋರಿಸಿದ ಮತ್ತು ಅದೇ ಕಾರಣಕ್ಕೆ ಪ್ರಾಣ ತೆತ್ತ ಕನ್ನಡದ ಯೋಧ ಕುಮಾರ ರಾಮ ನೆನಪಾಗುವುದಿಲ್ಲ. ಕನ್ನಡಿಗರ ನಿರಭಿಮಾನವೇ ಇಷ್ಟು. ಆದರೂ ಇಂದಿಗೂ ಕುಮಾರ ರಾಮನ ಗುಡಿಗೆ ಪೂಜೆ ಸಲ್ಲುತ್ತದೆ ಎನ್ನುವುದೇ ನೆಮ್ಮದಿ. ಅವನ ಧೈರ್ಯ-ಸಾಹಸಗಳು ಅಪ್ರತಿಮ ಎಂದು ಕೊಂಡಾಡಲಾಗುತ್ತದೆ. ಅವನ ನಂತರ ಆ ತರಹದ ಅಪ್ರತಿಮ ವೀರ ಕನ್ನಡ ನಾಡಿನಲ್ಲಿ ಹುಟ್ಟಲೇ ಇಲ್ಲ. ಉಳಿದವರೆಲ್ಲ ''ಬಂದುಬಿಟ್ಟ, ಭಾರಿ ದೊಡ್ಡ ಕೋಮ್ರಮ" ಎಂದು ಬೈಸಿಕೊಳ್ಳಬೇಕಷ್ಟೆ.

Sunday, December 15, 2024

Bangalore Literature Festival 2024

Though it was a two days event, I could make my presence only on the second day. Packed with people, parallel running events, readers queued up to get signatures from their favorite authors all denoted it was indeed a festival to cherish.

My favorite part of the festival (which seems to be favorite of the most present too) were two authors - Sudha Murthy and William Dalrymple.

Sudha Murthy not only writes well, she is even better as a speaker. She can hold the audience focused on just one thing - her talk.

I have read Dalrymple and hold him with high regards for his knowledge of India. I have read and reread his books 'Nine Lives' and 'The Anarchy'. He can bring historical events alive through his dramatic oration.

Seeing them in person (and not on TV/Computer/Mobile screens) was a refreshing thing. Attending BLF is a day well spent for me.

Sudha Murthy doing her talking

Dalrymple talking about his latest book


Gandhi was here

Mahatma Gandhi was in Bangalore in 1927 for three months. He held a prayer meeting at this place, so says a memorial. It is located in the Hotel Ashoka premises. This hotel was built in the 1970's, so when Gandhi was here, this place probably hosted a Guest House.

(I visited Hotel Ashoka to attend Bangalore Literature Festival, and noticed this memorial. Picture credit belongs to the author)

Notice the name plate in the background

Description of memorial

Friday, November 29, 2024

Monday, November 4, 2024

ಏಕಾಂತ ಹುಟ್ಟಿಸುವ ಅರಿವು

ನವೆಂಬರ್ ತಿಂಗಳ ಚಳಿ. ಆಫೀಸ್ ಗೆ ಬೇಗ ಹೋಗಬೇಕೆಂದು ಇಟ್ಟುಕೊಂಡಿದ್ದ ಅಲಾರಾಂ ಹೊಡೆಯುವ ಮುನ್ನವೇ ನನಗೆ ಎಚ್ಚರವಾಗಿದೆ. ಮುಖಕ್ಕೆ ತಣ್ಣೀರು ಎರಚಿಕೊಳ್ಳುತ್ತೇನೆ. ಕತ್ತಲು ಹರಿದು ಬೆಳ್ಳನೆ ಬೆಳಗಾಗುವ ಹೊತ್ತಿಗೆಲ್ಲ ನನ್ನ ಬೈಕು ಗುರುಗುಟ್ಟತೊಡಗುತ್ತದೆ. ಬೆಚ್ಚಗೆ  ಹೊದ್ದು ಮಲಗುವುದು ಎಷ್ಟು ಸುಖವೊ ಅಷ್ಟೇ ಆನಂದ ಆ ಹೊತ್ತಿನಲ್ಲಿ ರಸ್ತೆಗೆ ಇಳಿಯುವುದು ಎನ್ನುವ ನನ್ನ ಹಿಂದಿನ ಅನುಭವ ಇಂದು ಮತ್ತೆ ಆಗತೊಡಗಿದೆ.  ರಸ್ತೆಯ ಮೇಲೆ ಅತಿ ಕಡಿಮೆ ಅನ್ನಿಸುವಷ್ಟು ವಾಹನಗಳು. ಕೆಂಪು ದೀಪ ಹೊತ್ತಿಕೊಂಡು ನಮಗೆ ನಿಲ್ಲಿ ಎಂದು ಆಜ್ಞೆ ಮಾಡಲು ಇನ್ನು ಸಮಯವಿದೆ. ಸಲೀಸಾಗಿ ನಾನು ಸಾಗತೊಡಗುತ್ತೇನೆ. ಬೆಂಗಳೂರು ವಿಶ್ವವಿದ್ಯಾಲಯ ಒಳಗಡೆ ರಸ್ತೆಯ ಮೇಲೆ ಜಾಗಿಂಗ್ ಮಾಡುತ್ತಿರುವ ಹಲವರು ನನಗಿಂತ ಜೀವನವನ್ನು ಹೆಚ್ಚಿಗೆ ಪ್ರೀತಿ ಮಾಡುವಂತೆ ಕಾಣುತ್ತಾರೆ. ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಪಾರ್ಕಿಂಗ್ ಪೂರ್ತಿ ಖಾಲಿ ಇದೆ. ಆದರೂ ಪ್ರತಿ ದಿನ ನಿಲ್ಲಿಸುವ ಜಾಗದಲ್ಲೇ ನನ್ನ ಗಾಡಿಯನ್ನು ನಿಲ್ಲಿಸುತ್ತೇನೆ. ಹಾಗೆ ಮೆಟ್ರೋದಲ್ಲಿ  ಕುಳಿತುಕೊಳ್ಳಲು ಜಾಗ ಸಿಗುವುದೋ ಇಲ್ಲವೋ ಎನ್ನುವ ಭಯವಿಲ್ಲ. ಮೆಟ್ರೋ ರೈಲಿನಲ್ಲಿ ಕುಳಿತು ಜೇಬಲ್ಲಿರುವ ಮೊಬೈಲ್ ತೆಗೆದು ಬರೆಯಲು ತೊಡಗುತ್ತೇನೆ.


ಓದುವದಕ್ಕೂ ಬರೆಯುವದಕ್ಕೂ ಏಕಾಂತ ಬೇಕೇ ಬೇಕು. ಆ ಏಕಾಂತ ರಸ್ತೆಯ ಮೇಲೆ ಹಾಗು ಪ್ರಯಾಣದಲ್ಲಿ ಸಿಕ್ಕಾಗ ಅಂದಿನ ಲಹರಿಯೇ ಬೇರೆ. ಓದುವುದು ನಮ್ಮನ್ನು ಏಕಾಂಗಿಗಳಾಗಿ ಮಾಡುತ್ತದೋ ಅಥವಾ ಏಕಾಂತ ನಮ್ಮನ್ನು ಓದಲು ಪ್ರೆರೇಪಿಸಿಸುತ್ತದೋ ಹೇಳುವುದು ಕಷ್ಟ. ಅವು ಒಂದಕ್ಕೊಂದು ಪೂರಕ. ಜೋಡಿ ಹಕ್ಕಿಗಳ ಹಾಗೆ, ಬೆಸೆದ ಹಾವುಗಳ ಹಾಗೆ, ಹೊಂದಿಕೊಂಡ ದಂಪತಿಗಳ ಹಾಗೆ. ಓದುವ ಮತ್ತು  ಲಹರಿ ಹುಟ್ಟಿಸಿದ ಭಾವ ಗಟ್ಟಿಗೊಂಡ ಮೇಲೆ ಮತ್ತೆ ಅವು ಅಕ್ಷರ ರೂಪ ತಾಳಿ ಹೊರ ಬರುವುದೇ ಬರವಣಿಗೆ. ಅದು ಬೇಡುವ ಏಕಾಗ್ರತೆ ಓದಿಗಿಂತ ಹೆಚ್ಚಿನದು. ಈ ಓದು-ಬರಹಕ್ಕಿಂತ ದೊಡ್ಡ ಮೆಟ್ಟಿಲು ಧ್ಯಾನ. ನಿಮ್ಮ ಓದು ಮುಗಿದಾಗ ಮತ್ತು ಬರೆಯುವ ಅವಶ್ಯಕೆತೆ ಇಲ್ಲದಾದಾಗ ಹುಟ್ಟಿಕೊಳ್ಳುವುದೇ ಧ್ಯಾನ. ಕಣ್ಣು ಮುಚ್ಚಿದರೂ ಮನಸ್ಸು ತೆರೆದೆಕೊಳ್ಳುತ್ತದೆಯಲ್ಲ. ಅದು ಹೇಳುವುದೆಲ್ಲ ಮುಗಿಸಿ ಇನ್ನ್ಯಾವ ತಗಾದೆ ಇಲ್ಲ ಎಂದಾದಾಗ ಆ ಜಾಗದಲ್ಲಿ ಶಾಂತಿ ಅವರಿಸಿಕೊಳ್ಳತೊಡಗುತ್ತದೆ. ಮತ್ತೆ ಕಣ್ಣು ತೆಗೆದು ನೋಡುತ್ತೇನೆ. ಸುತ್ತಲಿನ ಜನ ಭಾವನೆಗಳ ಒತ್ತಡದಲ್ಲಿ ಸಿಲುಕಿರಿವುದು ಸ್ಪಷ್ಟವಾಗಿಯೇ ಗೋಚರ ಆಗುತ್ತದೆ. 


ಲೌಕಿಕ  ಪ್ರಪಂಚದ ಹೊರ ನಿಂತು ನೋಡಿದರೆ ಯಾವ ಚಿಂತೆಯೂ ದೊಡ್ಡದಲ್ಲ. ಆದರೆ ಅದು ಸುಲಭವೆ? ಅಲ್ಲಮ ಹೇಳಿದ ಹಾಗೆ ಮನದ ಮುಂದಿನ ಆಸೆಗೆ ಸಿಲುಕಿದಾಗ ಮಾಯಾ ಪ್ರಪಂಚ ನಮ್ಮನ್ನು ಸೆಳೆದುಕೊಳ್ಳದೆ ಬಿಟ್ಟಿತೇ? ಹಾಗೆಯೆ ಬುದ್ಧ ಹೇಳಿದ ಹಾಗೆ ಬಂಧನಗಳನ್ನು ಕಳಚದೆ ಮುಕ್ತಿ ದೊರಕಿತೆ? ಅವರಿಗೂ ಏಕಾಂತದಲ್ಲಿ ಭಾವನೆಗಳ ಹೊಯ್ದಾಟ ಮುಗಿದ ಮೇಲೆ ಅರ್ಥವಾಗಿದ್ದ ಸತ್ಯ ಇಷ್ಟೇ ಇತ್ತೋ ಏನೋ? ಆದರೆ ಅದು ಅರಿವಿಗೆ ಬಂದ ಮೇಲೆ ನಮಗೆ ಸಂತೋಷ ಮತ್ತು ದುಃಖ ಎರಡರ ನಡುವಿನ ನಿರ್ಲಿಪ್ತತೆಗೆ ಮನಸ್ಸು ಬಂದು ನಿಂತು ಬಿಡುತ್ತದೆ.ನಾನು ಆಫೀಸ್ ಸೇರಿ ಕೆಲಸಕ್ಕೆ  ತೊಡಗುತ್ತೇನೆ. ಸಂತೋಷದಿಂದ ಅಲ್ಲ. ದುಃಖದಿಂದಲೂ ಅಲ್ಲ. ಆದರೂ ತುಟಿಯ ಮೇಲೆ ಕಿರುನಗೆ ಮೂಡುತ್ತದೆ. ಅದು ಮನದೊಳಗೆ ಹುಟ್ಟಿದ ಅರಿವಿನಿಂದ.