Wednesday, July 29, 2015

ಗೂಬೆ ಕಾಟ

ಇಂದು ನಾನು ಬರೆಯುತ್ತಿರುವುದು ಮನುಷ್ಯ ಗೂಬೆಗಳ ಬಗ್ಗೆ ಅಲ್ಲ. ಅವರ ಕಾಟ ನನಗೆ ಇಲ್ಲ ಎಂದೇನಿಲ್ಲ. ಆದರೆ ಪಕ್ಷಿ ಗೂಬೆಗಳ ಕಾಟ ಇಂದು ನನ್ನ ವಿಷಯ ವಸ್ತು.

ನಾವು ಬೆಂಗಳೂರು ಹೊರವಲಯದಲ್ಲಿ ಮನೆ ಕಟ್ಟಿಸಿ, ಅಲ್ಲಿಗೆ ವಾಸಕ್ಕೆ ಬಂದು ಹಲವು ತಿಂಗಳುಗಳೇ ಆದವು. ಆದರೆ ನಮ್ಮ ನೆರೆ-ಹೊರೆ ಕಾಂಕ್ರೀಟ್ ಕಾಡಲ್ಲ ಬದಲಿಗೆ ನಿಸರ್ಗದ ಮಡಿಲಿನಲ್ಲಿ ಪರಿಸರಕ್ಕೆ ಹತ್ತಿರವಾದ ಬದುಕು. ಕಣ್ಣು ಹಾಯಿಸಿದಷ್ಟು ಹಸಿರು. ಸುತ್ತ ಮುತ್ತಲಿನ ಕೆರೆಗಳು ವಾತಾವರಣ ತಂಪಾಗಿ ಇಡುವಲ್ಲಿ ಸಹಕಾರಿ. ಇಲ್ಲಿ ನಮ್ಮ ದಿನದ ಆರಂಭ ಅಲಾರಂ ಅಥವಾ ಹಾಲು, ಪೇಪರ್ ಜೊತೆ ಶುರುವಾಗದೇ, ಹಕ್ಕಿಗಳ ಕಲರವದೊಂದಿಗೆ, ಅವುಗಳ ಲವಲವಿಕೆಯ ಹಾರಾಟ, ಉತ್ಸಾಹದಲ್ಲಿ ಹೊರಡಿಸುವ ವಿಚಿತ್ರ ಶಬ್ದಗಳ ಸುಪ್ರಭಾತದೊಂದಿಗೆ ಶುರು ಆಗುತ್ತದೆ.

ನಮ್ಮ ಉತ್ತರ ಕರ್ನಾಟಕದಲ್ಲಿ ಕಂಡು ಬರುವ ಗುಬ್ಬಿ, ಕಾಗೆ, ಪಾರಿವಾಳ, ಗೊರವೊಂಕಗಳನ್ನು ಬಿಟ್ಟರೆ ಬೇರೆ ಪಕ್ಷಿಗಳ ಹೆಸರೇ ಗೊತ್ತಿರದ ನನಗೆ ಇಲ್ಲಿ ಕಾಣುತ್ತಿದ್ದ ಬಗೆ ಬಗೆ ಬಣ್ಣದ, ವಿವಿಧ ಜಾತಿಯ ಪಕ್ಷಿಗಳು ವಿಸ್ಮಯ ಮೂಡಿಸಿದ್ದವುಇನ್ನೂ ಐದು ವರ್ಷ ದಾಟದ ನನ್ನ ಮಗನೂ ತನ್ನ ಬೈನಾಕ್ಯುಲರ್ ತಂದು ಹಕ್ಕಿಗಳ ನೋಡುವ ಉತ್ಸಾಹ ತೋರಿದ. ಇವುಗಳ ಚಿತ್ರ ತೆಗೆದು ಬ್ಲಾಗ್ ನಲ್ಲಿ ಹಾಕೋಣ ಎಂದು ನನ್ನ ಮೊಬೈಲ್ ನಲ್ಲಿ ಅವುಗಳನ್ನು ಕ್ಲಿಕ್ ಮಾಡಿದೆ.  (ಆದರೆ ಚಿತ್ರಗಳನ್ನು ಕಂಪ್ಯೂಟರ್ ನಲ್ಲಿ ಹಾಕಿದಾಗ ತಿಳಿಯಿತು, ಇದಕ್ಕೆ ಕನಿಷ್ಠ ೨೦x ಜೂಮ್ ಇರುವ ಕ್ಯಾಮೆರಾ ಬೇಕು ಎಂದು). ಹೀಗೆ ಪಕ್ಷಿ ನೋಡುವ ನಮ್ಮ ಹವ್ಯಾಸ ಮೊದಲುಗೊಂಡಿತು. ಆದರೆ ರಾತ್ರಿ ಬರುವ ಹಕ್ಕಿಗಳು ಅದೇ ಮಾಧುರ್ಯ ಹೊಂದಿರುವುದಿಲ್ಲ ಎಂದು ಗೊತ್ತಾಗುವುದಕ್ಕೆ ಸ್ವಲ್ಪ ಸಮಯ ಹಿಡಿಯಿತು.

ನನಗೆ ಬಾಲ್ಯದಲ್ಲಿ ಪಕ್ಷಿಗಳೆಂದರೆ ಏನೋ ಪುಳಕ. ಪುರ್ರೆಂದು ಹಾರಿ ಹೋಗುವ ಗುಬ್ಬಿಗಳ ಹಿಂದೆ ಓಡಿ ಹೋದದ್ದೇ ಬಂತು. ಅವುಗಳನ್ನು ಮುಟ್ಟುವ ಯತ್ನ ಎಂದೂ ಫಲಕಾರಿಯಾಗಿರಲಿಲ್ಲ. ಇನ್ನೂ ಸ್ವಲ್ಪ ದೊಡ್ಡವನಾದ ಮೇಲೆ ಗೊರವಂಕ ಸಾಕಲು ಒಂದು ರಟ್ಟಿನ ಗೂಡು ಮಾಡಿಟ್ಟಿದ್ದೆ. ಆದರೆ 'ಪಕ್ಷಿಗಳು ಸ್ವತಂತ್ರ ಜೀವಿಗಳು, ಅವುಗಳನ್ನು ಬಂಧಿಸುವ ಯತ್ನ ಸರಿಯಲ್ಲ' ಎಂದು ಅಕ್ಕ ಹೇಳಿದ ಮಾತು ಸರಿ ಎಂದೆನಿಸಿ ಪ್ರಯತ್ನದಿಂದ ದೂರ ಸರಿದಿದ್ದೆ. ನಾನು ಶಾಲೆಗೆ ಹೋಗುವ ದಾರಿಯಲ್ಲಿ, ಒಂದು ತಿರುವಿನಲ್ಲಿ, ಐನೇರು (ಜಂಗಮ) ಒಬ್ಬರ ಮನೆಯಲ್ಲಿ ಗಿಳಿ ಒಂದಿತ್ತು. ಅದು ಚೆಂದಗೆ ಮಾತೂ ಕೂಡ ಆಡುತ್ತಿತ್ತು. ಅವರ ಮನೆಯ ಮುಂದೆ ನಾನು ಕೈ ಕಟ್ಟಿಕೊಂಡು ಗಿಳಿಯನ್ನು ನೋಡುತ್ತಾ ನಿಂತು ಬಿಡುತ್ತಿದ್ದೆ. ನಾನೊಬ್ಬನೇನಲ್ಲ. ಗಿಳಿ ಮಾತು ಯಾವ ಹುಡುಗರಲ್ಲಿ ಕುತೂಹಲ ಮೂಡಿಸದೆ ಇರುತ್ತೆ ಹೇಳಿ? ಮನೆಯವರು ಕೂಗು ಹಾಕಿ ನೆರೆದಿದ್ದ ಹುಡುಗರನ್ನು ಚದುರಿಸುತ್ತಿದ್ದರು. ಆಮೇಲೆ ಬಂಧುಗಳ ಮನೆಯ ಮೇಲೆ ಗಡಿಗೆಯನ್ನೇ ಗೂಡನ್ನಾಗಿಸಿ ಪಾರಿವಾಳ ಸಾಕುವ ಬಗೆಯನ್ನು ನೋಡಿದ್ದೆ. ಆದರೆ ಮನೆ ಹುಡುಗ ವಾಪಸು ಬರದಿದ್ದ ಪಾರಿವಾಳ ಹುಡುಕಿಕೊಂಡು ದೂರ ದೂರ ಅಲೆಯ ತೊಡಗಿದ ಮೇಲೆ ಅವರ ಮನೆಯವರು ಅವನ ಹವ್ಯಾಸಕ್ಕೆ ಇತಿಶ್ರೀ ಹಾಡಿದರು.

ಬೆಳೆಯುತ್ತ ಪಕ್ಷಿಗಳೆಡಿನ ಆಸಕ್ತಿ ಕಡಿಮೆಯಾದರೂ, ಅವು ಹುಟ್ಟಿಸುತ್ತಿದ್ದ ಬೆರಗು ಸಂಪೂರ್ಣವಾಗಿ ಮರೆಯಾಗಲಿಲ್ಲ. ಕಾಗೆ ಎಲ್ಲ ಕಡೆ ಕಾಣಸಿಗುವ ಪಕ್ಷಿಯಾಗದೆ ಇದ್ದರೆ ಎಲ್ಲರೂ ಇದನ್ನು 'ಎಂಥಹ ಸುಂದರ ಪಕ್ಷಿ, ಆಕರ್ಷಕ ಕಪ್ಪು ಬಣ್ಣ, ಕಾವ್-ಕಾವ್ ಎನ್ನುವ ಅದರ ಕಂಠ ಎಷ್ಟು ಸುಮಧುರ' ಎಂದು ಗುಣಗಾನ ಮಾಡುತ್ತಿದ್ದರು ಎಂದು ವಾದಿಸುತ್ತಿದ್ದೆ. ಕೇಳಿದವರು ಮುಗುಳ್ನಕ್ಕು ಸುಮ್ಮನಾಗುತ್ತಿದ್ದರು. ಈಗ್ಗೆ ಒಂದು ವರ್ಷದ ಹಿಂದೆ ಅಮೇರಿಕೆಗೆ ಹೋದಾಗ, ನಾನು ಉಳಿದುಕೊಂಡಿದ್ದ ಹೋಟೆಲಿನ ಕೋಣೆಯ ಹೊರಗಡೆ ಕುಳಿತಿದ್ದ ಅಲ್ಲಿನ ಕಾಗೆ (ಗಾತ್ರದಲ್ಲಿ ನಮ್ಮದಕ್ಕಿಂತ ಸ್ವಲ್ಪ ದೊಡ್ಡದು) ಜೊತೆಗೆ ಬಾಳೆಹಣ್ಣನ್ನು ಹಂಚಿಕೊಂಡೆ. ಮರುದಿನ ಅದೇ ಸಮಯಕ್ಕೇ ಬಂತು. ಫಲಹಾರದ ಜೊತೆಗೆ ನಮ್ಮ ಸ್ನೇಹವೂ ಬೆಳೆಯಿತು ಅನ್ನಿಸಿತು. ರವಿವಾರದಂದು ಆಫೀಸ್ ಗೆ ರಜೆ ಇದ್ದ ಕಾರಣ ಸ್ವಲ್ಪ ಜಾಸ್ತಿ ಹೊತ್ತೇ ಮಲಗಿದ್ದೆ. ಆದರೆ ಕಾಗೆ ಸದ್ದಿಗೆ ಎಚ್ಚರವಾಗಿ ಹೊರಬಂದು ನೋಡಿದರೆ ಅಲ್ಲಿ ೧೦-೧೨ ಕಾಗೆಗಳ ದಂಡೇ ನೆರೆದಿತ್ತು. ಇವು ನನ್ನ ಸ್ನೇಹಿತನ ಸ್ನೇಹಿತರೋ ಅಥವಾ ಪ್ರತಿ ದಿನ ಬೇರೊಂದು ಕಾಗೆ ನನ್ನ ಜೊತೆಯಾಗಿತ್ತೋ ತಿಳಿಯಲಿಲ್ಲ. ಆದರೆ ಹಂಚಿ ತಿನ್ನುವ ಕಾಗೆಯ ಮನೋಧರ್ಮ ನಾಗರೀಕತೆಯಲ್ಲಿ ಪಕ್ಷಿಕುಲ ಮನುಷ್ಯನಿಗಿಂತ ಮುಂದೆ ಇದೆ ಎನ್ನುವ ವಿಚಾರ ಮೂಡಿಸಿತು.

ಮತ್ತೆ ಪ್ರಸ್ತುತ ಕಾಲಕ್ಕೆ ಬಂದರೆ, ಹೊಸ ಮನೆಯ ಪರಿಸರ ಹಲವಾರು ಪಕ್ಷಿಗಳ ನೆಲೆಯಾಗಿದ್ದು ಸಂತಸ ತಂದಿತ್ತು. ಆದರೆ ಎಲ್ಲದಕ್ಕೂ ಕೊನೆ ಎನ್ನುವ ಹಾಗೆ, ಒಂದು ಸಾಯಂಕಾಲ ಮನೆಯ ಮುಂದಿನ ಸಂಪಿಗೆ ಮರದಲ್ಲಿ ಕಾಣಿಸಿಕೊಂಡಿತು ಒಂಟಿ ಗೂಬೆ. ಬೆಳಿಗ್ಗೆ ಅದೇ ಮರದಲ್ಲಿ ಕೋಗಿಲೆ ಕಂಡು ಅದೃಷ್ಟ ಅಂದುಕೊಂಡರೆ, ದುರಾದೃಷ್ಟದ ಸಂಕೇತ ಎನ್ನಿಸುವ ಗೂಬೆ ಸಾಯಂಕಾಲ ಅಲ್ಲಿ ಪ್ರತ್ಯಕ್ಷ.  ಸಾಕಷ್ಟು ಗೂಬೆಗಳು ಅಲ್ಲಿ ಸಂಚರಿಸುತ್ತಿರುವುದು ಸ್ವಲ್ಪೇ ದಿನದಲ್ಲಿ ಗಮನಕ್ಕೆ ಬಂತು.

ವಿದೇಶದಲ್ಲಿ ಗೂಬೆ ಸಾಕುವದರ ಬಗ್ಗೆ ಓದಿದ್ದೇನೆ. ಪಕ್ಷಿಯೆಡೆಗೆ ನನಗೆ ಯಾವುದೇ ಮೂಢ ನಂಬಿಕೆಗಳಿಲ್ಲ. ಆದರೆ ಅದರ ಸ್ವಭಾವ ಮನುಷ್ಯನಿಗಿಂತ ತುಂಬಾ ವಿಭಿನ್ನವಾದದ್ದು, ಅದರ ಜೊತೆಗೆ ಮನುಷ್ಯನ ಹೊಂದಾಣಿಕೆ ಸುಲಭವಲ್ಲ ಎಂದು ನನ್ನ ಎಣಿಕೆ. ಅದರ ನೋಟ ಮತ್ತು ಧ್ವನಿ ಮನುಷ್ಯನಲ್ಲಿ ಭೀತಿಯ ಕಂಪನ ಮೂಡಿಸುತ್ತದೆ. ಅದಕ್ಕಾಗಿ ಪಕ್ಷಿಗೆ ಅಪಶಕುನದ ಹಣೆಪಟ್ಟ ಕಟ್ಟಿದರೆನೋ ಎಂದು ಅನುಮಾನ.

ಗೂಬೆ ಮೂರು ಸಲ ಕೂಗಿದರೆ ಅಪಶಕುನ, ಆದರೆ ಮೂವತ್ತು ಸಲ ಕೂಗಿದರೆ? ಒಂದು ದಿನ ರಾತ್ರಿ ಹತ್ತರ ಸಮಯ. ಗೂಬೆಗಳ ಗಲಾಟೆಗೆ ಹೊರ ಬಂದು ನೋಡಿದರೆ, ಅವು ಗೊರವೊಂಕ ದಂಪತಿಗಳೊಡನೆ ಕಾದಾಡುತ್ತಿರುವುದು ಕಂಡು ಬಂತು. ನನ್ನ ಸದ್ದಿಗೆ ಸ್ವಲ್ಪ ಕದನ ವಿರಾಮ ಘೋಷಿಸಿದಂತೆ ಕಂಡು ಬಂದರೂ, ದೂರ ಸಾಗಿ ಮತ್ತೆ ಜಗಳ ಮುಂದುವರಿಸಿದವು. ಅಂದಿನಿಂದ ಶುರುವಾದ ಅವುಗಳ ಹಾರಾಟ ಮತ್ತು ಕಿರುಚಾಟ ಇನ್ನು ನಿಂತಿಲ್ಲ

ಅವುಗಳ ಬಗ್ಗೆ ಬರೆಯಬೇಕೆಂಬ ನನ್ನ ವಿಚಾರವನ್ನು ಅರಿತಂತೆ ಇಂದು ಒಂದು ಗೂಬೆ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿತು. ಎಂಥ ತೀಕ್ಷ್ಣ ನೋಟ. ನನ್ನ ವಾಹನದ ಬೆಳಕನ್ನು ಅದರ ಕಡೆ ಕೇಂದ್ರಿಕರಿಸಿದಾಗ ನಿಲ್ಲದೇ ಹಾರಿ ಹೋಯಿತು ತನ್ನ ಗುಟ್ಟು ಬಿಟ್ಟು ಕೊಡದೆ.

ಮನೆಗೆ ಭೇಟಿ ಕೊಡುವ ಸ್ನೇಹಿತರ ಮೊದಲ ಉದ್ಗಾರ "ಎಷ್ಟು ನಿರ್ಮಲ ವಾತಾವರಣ, ಎಷ್ಟು ಶುದ್ಧ ಗಾಳಿ - ಬೆಳಕು!". ಅವರಿಗೆ ಹೇಳಬೇಕು ಎಂದುಕೊಳ್ಳುತ್ತೇನೆ 'ರಾತ್ರಿ ಇಲ್ಲಿ ಒಮ್ಮೆ ಸುತ್ತಲು ಬನ್ನಿ' ಎಂದು.

ಹೇಳಲೇ? ನೀವೇನು ಅನ್ನುತ್ತೀರಿ?


Tuesday, July 28, 2015

ಹೊಸತನ ತಂದಿದೆ 'ಸಂಕಥನ'

ಇದು ಕಥೆ, ಕವನ, ವಿಚಾರ, ವಿಮರ್ಶೆಗಳ ಸಮ್ಮಿಲನ. ಯಾವುದೇ ವೈಚಾರಿಕತೆಯ ಚೌಕಟ್ಟಿಗೆ ಒಳಗಾಗದೇ, ವೈವಿಧ್ಯತೆಯನ್ನು, ಹೊಸ ಬರಹಗಾರರ ಮೂಲಕ ಪರಿಚಯಿಸುವ ಯತ್ನ ಹೊಸದಾಗಿ ಆರಂಭವಾಗಿರುವ 'ಸಂಕಥನ' ಸಂಚಿಕೆಯದ್ದು.

ಇದು ತ್ರೈಮಾಸಿಕ. ನನ್ನ ಕೈಯಲ್ಲಿರುವುದು ಮೊದಲ ಸಂಚಿಕೆ. ಅತ್ಯುತ್ತಮ ಗುಣ ಮಟ್ಟದ ಮುದ್ರಣ, ಚಚ್ಚೌಕ ಆಕೃತಿಯ ಪುಸ್ತಕ. ಒಳಗಿನ ಪುಟಗಳು ನಯನ ಮನೋಹರ. ಬಾಹ್ಯ ಆಕರ್ಷಣೆಯ ಜೊತೆಗೆ ಸಾಹಿತ್ಯ ಲೋಕದ ನಂಟನ್ನು ಗಟ್ಟಿಗೊಳಿಸುವ ಪ್ರಯತ್ನ ಇದರಲ್ಲಿನ ಬರಹಗಳದ್ದು. ಕಥೆಗಳು ಅಷ್ಟಾಗಿ ಮನ ಕಲುಕದಿದ್ದರೂ, ಕವಿತೆಗಳು ಮಾತ್ರ ಕಾಡದೇ ಬಿಡುವುದಿಲ್ಲ.

ಭೂ-ಸ್ವಾಧೀನ ಕಾಯಿದೆ ರೈತನ ಕುಟುಂಬದಲ್ಲಿ ಹುಟ್ಟಿಸುವ ತಳಮಳ ವ್ಯಕ್ತ ಪಡಿಸುವ ಕವಿತೆ 'ಅಪ್ಪನ ಹೊಲದೊಳು ಠಕ್ಕರು ಬಂದರು' ಓದುಗನಲ್ಲೂ ದುಗುಡ ಹುಟ್ಟಿಸಿದರೆ, ಶಕುಂತಲೆ ಆತ್ಮ ಕಥೆ ಬರೆದು ಅಪವಾದಗಳು ದುಷ್ಯಂತನನ್ನು ಕಾಡುವಂತೆ ಮಾಡಬೇಕಿತ್ತು ಎನ್ನುವ ಕವಿತೆ ಓದುಗರನ್ನು ಕಾಡದೆ ಬಿಡದು.

ನೆರೂಡಾನ ಸಂದರ್ಶನ ಒಬ್ಬ ಕವಿಯನ್ನು ಸಾದ್ಯಂತವಾಗಿ ಪರಿಚಯಿಸುತ್ತದೆ. ಸುರೇಂದ್ರನಾಥರ 'ಗಾಳಿಗೆ ಬಿದ್ದ ಚಂದ್ರನ ತುಂಡುಗಳು' ಪುಸ್ತಕ ಪರಿಚಯ, ಲೇಖಕರ ಸಂದೇಶವನ್ನು ಸಂಕ್ಷಿಪ್ತವಾಗಿ ವಿವರಿಸುತ್ತದೆ.

'ಮಾತೃ-ಭಾಷಾ ಶಿಕ್ಷಣ' ಲೇಖನ ಚರ್ಚೆಗೆ ಹೊಸ ಆಯಾಮಗಳನ್ನು ನೀಡುತ್ತದೆ. ಸಾಹಿತ್ಯ ಸಮ್ಮೇಳನಗಳಲ್ಲಿ ಕೇಳಿ ಬರುವ ವೀರಾವೇಶದ ಮಾತುಗಳಿಗಿಂತ, ಈ ತರಹದ ಸಂಚಿಕೆಗಳ ಕೊಡುಗೆ ಕನ್ನಡ ಭಾಷೆ-ಸಂಸ್ಕೃತಿಗೆ ಹೆಚ್ಚು ಉಪಯುಕ್ತ ಎನ್ನಿಸುತ್ತದೆ.

ಪ್ರತಿ ಪುಟವೂ ಅಚ್ಚುಕಟ್ಟು ಎನ್ನಿಸುವ ಈ ಪುಸ್ತಕದ ವಿನ್ಯಾಸ ಯಾವ ಓದುಗನನ್ನಾದರೂ ಆಕರ್ಷಿಸುವಂಥದ್ದು. ಸಂಪಾದಕ ರಾಜೇಂದ್ರ ಪ್ರಸಾದ್ ರ ಶ್ರಮ ಶ್ಲಾಘನೀಯ.

ಕೆಲವು ಪತ್ರಿಕೆಗಳಲ್ಲಿ ಸಂಪಾದಕ ತನ್ನ ದೈತ್ಯ ಪ್ರತಿಭೆಯನ್ನು ಎಲ್ಲ ಪುಟಗಳಲ್ಲಿ ಮತ್ತು ಬೇರೆ ಲೇಖಕರ ಬರಹಗಳಲ್ಲಿ ಕೂಡ ಅನಾವರಣಗೊಳಿಸುವ ಸಂಪ್ರದಾಯವನ್ನು ಅನುಕರಿಸದೆ, ಹೊಸ ಬರಹಗಾರರು ತಮ್ಮ  ಸ್ವಂತಿಕೆ ಕಾಪಾಡಿಕೊಳ್ಳಲು ಅವಕಾಶ ಮಾಡಿರುವುದು ಈ ಸಂಚಿಕೆಯಲ್ಲಿ ತಾಜಾತನ ಉಳಿಸಿದೆ.         

ನೀವೂ ಇದಕ್ಕೆ ಚಂದಾದಾರರಾಗಬೇಕೇ? ಇಗೋ, ಇಲ್ಲಿದೆ ಕೊಂಡಿ.


Ignore risks at your own risk

Govt. of Greece, Public sector banks in India suffering from high bad debt, infra companies with heavy debt being unable to service their loans and hundreds of farmers in Karnataka going dead - all have one thing in common. They did not manage their risks well.

When the infra and real estate companies in India took heavy debt, they and their lenders did not think of a situation in which the demand slows down and the capital costs increase. Now both the parties are in a difficult situation as interest outgo for the borrowers are more than the operational profits they earn. No amount of debt restructuring will help them. It is a clear case of failure in assessing business and operational risks.

If you start quantifying the risks, you will know that farming is a very risky business too. A rain dependent farmer is always throwing the dice when he sows. He is at the mercy of rain gods and pests. If the crop output is good but pricing is bad, like it is happening with sugarcane farmers, his venture turns a negative profit. It is a series of uncertain events. And the poor farmer borrows from unorganized market at higher rates than the banks lend, that adds to financial risks. Even if he is successful, he has to share profit with the loan sharks. But he won’t be successful every year. Luck too is a probability and highly inconsistent in nature.

When the improbable becomes unavoidable, organizations go bankrupt and the farmer stretches his hand to the pesticide and goes dead.

For the organized businesses, there are multiple ways to diversify, mitigate and transfer the risks. But yet they ignored risk management only to go bankrupt later. As for the farmers, there are not many risk mitigation options. If the Futures Market gets well developed, it can offer a great relief for the farmer. As a consumer I know how much onions and tomato I would need in future. Similarly retailers know how much food grains and vegetable they can sell in a day or a week or in a season. Wholesalers understand the pulse of market very well. Why can’t these parties participate in price risks and why alone farmers should take that burden? If farmers know that price is dropping in the Futures market, he has an option to change the crop and avoid the distress. That way supply and demand would find a balance without too much variation in price. The forward market can be regulated by limiting the number of contracts one holds to avoid manipulation and risk concentration.

Derivatives (Futures and Options) are good hedging tools but at the hands of speculators they can become a toy of gambling. Holders of out of the money Put and Call options watch their contracts turning worthless over time. But it does not mean option writers win all the time. When the Black Swan visits them, they hear only one thing – a swan song. That’s how Lehman Brothers collapsed and the global financial crisis broke out in 2008.

No risk management or too much play in derivatives (risk concentration) both leads to disasters. Better way to manage risks would be to break it into manageable size. A poor farmer suffering Rs.1 lakh loss due to pricing change would push him to death but the loss of Rs.100 for every contract held by 1,000 people would become a manageable loss. Total loss would not change but the risks and rewards when distributed can be managed well and absorbed without devastating effects.


The crisis our society is going through calls for a better risk management. Relief packages won’t last long. Govt. needs to spend the tax payer’s money sensibly. Banks should not relax regulations under any pressure. And there should be a forward market for all those commodities which see huge price swings. Regulator should ensure speculators do not manipulate the market. Does risk management looks like a risky business? Yes, it is when not managed well. But if we bite only what we can chew and if we have saved for a rainy day, risk would not bother us or anyone to death (financial or physical).

[Inspired by the book ‘Against the Gods’ by Peter L. Bernstein]

Kalam, an ideal Indian

India is a land of Buddha and Gandhi. After them too, India continues to produce fine human beings.

Story of Dr. APJ Abdul Kalam will remain an inspiration for generations to come. A humble boy distributing newspapers became a nuclear scientist. Becoming a President did not alter him from remaining humble. He was a true nationalist and an ideal Indian.

The idea of India is as old as civilization itself. But it is rekindled by the towering personalities time and again. Kalam had a special gift his predecessors did not have. He could teach science along with spirituality. He never took retirement in promoting the idea of India. He visited educational institutions all over India to prepare the next generation to be a superpower. He did not have to take example of someone to motivate others; his life was an inspiration itself. 

Kalam stands out for his contributions and aspirations. Who else wanted to see a billion smiles?


The great soul now rests in peace. But the legend lives on.

Wednesday, July 22, 2015

Book Review: Family Matters by Rohinton Mistry

When I had read Rohinton Mistry for the first time, his novel ‘Such a Long Journey’ had made me feel like it is a long journey for the reader too. But his eye for the details was very impressive so I knew I would come back to him. ‘Family Matters’ is longer (500 pages novel) than my previous read but I thoroughly enjoyed reading it over a few days time.

Nariman Vakil is the ‘chief’ of a Parsi family living in Mumbai. When Nariman was young, he wanted to marry his girlfriend Lucy who did not belong to his community but it did not materialize with stiff opposition from his parents. He ends up marrying a widow chosen by his parents who already had two children, a son and a daughter (Jal and Coomy) from her first marriage. He becomes father to them too and then his daughter Roxana arrives into the family. Jal and Coony do not get married and lives with Nariman in a spacious flat with multiple rooms while Roxana gets married to Yezad, they have two sons, Jehangir and Murad and they live separately in another smaller flat.

While going for a walk, Nariman breaks his ankle and becomes bed-ridden. His old age and Parkinson disease makes things worse for him. Since their's is a middle-class family, Jal and Coomy struggle to make their ends meet along with the new medical expenses to be spent on their stepfather. More than the money, it is the physical effort to service the old man tires down Coomy. Moreover she did not have any nice feelings for the old man and she held his stepfather responsible for her mother’s misery and death. Exhausted by the needs to serve the ailing man, they arrange an ambulance to drop off Nariman at Roxana’s house. And the troubles get transferred to Roxana and Yezad’s family.

Yezad works in a sports goods selling shop owned by Mr. Kapoor who is disturbed by the reducing religious tolerance in the town of Mumbai. To overcome the financial pressures Yezad first attempts his hand in Matka (a form of speculation which is illegal), his beginner's luck does not last long. Then he develops a plot to gain benefit out of his employer. But coincidentally Mr. Kapoor gets killed by two members of a political outfit. That makes Yezad jobless.

In another parallel development, Coomy who had done everything to avoid the return of Nariman to her flat gets killed in a collapse in her flat while carrying out a repair. Saddened by the development, Jal (Coomy’s brother) invites Yezad’s family along with Nariman to live together in his flat. Yezad with the help of Jal sells his small flat and all family members relocate to the bigger flat.

The old man dies and the financial pressures on the family ease too but Yezad turns extremely religious. A sense of dissatisfaction remains in Roxana and Jahangir who thought they were happier when they lived in their small flat. 

Though family matters take center stage in this novel, sub plots touch many subjects from religion to politics to philosophy. Though this is a work of fiction, I guess the subject is heavily drawn from personal life of the author Rohinton Mistry who is represented in Jehangir’s character in this novel.

This novel was published in 2002. Like other two novels by the same author, this too was shortlisted for the Booker prize.

Tuesday, July 21, 2015

ಸಣ್ಣ ಕಥೆ: ಪುನರಾವರ್ತನೆ ಅಲ್ಲ ಪರಿವರ್ತನೆ

ಕೆಲ ವರ್ಷಗಳ ಹಿಂದೆ ನಾನು ಊರಿಗೆ ಹೋದಾಗ ಸ್ನೇಹಿತ ಹೊಸದಾಗಿ ಆರಂಭಿಸಿದ ಅಂಗಡಿಯಲ್ಲಿ ಕುಳಿತಿದ್ದೆ. ಬೆಳಿಗ್ಗೆ ಹೊತ್ತು, ವ್ಯಾಪಾರ ಚುರುಕುಗೊಳ್ಳುವ ಮುನ್ನ ಅಂಗಡಿಯವರು ಸುತ್ತ ಮುತ್ತಲಿನವರಿಗೆ ಒಂದು ನಮಸ್ಕಾರ ಹೇಳಿ, ಚಹಾ ಕುಡಿದು, ದಿನಪತ್ರಿಕೆ  ಮೇಲೆ ಕಣ್ಣಾಡಿಸುವ ಸಮಯ. ಆವಾಗ ಬಂದಿದ್ದು ತುಂಬು ನಗೆ ಮೊಗದ ಆ ಹುಡುಗ. ನನಗಿಂತ ೮-೧೦ ವರ್ಷ ಚಿಕ್ಕವಿನಿದ್ದಿರಬಹುದು. ಅವನು ಕಾಲೇಜಿಗೆ ಹೋಗುತ್ತಿದ್ದನೋ ಇಲ್ಲವೋ ಗೊತ್ತಿರಲಿಲ್ಲ. ತುಂಬ ಲವ ಲವಿಕೆಯಿಂದ ಕೆಲಸ ಮಾಡಿ ಸ್ವಲ್ಪ ಹಣ ಗಳಿಸುವದನ್ನು ಗಮನಿಸಿದ್ದೆ. ಆದರೆ ಅಂದು ನನ್ನಲ್ಲಿ ಹಣದ ಸಹಾಯಕ್ಕಾಗಿ ವಿನಂತಿಸಿಕೊಳ್ಳುತ್ತಿದ್ದ. ಒಂದೇ ಊರು. ಮೇಲಾಗಿ ಅವನಿಗೆ ಕೊಟ್ಟ ಹಣ ಸದ್ಬಳಕೆ ಆಗುವುದರಲ್ಲಿ ನನಗೆ ಯಾವುದೇ ಸಂದೇಹ ಇರಲಿಲ್ಲ. ಅವನು ಕೇಳುತ್ತಿದ್ದ ಮೂರು ಸಾವಿರ ಜೇಬಿನಲ್ಲೆ ಇತ್ತು. ಕೊಟ್ಟಾದ ಮೇಲೆ ಇತರರಲ್ಲಿ ವಿಚಾರಿಸಿದೆ. ಅವನು ಬುಕ್ ಬೈಂಡಿಂಗ್ ಜೊತೆಗೆ ಬೇಕರಿಯಲ್ಲಿ ಸಿಹಿ ತಿಂಡಿ ಕಟ್ಟಿಕೊಡುವ ಪೊಟ್ಟಣಗಳನ್ನು ತಯಾರಿಸಿ ಕೊಡುತ್ತಿದ್ದ. ಮನೆಯಲ್ಲಿ ಅನಾರೋಗ್ಯ ಪೀಡಿತ ತಂದೆ ಮತ್ತು ಇನ್ನು ಶಾಲೆಗೆ ಹೋಗುತ್ತಿರುವ ತಂಗಿಯರಿದ್ದರು. ಕುಟುಂಬದ ಸಂಪೂರ್ಣ ಜವಾಬ್ದಾರಿ ಇವನ ಕೊರಳಿಗೆ ಬಿದ್ದಿತ್ತು. ಅವನ ಮಾಡುತ್ತಿದ್ದ ಕೆಲಸಗಳಿಂದ ಬರುವ ಸಂಪಾದನೆ ಅಷ್ಟರಲ್ಲೇ ಇತ್ತು. ಆದರೂ ಅವನ ಹಸನ್ಮುಖ ಇದ್ಯಾವುದನ್ನೂ ಏಕೆ ತೋರುತ್ತಿಲ್ಲ ಎಂದು ಅರೆಕ್ಷಣ ವಿಚಾರ ಮಾಡಿದೆನಾದರೂ, ಬೇರೆ ಕೆಲಸಗಳಲ್ಲಿ ಮಗ್ನನಾಗಿ, ವಾಪಸ್ಸು ಬೆಂಗಳೂರಿಗೆ ಬಂದ ನಂತರ ವಿಷಯ ಸಂಪೂರ್ಣ ಮರೆತು ಹೋದೆ.

ಕೆಲವು ತಿಂಗಳುಗಳೇ ಸರಿದು ಹೋದವು. ಮತ್ತೆ ಯಾವುದೊ ಕಾರಣಕ್ಕಾಗಿ ಊರಿಗೆ ಹೋದೆ. ಅದೇ ಹುಡುಗನನ್ನುನೋಡಿದೆ. ಅವನು ಕೈಯಲ್ಲಿ ಕಾಯಿ, ಹೂವು, ಊದುಬತ್ತಿ ಹಿಡಿದು ಗಂಭೀರವಾಗಿ, ಲೋಕದ ಪರಿವೆ ಇಲ್ಲದಂತೆ ಹೊರಟಿದ್ದ. ಸ್ನೇಹಿತನೊಬ್ಬ ಹೇಳಿದ. ಅವನು ಹೋಗುತ್ತಿರುವುದು ಮೌನೇಶ್ವರನ ಗುಡಿಗೆ. ಮನೆಯಿಂದ ಹೊರಟು ದೇವರ ದರ್ಶನವಾಗುವವರೆಗೆ ಅವನು ದಾರಿಯಲ್ಲಿ ಯಾರ ಜೊತೆಯೂ ಮಾತನಾಡುವುದಿಲ್ಲ. ಅವನು ಪ್ರತಿ ವಾರ ಇದನ್ನು ಚಾಚೂ ತಪ್ಪದೇ ಪಾಲಿಸುತ್ತಾನೆ. ಮನೆ ಸಮಸ್ಯೆಗಳ ಪರಿಹಾರಕ್ಕೆ ಅವನದು ಈ ವೃತ. ಅವನಿಗೆ ತನ್ನ ಕುಟುಂಬದ ಬಗ್ಗೆ ಇರುವ ಕಾಳಜಿ, ನನ್ನಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿತು. ಇನ್ನೂ ವಿಷಯ ಕೆದಕಿದಾಗ ತಿಳಿದು ಬಂತು. ಆ ಹುಡುಗನಿಗೆ ಬಡತನ ವಂಶ ಪಾರಂಪರ್ಯವಾಗಿ ಬಂದದ್ದಲ್ಲ. ಅವನ ತಾತ ಊರಿನಲ್ಲೇ ದೊಡ್ಡದಾದ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಈ ಹುಡುಗನ ಅಪ್ಪ ಅದರಲ್ಲಿ ಕೆಲ ಸಮಯ ಕೂಡುತ್ತಿದ್ದದ್ದು ನೆನಪಿಗೆ ಬಂತು. ಇದಾಗಿ ಸುಮಾರು ಇಪ್ಪತ್ತು ವರ್ಷಗಳ ಮೇಲೆಯೇ ಆಗಿತ್ತು. ಆದರೆ ನೆನಪುಗಳ ನಾಗಾಲೋಟಕ್ಕೆ ಇಪ್ಪತ್ತು ವರ್ಷಗಳೇನು ಮಹಾ?

ಅದು ನನ್ನ ಬಾಲ್ಯದ ದಿನಗಳು. ಅಂದು ನನ್ನ ಅಕ್ಕಳ ವಧು ಪರೀಕ್ಷೆ. ಉಪಹಾರದ ತಯ್ಯಾರಿಗೆಂದು ಕಿರಾಣಿ ಸಾಮಗ್ರಿಗಳನ್ನು ತರಲು ಬರಿಗೈಲಿ ನನ್ನ ಕಳಿಸಿದ್ದು ಅದೇ ಅಂಗಡಿಗೆ, ಅಲ್ಲಿ ಆ ಹುಡುಗನ ಅಪ್ಪ ಗಲ್ಲದ ಮೇಲೆ ಕುಳಿತಿದ್ದರು. ಹೀಗೆ ವಿಷಯ ಎಂದು ಹೇಳಿದ ಮೇಲೆ ಸಿಕ್ಕೇ ಬಿಟ್ಟಿತು ಉದ್ರಿ. ಸುಮಾರು ಮೂವತ್ತು ರೂಪಾಯಿಯ ಸಾಮಾನುಗಳೊಂದಿಗೆ ಮನೆಗೆ ಹಿಂತಿರುಗಿದೆ. ಆದರೆ ಬೇಜವಾಬ್ದಾರಿಯಾದ ನನ್ನ ಅಪ್ಪ ಆ ಬಾಕಿಯನ್ನು ಮುಟ್ಟಿಸದೆ ಎಷ್ಟೋ ತಿಂಗಳು ಸತಾಯಿಸಿಬಿಟ್ಟಿದ್ದ. ಆ ಅಂಗಡಿಯ ಮುಂದೆ ಓಡಾಡಲು ನನಗೆ ಮುಜುಗರ ಆಗುತ್ತಿತ್ತು. ದುಡ್ಡಿನ ಮಹತ್ವ ಮತ್ತು ಸಾಲ ತರುವ ಅವಮಾನಗಳ ಅನುಭವ ನನಗೆ ತುಂಬಾ ಸಣ್ಣ ವಯಸ್ಸಿನಲ್ಲೇ ಆಗಿ ಹೋಗಿತ್ತು. ಆದರೆ ಕಾಲ ಕ್ರಮೇಣದಲ್ಲಿ ಬೇರೆ ಊರಿಗೆ ಓದಲು ಮತ್ತು ಅಲ್ಲಿಂದ ಬೆಂಗಳೂರಿಗೆ ಉದ್ಯೋಗ ಅರಸಿ ಬಂದ ನನಗೆ ಆ ಕಿರಾಣಿ ಅಂಗಡಿಯೊಂದು ಮುಚ್ಚಿ ಹೋದದ್ದು ಗಮನಕ್ಕೆ ಬರುವ ಯಾವ ಘಟನೆಗಳೂ ನಡೆದಿರಲಿಲ್ಲ. ಆ ಸಂದರ್ಭ ಮತ್ತೆ ಈಗ ಬಂದಿತ್ತು. ಆದರೆ ನನಗೆ ಇವನು ಅದೇ ಕುಟುಂಬದ ಹುಡುಗನೇನಾ ಎಂದು ಆಶ್ಚರ್ಯ. ಅವನ ಮನೆ ಹುಡುಕಿಕೊಂಡು ಹೋದೆ. ಅವರು ಮೊದಲಿದ್ದ ತಮ್ಮ ದೊಡ್ಡ ಮನೆ ಅದಾಗಲೇ ಮಾರಿಬಿಟ್ಟಿದ್ದರು. ಊರ ಹೊರಗೆ ಚಿಕ್ಕ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮನೆ ಹೊರಗೆ ನಿಂತಿದ್ದ ಆ ಹುಡುಗನ ಅಪ್ಪನ ಗುರುತು ಸಿಗಲು ಸ್ವಲ್ಪ ಕಷ್ಟವೇ ಆಯಿತು ಆದರೆ ಗುರುತು ಸಿಕ್ಕ ಮೇಲೆ ಯಾವುದೇ ಸಂಶಯ ಉಳಿಯಲಿಲ್ಲ, ಅಂದು ಗಲ್ಲದ ಮೇಲೆ ಕುಳಿತು ಹೂಂಕರಿಸುತ್ತಿದ್ದ ಅದೇ ವ್ಯಕ್ತಿ ಇಂದು ಅನಾರೋಗ್ಯದಿಂದ ದುಡಿಯಲಾರದ ಸ್ಥಿತಿ ತಲುಪಿದ್ದ. ಆತ ನನ್ನ ನೋಡಿದನಾದರೂ, ನನ್ನ ಗುರುತಿಸದೆ ಹೋದದ್ದು ಸ್ಪಷ್ಟವಾಯಿತು.

ಯಾರಲ್ಲಿ ನಾನು ಅಸಹಾಯಕ ಆದರೆ ಅವಶ್ಯ ಸನ್ನಿವೇಶದಲ್ಲಿ ಸಾಲದ ಸಹಾಯ ತೆಗೆದು ಕೊಂಡಿದ್ದೇನೋ, ಅದೇ ವ್ಯಕ್ತಿಯ ಮಗ ಸುಮಾರು ೨೦ ವರ್ಷದ ನಂತರ ನನ್ನ ಹತ್ತಿರ ಸಹಾಯ ತೆಗೆದುಕೊಂಡಿದ್ದ! ಕಾಲ ಪುನರಾವರ್ತನೆಯಾಗಿತ್ತು. ಆದರೆ ಪಾತ್ರಗಳು ಸಂಪೂರ್ಣ ಅದಲು ಬದಲಾಗಿದ್ದವು.

ಆ ಹುಡುಗನಿಗೆ ನನ್ನಲ್ಲಿ ವಿಶ್ವಾಸ ಬೆಳೆದಿತ್ತು. ಮತ್ತೆ ಭೇಟಿಯಾದಾಗ ಕ್ಷೇಮ ಸಮಾಚಾರ ವಿಚಾರಿಸಿದ. ಅವನ ಮನೆವರೆಗೆ ಹೋಗಿ ಬಂದಿದ್ದ ನನಗೆ ಆ ಕುಟುಂಬದ ಸ್ಥಿತಿ-ಗತಿಯ ಅರಿವಾಗಿತ್ತು. ಒಂದು ಕ್ಷಣ ವಿಚಾರ ಮಾಡಿದೆ. ನನಗೆ ಬರಬೇಕಿದ್ದ ಬಾಕಿಯ ನೆನಪು ಅವನಿಗೆ ಮಾಡಿದರೆ, ಮುಂದೊಂದು ದಿನ ಅವನ ಮಗನು ಮತ್ತೇ ಇದೇ ಕಥೆ ಬರೆಯಬಹುದು ಎನ್ನಿಸಿತು. ಬದಲಿಗೆ ಅವನು ನಡೆಸುತ್ತಿದ್ದ ಚಿಕ್ಕ ಕೆಲಸಗಳ ಕೂಲಂಕುಷ ಪರಿಚಯ ಮಾಡಿಕೊಂಡೆ. ಕೆಲವು ಸ್ನೇಹಿತರ ಸಹಕಾರದೊಂದಿಗೆ ಅವನ ಆದಾಯ ಹೆಚ್ಚಿಸುವ ವ್ಯವಸ್ಥೆ ಆಯಿತು. ಅವನ ಪ್ರಯತ್ನ ಎಲ್ಲರೂ ಮೆಚ್ಚಿತ್ತಿದ್ದ ಕಾರಣಕ್ಕೆ, ಅವನು ಪ್ರಗತಿಯನ್ನು ಕಾಣುವುದರಲ್ಲಿ ಯಾರಿಗೂ ಸಂದೇಹ ಇರಲಿಲ್ಲ. ಮೌನೇಶ್ವರನು ತನ್ನ ಮೌನ ಮುರಿದು ಇವನಿಗೆ ಅಸ್ತು ಅನ್ನುತ್ತಾನೋ ಇಲ್ಲವೋ, ಆದರೆ ಇವನ ನಂಬಿಕೆಯನ್ನು ದೃಢಗೊಳಿಸಿದ್ದ.

ಇದಾಗಿ ಸುಮಾರು ಎರಡು ವರ್ಷಗಳವರೆಗೆ ನಾನು ನನ್ನೂರಿಗೆ ಹೋಗುವುದು ಕಡಿಮೆಯಾದದ್ದಕ್ಕೋ ಏನೋ ನನ್ನ ಅವನ ಭೇಟಿಯಾಗಲಿಲ್ಲ. ಮತ್ತೆ ಸ್ವಲ್ಪ ದಿನಗಳ ಹಿಂದೆ ಅವನನ್ನು ನೋಡಿದೆ. ನಾನು ಸ್ನೇಹಿತನೊಂದಿಗೆ ಹೋಟೆಲಿಗೆ ಚಹಾ ಕುಡಿಯಲು ಹೋದಾಗ ಅಲ್ಲಿಗೆ ಅವನೂ ಬಂದಿದ್ದ ಅವನ ಸ್ನೇಹಿತನೊಂದಿಗೆ. ದೂರದಿಂದಲೇ ಕೈ ಬೀಸಿದ. ಅದೇ ನಗು ಮುಖ. ಆದರೆ ಹೊಸ ಕಳೆ ಮೂಡಿತ್ತು. ಅವನ ಹಾಕಿದ್ದ ಬಟ್ಟೆಗಳು ಉತ್ತಮ ಗುಣಮಟ್ಟದವು ಎನ್ನಿಸಿತು. ಅದಕ್ಕೆ ಕಾರಣ ಮೌನೇಶ್ವರನ ವೃತವೋ, ಅಥವಾ ಅವನ ಸ್ವತ ಪ್ರಯತ್ನವೋ ಗೊತ್ತಾಗಲಿಲ್ಲ.

ಆದರೆ ಇತಿಹಾಸ ಪುನರಾವರ್ತನೆಯಾಗದೆ ಪರಿವರ್ತನೆ ಆಗುತ್ತಿರುವಂತೆ ಭಾಸವಾಯಿತು.

Monday, July 20, 2015

Software boutiques have potential to take the party away from big IT services companies

You cannot stop automation so says the below comic strip.


In the computer age, development of software too is seeing lot of automation. For example, developing a website for a new company/business is a matter of few days task now but it was a couple of month’s project a decade ago. A business user is able to manage much of the applications his company uses when compared to a big support team required to run the same. This means the same work is done by less people supporting it.

Today ET reported that Barclays plans to cut more than 30,000 jobs citing redundancy. (Read more at: http://economictimes.indiatimes.com/articleshow/48138995.cms?utm_source=contentofinterest&utm_medium=text&utm_campaign=cppst).
Barclays is not alone. Much of the companies in BFSI (Banking, Financial Services and Insurance) are able to reduce the support staff, thanks to IT automation wave. It is nothing a new phenomenon. Bill Gates had warned about it in an interview. “People Don't Realize How Many Jobs Will Soon Be Replaced By Software Bots” (Link: http://www.businessinsider.in/Bill-Gates-People-Dont-Realize-How-Many-Jobs-Will-Soon-Be-Replaced-By-Software-Bots/articleshow/31969522.cms)

When IT jobs went offshore (or ‘Bangaloored’) India had benefited greatly through big 4 IT firms. Now the same jobs are being automated. New technologies and platforms are creating fewer new jobs than the number of jobs they are obsoleting. Hiring in big IT firms is slowing down. But the number of start-ups setting up shop is seeing a huge increase. ”Indian IT is a victim of its success” said Mohandas Pai (Read more at: http://www.moneycontrol.com/news/business/indian-it-victimown-success-start-ups-next-big-idea-mohandas-pai_2044061.html?utm_source=ref_article). Indian IT industry in the last two decades had created a big pool of talent while it drove productivity across all industries (majorly BFSI) where IT solutions were implemented. Those employees who understood the technology, needs of the customers are venturing out to become entrepreneurs. An estimate says, India has some 18,000 start-ups, expanding at the rate of 4,000 start-ups a year. Since Bangalore is already a home to many of the techies, they are creating companies in their neighborhood quite similar to the phenomenon of Silicon Valley. (http://bangalore.startups-list.com/)

All of these start-ups may not see great success but they are at the forefront in driving the technology. Some of them are innovative, flexible and cost effective. They may not grow big to be another TCS as it is not in their design and they are focused on a specific market segment instead of a wider portfolio. But when they see success it is most likely at the cost of bigger and established firms. IT budgets are closely monitored by major businesses of the world. The total spend do not grow at double digits now. So the market is not getting bigger every passing year for both big firms and start-ups to make money. As the market saturates, market share sets the winners apart from losers.

Much of the business data is moved to internet with the rise of web based applications replacing desktop run programs swiftly. The advantage of ‘body-shopping’ the bigger firms have would not give them any more upper hands over smaller firms in processing that data now. Cloud applications are making it easier through pay per use models avoiding heavy investments in IT infrastructure. Transformation is underway; it is a matter of time before the landscape changes. Now start-ups mostly funded by venture capitalists or founders themselves are not yet a dent on big firm’s earnings, they are mostly sharing the snacks. But they have all the potential of snatching the lunches from the big firms.

What do you think of Mu Sigma, a humble startup now employs a few thousand data scientists? Did big firms find the niche segment of analytics uninteresting? I think they did not play it right, so missed the bus. Acquiring successful startups and merging them into bigger companies may not always work as the culture required would be different and the margin structures do not allow a smoother integration. So the big may not continue to get bigger as they will have to share their meal with numerous small players. If they ignore small players, it will be at their risk.

Friday, July 17, 2015

Bad days for Oil & Gold are good days for Rupee. And why buy Tourism stocks now?

Gold is an alternative currency. Gold is an alternative to fixed investments. Gold protects the value in the times of inflation. Gold’s value is decided by these three factors primarily and they are not favorable to Gold now.

The reserve currency US Dollar is becoming stronger. US Fed reiterated its commitment to raise interest rates from near zero, meaning fixed investments will make a comeback in the world’s biggest economy. Many countries are worried about deflation than inflation now.

All of that is taking the air out of Gold.

Gold is trading at a crucial point now. It is giving enough signals to drop down to its strongest support levels at around $980-1000 per troy ounce. That would mean almost 15% drop from current price levels.

With Iran coming back into the market, oil supply is increasing further. So fuel (petrol & diesel) prices are likely to offer some more relief for us.

And this is all good news to Rupee as Gold and Oil are biggest components of our imports. When the trade deficit comes down, outflow of Rupee reduces. That would mean RBI need not go on buying dollars from the market. If they reduce some of the forex reserves (though it is not in their plan), Rupee can comfortably come back to Rs. 60 a dollar. If RBI does that it is a bonanza for Indian consumers and if not still there is a relief.

Reduced oil and gold prices and Rupee not devaluating helps in reducing inflation. When the inflation slows down there is a case for reducing rates. Both will leave more money in the hands of consumer. His spending power gets better. The corporate will see their bottom line improving in the same proportion and that helps NPA situation in banks too. Reduced deficit and lower rates will help Govt. function efficiently. All this will boost the economy. If inflation and interest rates come down by approx. 1% from current levels, they may translate into 1-2% higher growth rates in GDP. Our finance minister’s expectation of 10% growth may become a reality in 2016. And it is just few months away.

But do not buy the capital goods or the steel sector hoping that there will be a new investment cycle beginning soon. There is lot of overcapacity there, utilization has to go up first before the new investments come in, which is few years away.

What likely will get better are those sectors which are closer to end consumers. E-commerce sales will see a new peak in 2016. Car sales will come back. Hotels and restaurants see rushes they have not seen in the last five years. Airlines will fly at full capacity. With India opening up to foreigners with visa on arrivals and Indian citizens having more money in their pockets, tourism will see a renewed interest. 

In the stock market, we should get in before the mass does (that is in 2016), so I am looking for investments opportunities now. Do you follow any company in Tourism sector? Can you share some details? 

Thursday, July 16, 2015

Great artists but troubled lives

There are great artists who could produce great pieces of art work but yet could meet obligations of family and the societal norms. They were passionate buy yet responsible.

And there are numerous artists considered genius in their work but led faulty personal lives. They are my subject of interest today.

God when showers with great gifts to an individual he seems to blunt some other sense in him to make up for it. Like Achilles had it in in his heel. Geniuses have a great vision but yet are blind to simple things in life. Steve Jobs when fired from the company he founded, he was a given a reason that he was not sympathetic to his fellow employees. He was a great product designer but a poor people manager. Passion and tolerance do not seem to like each other. They rarely coexist peacefully.

An artist needs to have great emotional skills but at the same time he (or she) should not be sentimental. That lets him renew himself, cut-off from previous work and get ready for the next. Many great artists are versatile; they can get into shoes of various personalities rather easily. They also develop an awareness to come out of it with the same ease too. But the same skills do not go well when applied in their personal lives.

Family, friends, finance or fame, they expect care and sympathy to bond well. If you were there for family or friends when they needed it most, there are higher possibilities that it will be reciprocated. But the artist always lives in his imaginations, even when he is not painting or writing or acting or composing music. So sympathy gives him a miss.

If fortunate, an artist could get paid well for his work too. For him, money is the sixth sense to keep rest of the five senses in good humor. He is not trained to keep and grow the money. He has the least inclinations to learn the tricks of the trade. So it is a matter of time before art or money leaves him. In Indian mythology it is said that when goddess of wealth Lakshmi comes in, Sarasvati, goddess of knowledge and art takes leave.

Even when the artist is in distress, he would use art as his media to express his frustration rather than finding a friend to cry on his shoulder. But a common man does otherwise. A mediocre person visits temples or shrines or spends time in dim lit bars to find solace. Artist’s mind does not work the same way. He can be broken financially but rarely emotionally. So the spouses of great artists, however strong their bond is, cannot hold their partner’s souls to themselves.

Relationships or businesses, they expect discipline and commitment to flourish. Those qualities work against the nature of an artist. His mind wanders continuously. That makes him less dependable. People get attracted to him for his passion or intelligence. But the same is not enough to hold them together. When the material exhausts, artist’s interest dies and he moves on to newer subjects or persons. 

Artist is married to his art first and his artistic creations are the first children he has ever produced. That does not go well with the expectations of the society. So he is seldom an ideal husband or an ideal parent. Society says he is irresponsible. But the artist is deaf to it. Society thinks he had a troubled life but the artist does not agree or care. Now you may not wonder why Salman Rushdie had to marry four times. But look into his works, you would not find a half-hearted author.

Admirers of art adore the artists. But it need not be the same with those closely associated to the artists. The dogma continues.

Tuesday, July 14, 2015

ಸಣ್ಣ ಕಥೆ: ಆತ್ಮವೊಂದರ ಸ್ವಗತ

ಎಷ್ಟೋ ಸಲ ಅನ್ನಿಸಿತ್ತು. ಸಾಕು ಇನ್ನು ಜೀವನ. "ದೇವರು ಯಾವಾಗ ಮುಕ್ತಿ ಕೊಡುವನೋ?" ಎಂದು. ಆದರೆ ಇಂದು ಶಿವನ ಮೊರೆಯೇನು ಹೋಗಿರಲಿಲ್ಲ ಆದರೂ ಅವನು ಅಸ್ತು ಎಂದಾಗಿತ್ತು. ಓದಿದ ಎಷ್ಟೋ ಕಾದಂಬರಿಗಳು ಸಾವಿನಲ್ಲಿ ಮುಕ್ತಾಯವಾಗಿದ್ದು ನೆನಪಾದವು. ಹಾಗೇಯೇ ನನ್ನ ಕಥೆಯೂ ಮುಗಿದಿದೆ. ಕುತೂಹಲದಿಂದ ಅಂತಿಮ ದರ್ಶನಕ್ಕೆ ಬಂದವರತ್ತ ನೋಟ ಬೀರಿದೆ. ಬಂದಿದ್ದು ಕೆಲವೇ ಕೆಲವು ಜನ. ಆಶ್ಚರ್ಯ ಅಥವಾ ಬೇಸರ ಯಾವುದೂ ಆಗಲಿಲ್ಲ. ಏಕೆಂದರೆ ನಾನು ಇಂಥ ಸಂದರ್ಭಗಳಿಗೆ ಹೋಗಿದ್ದು ತುಂಬಾ ಕಡಿಮೆಯೇ. ಹಾಗಾಗಿಯೋ ಏನೋ ಬಂದ ಜನ ವಿಶಿಷ್ಟ ಆಸಕ್ತಿಯೇನನ್ನು ಮೂಡಿಸಲಿಲ್ಲ. ಆದರೆ ಬಂದವರಿಗೆ ಅವಸರ, ಮುಂದಿನ ಕೆಲಸಗಳತ್ತ ಗಮನ ಮತ್ತು ತಮ್ಮ ನಾಳೆಗಳ ಚಿಂತೆ ಆವರಿಸಿರುವುದು ಅವರ ಮುಖಭಾವಗಳು ಸ್ಪಷ್ಟ ಪಡಿಸುತ್ತಿದ್ದವು. ಬದುಕಿದಿದ್ದರೆ ಮುಗುಳ್ನಗುತ್ತಿದ್ದನೇನೋ? ಆದರೆ ನಿರ್ಜೀವ ಶವ ಎಲ್ಲರಿಗೂ ಹೊರೆ. ಅದಕ್ಕೆ ಒಂದು ವ್ಯವಸ್ಥೆ ಮಾಡಿದರು. ಹಾಗಾಗಿ ಸ್ಮಶಾನ ಸೇರಲಿಕ್ಕೆ ಬಹು ಹೊತ್ತೇನು ಬೇಕಾಗಲಿಲ್ಲ.

ಬರಿ ಮೈಯಲ್ಲಿ ಯಾವತ್ತು ಮಲಗದಿದ್ದ ನನಗೆ ಇದು ಹೊಸ ಅನುಭವ. ತುಂಬು ಹೊದ್ದುಕೊಂಡು ಬೆಚ್ಚಗೆ ಮಲಗುತಿದ್ದ ರಾತ್ರಿಗಳು ಹೇಗೆ ಸರಿದು ಹೋಗುತ್ತಿದ್ದವೋ ಏನೋ? ಆದರೆ ಇಂದು ಮಣ್ಣಿನ ಹೊದಿಕೆ. ಚಳಿಯೇನು ಅನ್ನಿಸುತ್ತಿಲ್ಲ. ಉಸಿರಾಡುವ ಅವಶ್ಯಕತೆ ಇಲ್ಲದಿರುವುದು ಒಳ್ಳೆಯದೇ ಆಯಿತು. ಇಲ್ಲದಿದ್ದರೆ ಮೂಗಿನಲ್ಲಿ ಮಣ್ಣು ಸೇರಿಕೊಂಡು ಏನು ಗತಿ? ಬದುಕಿದ್ದಾಗ ಬಲು ಸತಾಯಿಸಿದ್ದು ನನ್ನ ಮೂಗು. ಮೂಗಿದ್ದವರಿವಿಗೆ ನೆಗಡಿ ತಪ್ಪಿದ್ದಲ್ಲ ಎಂದು ಗಾದೆ ಮಾತು ಇದೆ. ಆದರೆ ಬಯಲು ಸೀಮೆಯಲ್ಲಿ ಹುಟ್ಟಿದ್ದ ನನಗೆ ಬೆಂಗಳೂರು ಹವಾಮಾನ ಒಗ್ಗದೆ, ಮೂಗಿನಲ್ಲಿ ಸತತ ಒರತೆ. ಯಾವುದಾದರೂ ನದಿಯ ಮೂಲ ನನ್ನ ಮೂಗಿನಲ್ಲಿದ್ದಿರಬಹುದೇ ಎನ್ನಿಸಿದ್ದು ಉಂಟು. ಅಲ್ಲಿ ಶುರುವಾದ ಕಿರಿಕಿರಿ ಗಂಟಲು, ಕಣ್ಣು, ತಲೆಗೆ ಹಬ್ಬದೇ ಸುಮ್ಮನಾದದ್ದಿಲ್ಲ. ಆದರೆ ಇಂದು ಮೂಗು ನಿಷ್ಕ್ರಿಯ. ಮುಚ್ಚಿದ ಕಣ್ಣುಗಳಿಗೆ ಗಾಢ ಅಂಧಕಾರ.

ಸಮಯ ಸರಿಯುತ್ತ ಇದೆ. ನಾಯಿ, ನರಿಗಳು ಊಳಿಟ್ಟು ಸುಮ್ಮನಾದವು. ಸರಿಸೃಪಗಳು ಹರಿದು ಹೋದದ್ದು ಬಿಟ್ಟರೆ ಬೇರೆ ಯಾವ ಶಬ್ದ ಕೇಳಿಸುತ್ತಿಲ್ಲ. ಅರೆ, ಇದು ಎಂಥ ಮೌನ. ಸ್ಮಶಾನ ಮೌನ. ಹೌದು, 'ಸ್ಮಶಾನ ಮೌನ' ಎನ್ನುವುದು ಕೇವಲ ಅಲಂಕಾರಿಕ ಶಬ್ದವಲ್ಲ. ಒಂದು ಕ್ಷಣ ಹೆಂಡತಿಯ ನೆನಪಾಯಿತು. ಅವಳಿಗೆ ಮೌನವೆಂದರೆ ಆಗಿ ಬರುವುದಿಲ್ಲ. ಇದೆಲ್ಲ ನನಗೆ. ಬಾಗಿಲು ಹಾಕಿಕೊಂಡು ಮೂದೇವಿಯಂತೆ ಓದುತ್ತ ಕೂಡುತ್ತಿದ್ದದ್ದು ನಾನೇ ಅಲ್ಲವೇ. ಇನ್ನು ಮೌನವೇ ನನ್ನ ಸಂಗಾತಿ. ಸಾಹಿತಿಗಳು ಹೇಳುವ ಹಾಗೆ ಇದು ಚಿರ ನಿದ್ರೆಗೆ ಜಾರುವ ಸಮಯ.

ಇದೇನು ಯಾರೋ ಮಾತನಾಡುವ, ಅಲ್ಲ ಕೂಗುವ ಹಾಗೆ ಕೇಳಿಸುತ್ತಿದೆಯಲ್ಲ? ಹೌದು, ಇದು ತರಕಾರಿ ಮಾರುವವಳ ಕೂಗು. ಅವಳನ್ನು ಮಣ್ಣು ಮಾಡಿದ್ದು ಇಲ್ಲೇ ಹತ್ತಿರದಲ್ಲೇ ಎಂದು ಜನ ಮಾತಾಡಿಕೊಂಡದ್ದು ನೆನಪಿಗೆ ಬಂತು. ಸಂತೆ ಎಂದರೆ ಮಾರು ದೂರ ಸರಿವ ನನಗೆ ಇದು ಎಂಥ ನೆರೆ ಹೊರೆ? ನನ್ನ ವಿಚಾರಕ್ಕೆ ಉತ್ತರ ಎನ್ನುವಂತೆ ಮತ್ತೆ ಕೇಳಿ ಬಂತು ಅದೇ ಧ್ವನಿ

"ನಾನು ಇದೇ ಜಾಗ ಎಂದು ಕೇಳಿರಲಿಲ್ವೊ, ನನ್ನ ಗಂಡ, ಮಕ್ಳು ಸೇರಿ ಹೂತು ಹೋದ್ರು. ನಿನ್ನ ಹಣೆ ಬರಹಕ್ಕೆ ನಾನೇನು ಮಾಡೋಕಾಗತ್ತೆ?"

ಇದೇನಾಶ್ಚರ್ಯ? ಹಾಗಾದರೆ ದೊಸ್ತೊವ್ಸ್ಕಿಯ ಕಥೆಯಲ್ಲಿ ಒಂದು ಪಾತ್ರವೊಂದು ಆತ್ಮಗಳ ಜೊತೆ ಮಾತನಾಡುವುದು ಬರೀ ಕಲ್ಪನೆಯಲ್ಲ. ಆದರೆ ಅದು ರಶಿಯಾದ ಕಥೆ. ಆದ್ರೇನಾಯಿತು? ಆತ್ಮಗಳಿಗೆ ದೇಶ-ಭಾಷೆಯ ಎಲ್ಲೆ ಏಲ್ಲಿ?

ಹಾಗೆಯೇ, ಆಕೆ ನನ್ನ ಹಣೆ ಬರಹ ಅಂದಿದ್ದು ಯಾಕೆ? ಬ್ರಹ್ಮನ ಬರಹಕ್ಕೆ ಸಾವಿನಲ್ಲೂ ಕೊನೆಯಿಲ್ಲವೇ? ನಾನು ' ಹಣೆ ಬರಹ ಎನ್ನುವದೆಲ್ಲ ಸುಳ್ಳು, ಅದು ಮನುಷ್ಯ ತನ್ನ ಪ್ರಯತ್ನ ಮೀರಿದ ಮೇಲೆ ಹತಾಶನಾಗಿ ಆಡುವ ಮಾತು ಅಷ್ಟೇ' ಎಂದು ವಾದಿಸುತ್ತಿದ್ದದ್ದು ಎಂಥ ವ್ಯರ್ಥ ಪ್ರಯತ್ನವಾಗಿತ್ತು! ಕೆಲವು ಸತ್ಯಗಳನ್ನು ತಿಳಿಯುವದಕ್ಕೆ ಒಂದು ಜನ್ಮ ಸಾಕಾಗುವದಿಲ್ಲವೇನೋ?

ಅದೇನೇ ಇರಲಿ, ಮೃತರ ಲೋಕದಲ್ಲಿ ನಮ್ಮ ವಿಚಾರದ ಮೂಲಕವೇ ಇತರರೊಂದಿಗೆ ಸಂಪರ್ಕ ಸಾಧಿಸಬಹುದು ಎಂದಾಯಿತು. ಅದರ ಜೊತೆಗೇನೆ ನಾನು ಇನ್ನು ಶಾಲಾ ದಿನಗಳಲ್ಲಿದ್ದಾಗ ತೀರಿಕೊಂಡ ಅಜ್ಜಿಯ ನೆನಪಾಯಿತು. ಎಂಥ ನಿಷ್ಕಲ್ಮಶ ಪ್ರೀತಿ ಅಜ್ಜಿಯದ್ದು. ನಸುಕಿನಲ್ಲಿ ಎದ್ದು ಸ್ನಾನ ಮಾಡಿ, ಅವಳ ದೇವರ ಪೂಜೆಗೆ ಮಡಿ ನೀರು ಹಿಡಿದು, ಸಂಜೆ ಶಾಲೆ ಮುಗಿದ ನಂತರ ಅವಳ ಮನೆಯಲ್ಲೇ ನಡೆಸುತ್ತಿದ್ದ್ದ ಅಕ್ಕಿ ವ್ಯಾಪಾರದಲ್ಲೂ ನೆರವಾಗುತ್ತಿದ್ದೆ. ಅವಳು ಪುಡಿಗಾಸನ್ನು ನನ್ನ ಕೈಯಿಂದ ಒಮ್ಮೆ ಎಣಿಸಿ ತನ್ನ ಲೆಕ್ಕ ಸರಿಯಾಗಿದೆಯೇ ಎಂದು ಖಾತರಿ ಪಡೆಸಿಕೊಳ್ಳುತ್ತಿದ್ದಳು. ಹೊಲದಲ್ಲಿ ರಾಶಿ ನಡೆದಿರುವಾಗ, ಚಿಕ್ಕವನಿದ್ದ ನನ್ನನ್ನು ಅವಳು ಕೈ ಹಿಡಿದು ಅಷ್ಟು ದೂರ ನಡೆಸಿದ್ದು, ಹಳ್ಳ ದಾಟುವ ಜಾಗೃತೆಯನ್ನು ಕಲಿಸಿದ್ದು ಮಸುಕು ಮಸುಕಾಗಿ ನೆನಪಿದೆ. ಪರಲೋಕದಲ್ಲಿ ಅವಳು ಮತ್ತೆ ನನ್ನ ಕೈ ಹಿಡಿದು ನಡೆಸಬಹುದೇನೋ? ಆದರೆ ಅವಳನ್ನು ಹೇಗೆ ಹುಡುಕುವುದು? ಮತ್ತೆ ಕೇಳಿ ಬರುತ್ತಿದ್ದ ಶಬ್ದಗಳಿಗೆ ಕಿವಿ ಕೊಟ್ಟೆ.

ಅಲ್ಲಿ ನಡೆಯತ್ತಿದ್ದದ್ದು ಇಹಲೋಕದಿಂದ ಭಿನ್ನವಾಗೇನೂ ಇರಲಿಲ್ಲ. ಹುಟ್ಟು ಗುಣ ಸುಟ್ಟರೂ ಹೋಗದು ಎಂಬಂತೆ, ಒಬ್ಬ ತನ್ನ ಕಾಯಕವನ್ನು ಮರಣದ ನಂತರವೂ ಮುಂದುವರಿಸಿದ್ದ. ಇಲ್ಲಿಯೂ ಅವನಿಗೆ ಹಿಂಬಾಲಕರು ದೊರಕಿದ್ದರು. ಅವನಿಗೆ ಇಲ್ಲಿ ನಡೆಯುವ ಪ್ರತಿಯೊಂದು ಆಗು-ಹೋಗುಗಳ ಮಾಹಿತಿ ಬೇಕಿತ್ತು. ಅವರೊಲ್ಲಬ್ಬ ಹೇಳುತ್ತಿದ್ದ ಸ್ಮಶಾನದಲ್ಲಿನ ಹೊಸ ಆಗಮನದ ಬಗ್ಗೆ. ನನಗೆ ಸ್ಪಷ್ಟವಾಯಿತು, ಅದು ನನ್ನ ಬಗ್ಗೇನೇ.

'ಏನೋ ಕಥೆ ಬರೀತಿದ್ನಂತೆ. ಕರೆಸಿ ಕೇಳೋಣ. ಇಲ್ಲೇನು ಕಥೆ ಕಟ್ತಾನಂತೆ'.

ನಿಜ, ನರಕದ ನಾಯಕರು ನನ್ನ ಕಥೆಗೆ ವಸ್ತುವಾಗುವದರಲ್ಲಿ ಯಾವುದೇ ಸಂದೇಹ ಇರಲಿಲ್ಲ. ಆದರೆ ಇದರ ಸಲುವಾಗಿಯೋ ನಾನು ದೇವರ ಹತ್ತಿರ ಮುಕ್ತಿ ಕೇಳಿದ್ದು?

ಸಮಸ್ಯೆಗಳು ಸಾವಿನಲ್ಲಿ ಮುಕ್ತಾಯ ಕಾಣದಿದ್ದರೆ, ಬದುಕುವುದೇ ಎಷ್ಟೋ ಲೇಸು. ಬದುಕಿದ್ದರೆ ಕೆಲ ಸಮಸ್ಯೆಗಳಿಗಾದರೂ ಪರಿಹಾರ ಕಾಣಿಸಬಹುದಾಗಿತ್ತು. ಹಾಗಿದ್ದರೆ ಸಾವು ಬಯಸುವುದು ಒಂದು ತರಹ ಕೆಲವರು ಹೇಳುವ ಪ್ರಕಾರ ಪಲಾಯನವೇ. ಇಹಲೋಕ-ಪರಲೋಕಕ್ಕೆ ಇರುವ ಅಂತರ ಚಿಂತೆ-ಚಿತೆಗೆ ಇರುವಷ್ಟೇ ಅಂತರ. ಬದುಕಿದ್ದಲ್ಲಿ ಚಿಂತೆಗಳನ್ನು ಕಡಿಮೆ ಮಾಡಿಕೊಳ್ಳಬಹುದೇನೋ? ಆದರೆ ಸಾವು ಇತಿಹಾಸದ ಕೊನೆಯ ಪುಟ.

ಅರೆ, ಎಂತಹ ತಪ್ಪಾಯಿತು. ಕೆಲ ಸಮಸ್ಯೆಗಳನ್ನು ಕೊನೆಗಾಣಿಸಿಕೊಂಡಿದ್ದರೆ ಇನ್ನೂ ನೆಮ್ಮದಿಯ ಸಾವು ನನ್ನದಾಗಬಹುದಾಗಿತ್ತು. ಬದುಕಿದ್ದಾಗ 'ಸಾವು ಕೊಡು' ಎಂದು ದೇವರಲ್ಲಿ ಕೇಳಿದ ಹಾಗೆ, ಸತ್ತ ಮೇಲೆ 'ಮತ್ತೆ ಬದುಕು ಕೊಡು' ಎಂದು ಕೇಳಲು ಸಾಧ್ಯವೇ?