Wednesday, August 2, 2023

ಕವನ: ದುಡ್ಡು ಒಂದೇ, ನಾಮ ಹಲವು

(ದುಡ್ಡು ಪರಿಸ್ಥಿತಿಗೆ ತಕ್ಕಂತೆ ಹಲವಾರು ಹೆಸರುಗಳಲ್ಲಿ ಕರೆಸಿಕೊಳ್ಳುತ್ತದೆ)

ಸರ್ಕಾರಕ್ಕೆ ಕಟ್ಟಿದರೆ ತೆರಿಗೆ
ಕೋರ್ಟ್ ಗೆ ಕಟ್ಟಿದಾಗ ದಂಡ

ಶಾಲೆಗೆ ಕಟ್ಟಿದರೆ ಶುಲ್ಕ
ಮಕ್ಕಳ ಕೈಯಲ್ಲಿಟ್ಟರೆ ಪುಡಿಗಾಸು

ಅರ್ಚಕರಿಗೆ ಕೊಟ್ಟರೆ ದಕ್ಷಿಣೆ
ಮಾವ ಕೊಟ್ಟರೆ ವರದಕ್ಷಿಣೆ

ದುಡಿದಾಗ ಅದು ಸಂಬಳ
ಕಿತ್ತುಕೊಂಡಾಗ ಅದು ಗಿಂಬಳ

ಬ್ಯಾಂಕ್ ನಲ್ಲಿ ಇಟ್ಟಾಗ ಜಮೆ
ಬ್ಯಾಂಕ್ ನಿಂದ ತೆಗೆದುಕೊಂಡರೆ ಸಾಲ

ವ್ಯಾಪಾರದಲ್ಲಿ ಗಳಿಸಿದರೆ ಲಾಭ
ವೃಥಾ ಖರ್ಚು ಮಾಡಿದಾಗ ನಷ್ಟ

ಶ್ರಮ ಪಟ್ಟರೆ ಕೂಲಿ
ಕಳ್ಳ ದೋಚಿದರೆ ಸುಲಿಗೆ

ಸುಮ್ಮನೆ ಕೊಟ್ಟರೆ ದಾನ
ಹುಂಡಿಗೆ ಹಾಕಿದರೆ ಕಾಣಿಕೆ

No comments:

Post a Comment