ಮಸ್ಕಿಯ ಬೆಟ್ಟದ ಮೇಲಿನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಮೇಲಿನ ಸುಣ್ಣ ಬಣ್ಣವನ್ನು ತೆರವುಗೊಳಿಸಿದ್ದರಿಂದ, ದೇವಸ್ಥಾನದ ಗೋಡೆಗಳ ಮೇಲಿದ್ದ ಉಬ್ಬು ಶಿಲ್ಪಗಳು ಸ್ಪಷ್ಟವಾಗಿ ಗೋಚರಿಸತೊಡಗಿವೆ.
ಸಾಕಷ್ಟು ಶಿಲ್ಪಗಳು ವಿಜಯನಗರ ಸಾಮ್ರಾಜ್ಯಕ್ಕಿಂತ ಹಳೆಯದಾಗಿರಬಹುದಾದ ಶೈಲಿಯನ್ನು ಹೋಲುತ್ತವೆ. ಸುಮಾರು ಎಂಟು ನೂರು-ಸಾವಿರ ವರುಷ ಅಥವಾ ಅದಕ್ಕೂ ಹಳೆಯದಾದ ಇತಿಹಾಸ ಈ ದೇವಸ್ಥಾನಕ್ಕಿರಬಹುದು ಎನ್ನುವುದು ನನ್ನ ಅಂದಾಜು. ಅಚ್ಚರಿ ಎನ್ನುವಂತೆ ಕೆಲವು ಮಿಥುನ ಶಿಲ್ಪಗಳು ಕೂಡ ಈ ದೇವಸ್ಥಾನದ ಗೋಡೆಗಳ ಮೇಲಿವೆ.
ಬಾಗಿಲುಗಳ ಸುತ್ತ ಮೆದು ಕಲ್ಲಿನಲ್ಲಿ ಮೂಡಿರುವ ಶಿಲ್ಪಗಳು, ಹೊರ ಗೋಡೆಗಳ ಮೇಲೆ ಕಟ್ಟಡ
ಕಲ್ಲಿನಲ್ಲೇ ಮೂಡಿವೆ. ಬೇರೆ ಬೇರೆ ಕಾಲದಲ್ಲಿ ಈ ಶಿಲ್ಪಗಳು (ನವೀಕರಣ, ಪುನರುಜ್ಜೀವನ ಸಮಯದಲ್ಲಿ) ಇಲ್ಲಿ ಜೋಡಣೆಗೊಂಡಿರುವ ಸಾಧ್ಯತೆ ಕೂಡ ಇದೆ. ಹಾಗಾಗಿ ಎಲ್ಲ ಶಿಲ್ಪಗಳು ಒಂದೇ ಕಾಲಮಾನದ್ದಾಗಿರಲಿಕ್ಕಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಅದನ್ನು ತಜ್ಞರೇ ದೃಢಪಡಿಸಬೇಕು.
|
ಮುಂಬಾಗಿಲನ ಮೇಲೆ ಪಂಚವಾದ್ಯಗಳನ್ನು ನುಡಿಸುತ್ತಿರುವವರು
|
No comments:
Post a Comment