Saturday, November 28, 2020

ಮುತ್ತು ರತ್ನ ಮಾರಿದ ನೆಲದ ಮಣ್ಣನ್ನೇ ಮಾರಿಕೊಳ್ಳುವ ದುರಾದೃಷ್ಟ

ಇಂದಿಗೆ ವಿಜಯನಗರ ಹೊಸ ಜಿಲ್ಲೆಯಾಗಿದೆ. ಆದರೆ ಐದು ಶತಮಾನಗಳ ಹಿಂದೆ ಇದು ಒಂದು ಸಾಮ್ರಾಜ್ಯವಾಗಿತ್ತಲ್ಲವೇ? ಮುತ್ತು ರತ್ನಗಳನ್ನು ಬೀದಿಯಲ್ಲಿ ವ್ಯಾಪಾರ ಮಾಡಿದ ಅಲ್ಲಿನ ಜನರು ಇಂದಿಗೆ ಹಿಂದುಳಿದ ಜಿಲ್ಲೆಗಳ ಜನರಾಗಿ ಪರಿವರ್ತತವಾದದ್ದು ಹೇಗೆ? ಹಂಪಿಯು ಭಾರತಕ್ಕೆ ಅಷ್ಟ ಅಲ್ಲ, ಬದಲಿಗೆ ಆವತ್ತಿನ ಕಾಲದಲ್ಲಿ ವಿಶ್ವದ ಪ್ರಮುಖ ನಗರಗಳಲ್ಲಿ ಒಂದಾಗಿತ್ತು. ಸಾಕಷ್ಟು ವಿದೇಶಿ ಪ್ರವಾಸಿಗರು ಹಂಪೆಯನ್ನು ರೋಮ್ ಗೆ ಹೋಲಿಸಿ ಕೊಂಡಾಡಿದ್ದರು. ಅಲ್ಲಿ ಆಡಳಿತ ಇದ್ದದ್ದು ಯಾವುದೊ ಸಣ್ಣ ಸಾಮಂತ ಅಥವಾ ಪಾಳೇಗಾರನದ್ದೋ ಅಲ್ಲವಲ್ಲ. ದಕ್ಷಿಣ ಭಾರತದ ಕೇಂದ್ರ ಬಿಂದು ಎನ್ನುವಂತೆ ೨೩೦ ವರ್ಷಗಳ ಕಾಲ ಗುರುತಿಸಿಕೊಂಡ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ಹಾಳು ಬೀಳುವಂತೆ ಮಾಡಿದ, ಮತ್ತೆ ಯಾವುದೇ ಕಾರಣಕ್ಕೆ ಪುನರುಜ್ಜಿವಿತಗೊಳ್ಳದಂತೆ ತಡೆದ ಕಾರಣಗಳು ಏನು? ಲಕ್ಷಾಂತರ ಜನ ಬದುಕಿದ ಒಂದು ಪಟ್ಟಣ ದುರಾದಷ್ಟದ ಹಣೆ ಪಟ್ಟಿ ಕಟ್ಟಿಕೊಂಡು ನೇಪಥ್ಯಕ್ಕೆ ಸರಿದು ಹೋದದ್ದು ಏಕೆ?


ದೆಹಲಿಯ ಚರಿತ್ರೆ ಗಮನಿಸಿ ನೋಡಿ. ಅಲ್ಲಿ ಸಾಕಷ್ಟು ರಾಜವಂಶಗಳು ಅಧಿಕಾರ ನಡೆಸಿ ಹೋಗಿವೆ. ಕೆಲವು ಹಿಂದೂ, ಕೆಲವು ಮುಸ್ಲಿಂ, ಆಮೇಲೆ ಬ್ರಿಟಿಷರು. ಆದರೂ ದೆಹಲಿ ಸ್ವತಂತ್ರ ಭಾರತದ ರಾಜಧಾನಿಯಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ಎಷ್ಟು ಬಾರಿ ಆಕ್ರಮಣಕ್ಕೊಳಗಾದರೂ ಮತ್ತೆ ಎದ್ದು ನಿಂತಿದೆ. ಅಥವಾ ಕಾಶಿ ಪಟ್ಟಣವನ್ನು ಗಮನಿಸಿ ನೋಡಿ. ಪುರಾತನ ಕಾಲದ ಈ ಪಟ್ಟಣ ಅಂದಿಗೂ, ಇಂದಿಗೂ ತನ್ನ ಇರುವಿಕೆಯನ್ನು ಮತ್ತು ಸ್ವಂತಿಕೆಯನ್ನು, ಕಾಲಾತೀತವೆನ್ನುವಂತೆ ಉಳಿಸಿಕೊಂಡು ಬಂದಿದೆ. ಬಹು ಜನ ಬದುಕಿದ್ದ ಪಟ್ಟಣಗಳೆಲ್ಲವೂ ತಮ್ಮ ವೈಭವವನ್ನು ಕಳೆದುಕೊಂಡರೂ ಜನರ ವಾಸಕ್ಕೆ ದೂರ ಎನ್ನುವಂತೆ ಮರೆಯಾಗಿ ಹೋಗಲಿಲ್ಲ.


ಆದರೆ ನಮ್ಮ ಹಂಪಿಯನ್ನೇ ನೋಡಿ, ಅದು ಇಂದಿಗೆ ಕರ್ನಾಟಕದ ಅಥವಾ ಆಂಧ್ರ ಪ್ರದೇಶದ ರಾಜಧಾನಿಯಾಗಿ ಬದಲಾಗಬೇಕಿತ್ತು. ಅದಿಲ್ಲದಿದ್ದರೆ, ಒಂದು ಜಿಲ್ಲಾ ಕೇಂದ್ರವೋ ಅಥವಾ ಒಂದು ದೊಡ್ಡ ಪಟ್ಟಣವೋ ಆಗಬೇಕಿತ್ತು. ಅವ್ಯಾವವೂ ಆಗಲಿಲ್ಲ. ೧೫೬೫ ರಲ್ಲಿ ಹಂಪಿಯನ್ನು ತೊರೆದ ಸಾಕಷ್ಟು ಜನ  ಆಶ್ರಯಿಸಿದ್ದು, ಹೊಸ ಊರನ್ನು ಕಟ್ಟಿಕೊಂಡಿದ್ದು ಹತ್ತಿರದ ಹೊಸಪೇಟೆಯಲ್ಲಿ. ಆದರೆ ಒಂದು ಸಾಮ್ರಾಜ್ಯವನ್ನು ಕಟ್ಟಬಲ್ಲ ಮತ್ತು ಅದನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಬಲ್ಲ ಚಾತುರ್ಯ ಮತ್ತು ನೈಪುಣ್ಯತೆ ಇದ್ದ ಜನರು ಈ ಪ್ರದೇಶವನ್ನು ಶಾಶ್ವತವಾಗಿ ಎನ್ನುವಂತೆ ತೊರೆದು ಹೋದರು. ಏಕೆಂದರೆ ಅವರನ್ನು ಹಿಡಿದಿಡುವ ಶಕ್ತಿ ವಿಜಯನಗರ ಸಾಮ್ರಾಜ್ಯದ ಅವನತಿಯೊಂದಿಗೆ ಮುಗಿದು ಹೋಗಿತ್ತು. ಯುದ್ಧ ಗೆದ್ದವರಿಗೂ, ಹಂಪಿಯನ್ನು ಹಾಳುಗೆಡುವುದರಲ್ಲಿ ಇದ್ದ ಉತ್ಸಾಹ ಅದನ್ನು ಕಾಪಾಡಿ ತಮ್ಮ ಆಳ್ವಿಕೆಗೆ ಒಳಪಡಿಸಿಕೊಳ್ಳುವದರ ಬಗ್ಗೆ ಇರಲಿಲ್ಲ. ಹಂಪಿಯು ಅವರ ಕಣ್ಣನ್ನು ಶತಮಾನಗಳ ಕಾಲ ಕುಕ್ಕಿತ್ತಲ್ಲ. ವೈಭವದ ಉತ್ತುಂಗ ಹೆಚ್ಚಿನ ಶತ್ರುಗಳನ್ನು ಸೃಷ್ಟಿ ಮಾಡುವುದು ಸಾಮಾನ್ಯ ವಿಷಯ ತಾನೇ? ಯುದ್ಧ ಸೋತ ಸುದ್ದಿ ತಲುಪಿದ ತಕ್ಷಣ, ರಾಮರಾಯನ ತಮ್ಮಂದಿರು, ವಂಶಸ್ಥರು ಸಾಧ್ಯವಾದಷ್ಟು ಸಂಪತ್ತನ್ನು ಆನೆಗಳ ಮೇಲೆ ಹೇರಿಕೊಂಡು ಪೆನುಗೊಂಡಗೆ ಸಾಗಿದರು. ಹಂಪಿಯ ರಕ್ಷಣೆ ವಿರೂಪಾಕ್ಷನ ಪಾಲಿಗೆ ಬಿತ್ತು. ಮೊದಲಿಗೆ ಸುತ್ತ ಮುತ್ತಲಿನ ಕಳ್ಳ-ಕಾಕರೇ ಹಂಪಿಯನ್ನು ದೋಚಿದರು. ನಂತರದ ದಿನಗಳು ಹಂಪಿಯ ಚರಿತೆಯಲ್ಲಿ ಕರಾಳ ದಿನಗಳು. ಆಗ ನಡೆದ ದೌರ್ಜನ್ಯದ ಭೀಕರತೆಗೆ ಸಾಕ್ಷಿಯಾಗಿ ಇಂದಿಗೂ ಭಗ್ನ ಅವಶೇಷಗಳು ನಿಂತಿವೆ. ತುಂಗಭದ್ರೆಯು ಹಂಪೆಯ ಎಲ್ಲ ರಕ್ತದ ಕಲೆಗಳನ್ನು ತೊಳೆದು ಹಾಕಿದರೂ, ಜನರ ಭೀತಿ ಮರೆಯಾಗಿ ಹೋಗಲೇ ಇಲ್ಲ. ಯಾರಿಗೂ ಬೇಡವಾಗಿ ಹೋದ ಹಂಪೆಯನ್ನು ಮತ್ತಷ್ಟು ಹಾಳುಗೆಡವಿದ್ದು ಕಾಲನ ಮಹಿಮೆ.


ಕಳೆದು ಹೋದ ಗತ ವೈಭವದ ಬಗ್ಗೆ ಮಾತನಾಡುವ ನಾವು, ವಿಜಯನಗರದ ಅರಸರಿಗೆ ಸಾಧ್ಯವಾಗಿದ್ದು ಅವರ ನಂತರದ ಸಮಾಜಕ್ಕೆ ಏಕೆ ಸಾಧ್ಯವಾಗಲಿಲ್ಲ ಎಂದು ಯೋಚಿಸುವುದಿಲ್ಲ. ಮುತ್ತು ರತ್ನ ಬೀದಿಗಳಲ್ಲಿ ಮಾರಿ ವೈಭವದ ತುದಿ ತಲುಪಿದ ಕೀರ್ತಿ ಅಂದಿನ ಅರಸರದಾದರೆ, ಅದೇ ಪ್ರದೇಶದ ಮಣ್ಣನ್ನು ವಿದೇಶಗಳಿಗೆ ಮಾರಿಕೊಳ್ಳುವ ಅಪಕೀರ್ತಿ ನಮ್ಮ ಇಂದಿನ ಸಮಾಜದ್ದು ಎನ್ನುವುದೇ ದುರಾದೃಷ್ಟ.


Picture Credit: Shivashankar Banagar

Monday, November 23, 2020

ಗಾನಕೆ ಮಣಿಯದ ಜೀವವೇ ಇಲ್ಲ

ಗಾನಕೆ ನಲಿಯದ ಮನಸೇ ಇಲ್ಲ,

ಗಾನಕೆ ಮಣಿಯದ ಜೀವವೇ ಇಲ್ಲ,

ಗಾನಕೆ ಒಲಿಯದ ದೇವರೇ ಇಲ್ಲ,

ಗಾನವೇ ತುಂಬಿದೆ ಈ ಜಗವೆಲ್ಲಾ

('ಉಪಾಸನೆ' ಚಿತ್ರದ 'ಭಾವವೆಂಬ ಹೂವು ಅರಳಿ' ಹಾಡಿನ ಸಾಲುಗಳು)


ಎಲ್ಲರಿಗೂ ಅವರ ಮನ ತಣಿಸುವ ಒಂದು ಹಾಡು ಇದ್ದೇ ಇರುತ್ತದೆ. ಅದು ಚಲನ ಚಿತ್ರದ ಹಾಡಾಗಿರಬಹುದು ಅಥವಾ ಭಾವಗೀತೆ ಇಲ್ಲವೇ ವಚನಗಳೋ ಇಲ್ಲವೋ ಭಕ್ತಿಗೀತೆಗಳೋ ಹೀಗೆ ಒಂದು ಹಾಡು ಕೇಳಿದ ತಕ್ಷಣ ಮನಸ್ಸು ಅದರಲ್ಲಿ ಲೀನವಾಗಿ ನಮ್ಮ ಭಾವನೆಗಳೆಲ್ಲ ಒಟ್ಟಾಗಿ ಹಾಡಾಗಿ ಹರಿಯುತಿದೆಯೋನೋ ಎನ್ನಿಸಿದ್ದರೆ ಅದು ನಿಮ್ಮ ಸುಪ್ತ ಮನಸ್ಸಿನ ಪ್ರತೀಕವಾದ ಹಾಡು. ಹಾಡನ್ನು ಆಸ್ವಾದಿಸುವುದರ ಜೊತೆಗೆ ಯಾವ ವಿಷಯ ಈ ಹಾಡನ್ನು ನಿಮಗೆ ಇಷ್ಟು ಹತ್ತಿರಕ್ಕೆ ತಂದಿದೆ ಎನ್ನುವ ಕಾರಣಗಳನ್ನು ಅವಲೋಕಿಸಿ ನೋಡಿ. ನೀವು ವ್ಯಕ್ತ ಪಡಿಸಲು ಸಾಧ್ಯವಾಗದ ಅನುಭೂತಿಗಳನ್ನು ಆ ಹಾಡು ಹೊರ ತಂದಿರುತ್ತದೆ ಮತ್ತು ನಿಮ್ಮ ಅಂತರಾಳದ ವಿಚಾರಗಳನ್ನು ಪ್ರತಿಬಿಂಬಿಸುತ್ತಿರುತ್ತದೆ.


ಕಥೆ-ಕಾದಂಬರಿಕಾರರಿಗಿಂತ, ಕವಿಗಳಿಗೆ ಭಾಷೆಯನ್ನು ಬಳಸುವ ಪ್ರಜ್ಞೆ ಸದಾ ಜಾಗೃತವಾಗಿರುತ್ತದೆ. ಬರಿ ಪ್ರಾಸಬದ್ಧ ಪದಗಳನ್ನು ಹುಡುಕುವುದಷ್ಟೇ ಅಲ್ಲವಲ್ಲ, ಬದಲಿಗೆ ಉಲ್ಲಾಸಗೊಳಿಸುವ ಇಲ್ಲವೇ ವಿಷಾದದ ಕೂಪಕ್ಕೆ ನೂಕುವ ಕೆಲಸ ಹಾಡಿನಿಂದಾಗಬೇಕು. ಅದಕ್ಕೆ ಕವಿಯ ಜೊತೆಗೆ, ಭಾವನೆಗಳಿಗೆ ಜೀವ ತುಂಬುವ ಕೆಲಸ ಗಾಯಕ/ಗಾಯಕಿಯರಿಂದ ಮತ್ತು ಹಾಡಿಗೆ ರಾಗ, ಪ್ರಾಸ ಜೋಡಿಸಿ ಸಂಗೀತ ಸಂಯೋಜಿಸುವವರ ಪ್ರಯತ್ನವೂ ಒಟ್ಟುಗೂಡಬೇಕು. ಆ ತಂಡ ಒಂದೇ ಲಹರಿಗೆ ಬಂದಾಗ ಒಂದು ಅದ್ಭುತ ಹಾಡು ಹುಟ್ಟುತ್ತದೆ.


ಇದನ್ನು ಮನಗಂಡಿದ್ದ ವಚನಕಾರರು, ಗ್ರಂಥಗಳನ್ನು ರಚಿಸದೇ ಸಾಮಾನ್ಯ ಮನುಷ್ಯನ ಮೇಲೇ ಅಳಿಯದ ಪ್ರಭಾವ ಬೀರುವಂತ ಗಾನಮಯವಾದ ವಚನಗಳನ್ನು, ಭಕ್ತಿ ಗೀತೆಗಳನ್ನು ರಚಿಸಿ ಅಜರಾಮರರಾದರು. ಇಂದಿಗೆ ಬಸವಣ್ಣನವರ ವಚನಗಳನ್ನು ವಿಮರ್ಶಿಸಿ, ಅರ್ಥೈಸಿ ನೂರಾರು ಪುಸ್ತಕಗಳು ಬಂದಿದ್ದರೂ, ಬಸವಣ್ಣನವರೇ ನಮಗೆ ಹೆಚ್ಚು ಹತ್ತಿರ  ಅಲ್ಲವೇ? ಅಕ್ಕ, ಸರ್ವಜ್ಞ, ಪುರಂದರ ದಾಸರು ಇದಕ್ಕೆ ಹೊರತಲ್ಲ. ಋಗ್ವೇದವನ್ನು ವ್ಯಾಖ್ಯಾನಗೊಳಿಸಲು ೧೦೮ ಉಪನಿಷತ್ತುಗಳು ಬಂದಿದ್ದರೂ, ಋಗ್ವೇದದ ಒಂದು ಮಂತ್ರವಾದ 'ಗಾಯತ್ರಿ ಮಂತ್ರ' ದ ಹಾಗೆ ಅವನ್ನು ಜಪಿಸಲು ಸಾಧ್ಯವೇ? ಶಿಶುನಾಳ ಶರೀಫರು ಆಧ್ಯಾತ್ಮದ ಸಾರವನ್ನು ತಮ್ಮ ಹಾಡೊಳಗೆ ತುಂಬಲಿಲ್ಲವೇ? ಜಾನಪದ ಜನರ ನಾಲಿಗೆಯ ಮೇಲೆ ಉಳಿದ ಬಗೆಯೂ ಇದೆ ಅಲ್ಲವೇ? ಮಂತ್ರಗಳಿಗೆ ಶಕ್ತಿ ಇದೆಯೋ ಇಲ್ಲವೋ, ಆದರೆ ಹಾಡುಗಳಿಗೆ ಮಂತ್ರಶಕ್ತಿ ಇದೆ ಅನ್ನಿಸುವುದು, ಎಷ್ಟೋ ವಚನ, ಕೀರ್ತನೆ ರಚಿಸಿದ ಕರ್ತೃಗಳು ಕಾಲವಾಗಿ ಶತಮಾನಗಳು ಕಳೆದು ಹೋದರೂ, ಅವರ ರಚನೆಗಳು ಕಾಲಾತೀತ ಎನ್ನುವಂತೆ ಉಳಿದುಕೊಂಡಿರುವುದನ್ನು ನೋಡಿ.


ನೀವು ಗಮನಿಸಿಯೇ ಇರ್ತೀರಿ. 'ಸಂಗೀತ ಸಂಜೆ' ಕಾರ್ಯಕ್ರಮಗಳಿಗೆ ಜನರನ್ನು ಒಟ್ಟುಗೂಡಿಸಲು ಯಾವ ಪ್ರಯತ್ನವೂ ಬೇಕಿಲ್ಲ. ಅವರು ತಾವಾಗಿಯೇ ಬರುತ್ತಾರೆ. ಒತ್ತಡದ ಚಾಕಟ್ಟು ದಾಟಿ, ಮನದಣಿಯೇ ಹಾಡು ಕೇಳಿ ಮೈ ಮರೆಯಲು ಮುತುವರ್ಜಿಯ ಆಹ್ವಾನ ಬೇಕೇ? ಬರೀ ಮನುಷ್ಯರಿಗೆ ಇಲ್ಲವೇ ದೇವರಿಗೆ ಪ್ರಿಯವಾದದ್ದು ಈ ಹಾಡು ಎಂದುಕೊಳ್ಳಬೇಡಿ. ಡಾ. ರಾಜಕುಮಾರ್ ರ ಹಾಡುಗಳನ್ನು ಕೇಳುತ್ತ ಹೆಚ್ಚು ಹಾಲು ಕರೆದ ಹಸು-ಎಮ್ಮೆಗಳ ಬಗ್ಗೆ ಓದಿದ್ದ ನೆನಪು ನನಗೆ ಇದೆ. ಹಿಂದೆ ದ್ವಾಪರ ಯುಗದಲ್ಲಿ, ಕೃಷ್ಣನ ಮುರಳಿಯ ಕರೆ ಕೂಡ ಗೋಕುಲದ ಹಸುಗಳಿಗೆ ಇದೆ ರೀತಿಯ ಮೋಡಿ ಮಾಡಿರಬೇಕು. ಹಾಗೆ ಕಿಂದರಿ ಜೋಗಿಯು ಮೊದಲಿಗೆ ಮೂಷಿಕಗಳನ್ನು, ನಂತರ ಊರಿನ ಮಕ್ಕಳನ್ನು ಮೋಹಿತಗೊಳಿಸಿದ್ದು ಸಣ್ಣ ವಿದ್ಯೆಯೇ?


ಕಲೆಯ ಪ್ರಾಕಾರಗಳಲ್ಲಿ ಯಾವುದು ಹೆಚ್ಚು ಅಥವಾ ಕಡಿಮೆ ಎನ್ನುವ ಜಿಜ್ಞಾಸೆ ನನ್ನದಲ್ಲ. ಆದರೆ ಸಾಮಾನ್ಯ ಜನರಲ್ಲಿ ಹೆಚ್ಚಿನ ಪರಿಣಾಮ ಬೀರುವುದು ಸಾಧ್ಯ ಎನ್ನಿಸುವುದು ಗೀತೆ-ಸಂಗೀತದ ಮೂಲಕ ಎನ್ನುವುದು ನನ್ನ ಅಭಿಪ್ರಾಯ ಅಷ್ಟೇ.


ಜೀವನದಲ್ಲಿ ಬೇಸರವಾದಾಗ, ಕಳೆದು ಹೋದ ಭಾವನೆ ಬಂದಾಗ ಮಾತ್ರ ಇಷ್ಟದ ಹಾಡುಗಳನ್ನು ಕೇಳಬೇಕು ಎಂದೆನಿಲ್ಲವಲ್ಲ. ಅದಕ್ಕಾಗಿಯೇ ನಾನು ಕಳೆದು ಹೋಗುವ ಮುನ್ನವೇ, ನನ್ನತನ ತುಂಬುವ ಹಾಡುಗಳ ಮೊರೆ ಹೋಗುತ್ತೇನೆ. ಎದೆಯ ಲಹರಿಯ ಪ್ರತಿಧ್ವನಿ ಆಗುತ್ತವೆ ಈ ಹಾಡುಗಳು ಮತ್ತು ಬದುಕುವ ಉತ್ಸಾಹ ಬಾಡಿ ಹೋಗದಂತೆ ನನ್ನನ್ನು ಕಾಪಾಡುತ್ತವೆ. ಅಂದ ಹಾಗೆ ನಿಮ್ಮ ಇಷ್ಟದ ಹಾಡುಗಳು ಯಾವವು?

 

Friday, November 20, 2020

Breathing efficiency

If we look at the frequency of the inputs we provide to our body, food intake is typically 3 times a day, water is more frequent, 8-10 times a day or even more. But breathing is round the clock, that continues even when we are sleeping. So, it would be interesting to understand the efficiency of breathing.


We inhale through nose, it travels through the passage, reaches lungs and there oxygen is absorbed into the body to join the bloodstream and further it travels to various parts of the body. Note that oxygen it is absorbed at lungs and not in the passage (nasal or throat region). If we are inhaling for 3 seconds on an average, the air we inhaled at the third second will be stopped before it reaches lungs and it will be forced to return halfway as exhalation begins. Similarly, when we exhale, the air which is carbon di-oxide primarily, does not completely get out of our body as some of it in the passage at the third second of exhalation will be forced to return due to inhalation. This suggests what we can make use of, whether inhalation or exhalation, is 2 out 3 seconds only. Thus we arrive at 66% of efficiency number. It does not look great for the thing we do throughout our life. What can be done about this?

 

Before we go to bed, when we are slowing down, we have few minutes to ourselves. Whether you are sitting or lying down, completely free up your body, avoid any smaller movements and ignore all those itches. When your body is at still, energy demand from body drops and breathing rate slows a little, inhale and exhale expands by a second (to 4 seconds from what we considered 3 seconds before). Now if we do the same math, 3 seconds of breathing out of 4 will be useful and efficiency is at 75%. As you know breathing also consumes some energy and when breathing becomes slow and efficiency increases, body’s energy demand drops little further. If you can close your eyes it will greatly help. Not just the energy consumption from eyes is saved, but the information flow from eyes to brain is cut-off and that means the part of the brain which processes information from eye can take rest as well. This would lead to longer breaths of 5-6 seconds of inhalation and exhalation. And efficiency would rise to above 90%. This is a good number and what is suggested by experts. You can further improve it if you can pause and hold breath after every inhalation. But that would require a longer practice before you can comfortably do it.

 

If you can repeat this exercise several times a day, even for small intervals, you will see your breaths begin to become deeper naturally. Deeper breathing has a bunch of benefits. Due to increased energy efficiency, there is a lesser load on your heart which results in lower blood pressure. Deeper breathing also calms and soothes nervous system. After couple of weeks of practice, you would notice a slightly calmer version of yourself. Your emotions would be in control and your brain will have lots of free capacity to do useful stuff. Pick a subject which was difficult for you to digest or get into the conversation which always troubled you in the past, you will be surprised to learn that you are doing a lot better this time. It happened to me and it would do the same thing for you or any other human being.


With few months of practice, energy levels further improve and need to sleep for longer hours will be gone. You will be much calmer. As you gain control over your breath, you will gain control over your mind. You would become aware of all your emotions, thinking patterns and deepest fears. Awareness levels of how you think, what you say or do will rise. You will get to know yourself better.


Along with deep breaths if you can put efforts to improve your emotional maturity (not to react immediately, see things from multiple perspectives etc.), it would transform your personality. Your ability to read other people and situations improves because you are in complete control of yourself, that lets you to see things as they are rather than your own emotions becoming a hindrance leading to misinterpretations. You would not overreact even when faced with difficult situations. You would not only live longer but also healthier and happier.

Tuesday, November 17, 2020

Retraining our intuitions

Thinking big, acting bold and long term does not come naturally for most of us. Why so? Why fear of failure invokes stronger emotions than lure of success? What makes us avoid risks and play safe? Here is what I learnt on this subject.

Roots of our intuitions

The central theme of evolution is survival or adapting oneself to improve chances of survival. Our ancestors in the prehistoric times had to go through the struggle for survival like every other animal. And they developed few instincts to help them survive. But some of them have lost relevance now.

Short term and risk averse tendencies of our ancestors

During the stone age, when humans were hunters-gatherers, food was scarce. The kill was not always enough to satisfy group’s hunger. Whoever got to eat first had better chances of survival. Not only acting selfish, one had to think short term, one meal at a time as no one knew when would be the next meal coming. Also, it paid to avoid great dangers. The noise in the bush would be that of a Rabbit or it could be a hungry Tiger as well. Those who took risks often did not survive long. Those who applied caution survived longer and produced off springs of their own kind. Since this struggle for survival continued for a really long period, these survival instincts got etched into human psyche. We descended from such ancestors. No wonder many of us have selfish, short term thinking and risk averse tendencies.

What happened thereafter?

Humans learnt agriculture and to store the food grains. The need for most of humans to be farmers was gone a few hundred years ago and we got spread into other streams like manufacturing, trade, arts etc. Now we take up a profession or run a business to earn a living. Our worries have shifted to monthly pay check and other things. No more we struggle for food and survival on daily basis. But in the time scale of evolution, this period of non-struggle is not long enough to change what is already hardwired into our thinking. Our intuitions still guide us to play safe often or become short term focused. Even when there is no threat to survival, our intuitions limit us from acting bold or thinking big.

Bucking the convention

Many individuals (and companies) were able to defy these natural tendencies and became counter-intuitive. Warren Buffett is a long-term investor. Long-term denotes he overcame the natural tendency of thinking short term. Investing means he has embraced the risks. Jeff Bezos unconventional thinking has rewarded him hugely.

Are you a Giver or a Taker?

Adam Grant in his book “Give and Take” explains how givers, though small in numbers, build networks and flourish. Takers who act selfishly might gain in the short term, but the givers have an edge in the long run as they build trust, credibility, promote reciprocation and provide a direction. Individuals or organizations who stepped up to solve a problem in unconventional ways produced a ripple effect. Think of big companies like Google and Facebook and how their unconventional business models worked out well for them.

How to become counter-intuitive or retrain our intuition?

Daniel Kahneman, a behavioral psychologist who won a Nobel Prize for his work, explains in his book “Thinking Fast and Slow” that we have two systems of thinking. System 1 thinking which is quick, intuitive but often biased. System 2 thinking is a slow, analytical thinking process where reasoning becomes the focus and that helps to overcome bias. He suggests that until we become proficient or an expert in a field, we should not use System 1 thinking to make decisions. We need to train and retrain with System 2 thinking for our judgements to improve.

Summary

Acknowledging the fact that long term thinking does not come naturally to us and making conscious efforts to overcome our selfish and risk-averse tendencies improves our judgements and actions.


Influences:

1. Sapiens and Homo Deus by Yuval Noah Harrari

2. Naval Ravikant podcast




ಪುಸ್ತಕ ಪರಿಚಯ: ಪೆದ್ದಚೆರುವಿನ ರಾಕ್ಷಸ (ಪೂರ್ಣ ಚಂದ್ರ ತೇಜಸ್ವಿ)

 ಇಂದು ನಾವು ಹುಲಿ ನೋಡಬೇಕೆಂದರೆ ಮೃಗಾಲಯಕ್ಕೆ ಹೋಗಬೇಕು. ಬಂಡೀಪುರ, ನಾಗರಹೊಳೆ ಕಾಡಿನಲ್ಲಿ ಸಫಾರಿ ಹೋದರೂ, ಹುಲಿರಾಯನ ದರ್ಶನವಾಗುವುದು ಅತಿ ವಿರಳ. ಆದರೆ ಕೇವಲ ೬೦- ೭೦ ವರ್ಷಗಳ ಹಿಂದೆ ಕಾಡಿನ ವಿಸ್ತಾರ ದೊಡ್ಡದಿದ್ದು, ಹುಲಿಗಳು ಕಾಡಿನಂಚಿನ ಹಳ್ಳಿಗಳಿಗೆ ನುಗ್ಗಿ ದನಗಳನ್ನು ಬೇಟೆಯಾಡುವುದು ಮತ್ತು ಅಪರೂಪಕ್ಕೆ ನರಭಕ್ಷಕನಾಗುವುದು, ಜನರು ಅದರ ಭೀತಿಯಲ್ಲಿ ಹೊತ್ತಿಗೆ ಮುಂಚೆ ಮನೆ ಸೇರುವುದು ಇವೆಲ್ಲ ಸರ್ವೇ ಸಾಮಾನ್ಯ ಸಂಗತಿಯಾಗಿತ್ತು ಎನ್ನುವುದು ಇಂದಿನ ನವ ಪೀಳಿಗೆಗೆ ಆಶ್ಚರ್ಯಕರ ಸಂಗತಿ ಎನ್ನಿಸಬಹುದು. ಒಂದು ಹುಲಿ ನರಭಕ್ಷಕನಾದಾಗ ಬೇರೆ ದಾರಿಯಿಲ್ಲದೆ ಆ ಹುಲಿಯನ್ನು ಮುಗಿಸಲು ಬೇಟೆಗಾರರಿಗೆ ಕರೆ ಹೋಗುತ್ತಿತ್ತು. ಅದರಲ್ಲಿ ಮುಖ್ಯವಾದವರು - ಉತ್ತರ ಭಾರತದಲ್ಲಿ ಜಿಮ್ ಕಾರ್ಬೆಟ್ ಮತ್ತು ದಕ್ಷಿಣದಲ್ಲಿ ಕೆನೆತ್ ಆಂಡರ್ಸನ್. ನಮ್ಮ ದಕ್ಷಿಣ ಭಾಗದ ಹಲವಾರು ನರಭಕ್ಷಕ ಹುಲಿ-ಚಿರತೆಗಳಿಗೆ ಮುಕ್ತಿ ಕಾಣಿಸಿದವರು ಕೆನೆತ್ ಆಂಡರ್ಸನ್. ಅವರು ಜನರಿಗೆ ತೀವ್ರ ಉಪಟಳ ಕೊಟ್ಟ ಪ್ರಾಣಿಗಳನ್ನು ಬೇಟೆಯಾಡುವುದಲ್ಲದೇ, ಒಳ್ಳೆಯ ಬರಹಗಾರರೂ ಆಗಿದ್ದರು. ಅವರು ಇಂಗ್ಲಿಷ್ ನಲ್ಲಿ ರಚಿಸಿದ ಕಾಡಿನ ಕಥೆಗಳನ್ನು ಕನ್ನಡ ಭಾಷೆಗೆ ರೂಪಾಂತರ ತಂದವರು ತೇಜಸ್ವಿ. ಇದನ್ನು ಅನುವಾದ ಎನ್ನದೇ ರೂಪಾಂತರ ಎಂದು ಕರೆಯುವ ಕಾರಣ ತೇಜಸ್ವಿಯವರಿಗೆ ಕಾಡು-ಪರಿಸರದ ಬಗ್ಗೆ ಇದ್ದ ಜ್ಞಾನ. ಹಾಗಾಗಿ ಈ ಕಥೆಗಳನ್ನು ಕನ್ನಡಕ್ಕೆ ಯಥಾವತ್ತಾಗಿ ಭಟ್ಟಿ ಇಳಿಸುವ ಬದಲಿಗೆ ಜೀವ ತುಂಬುವ ಪ್ರಕ್ರಿಯೆ ಅವರಿಂದ ಸಾಧ್ಯವಾಯಿತು.

 

ಈ ಕಾಡಿನ ಕಥೆಗಳು ನಾಲ್ಕು ಪುಸ್ತಕಗಳಾಗಿ ಹೊರ ಬಂದಿವೆ. ಅದರಲ್ಲಿ ಎರಡನೇ ಭಾಗವಾದ ಪೆದ್ದಚೆರುವಿನ ರಾಕ್ಷಸ ಪುಸ್ತಕವನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಇದು ಮೂರು ಚಿಕ್ಕ ಕಥೆಗಳನ್ನು (ಪೆದ್ದಚೆರುವಿನ ರಾಕ್ಷಸ, ತಾಳವಾಡಿಯ ಮೂಕರಾಕ್ಷಸ ಮತ್ತು ಲಕ್ಕವಳ್ಳಿಯ ಹೆಬ್ಬುಲಿ) ಹೊಂದಿದೆ. ಅದರಲ್ಲಿನ 'ಲಕ್ಕವಳ್ಳಿಯ ಹೆಬ್ಬುಲಿ' ಯ ಕಥೆಯನ್ನು ಸ್ವಲ್ಪ ವಿವರದಲ್ಲಿ ನೋಡೋಣ.

 

ಕೆನೆತ್ ಆಂಡರ್ಸನ್ ಅವರಿಗೆ  ಲಕ್ಕವಳ್ಳಿಗೆ (ಚಿಕ್ಕ ಮಗಳೂರು ಜಿಲ್ಲೆ- ಭದ್ರ ಜಲಾಶಯ ಹಾಗೂ ಹುಲಿ ಅಭಯಾರಣ್ಯಕ್ಕೆ ಹೊಂದಿಕೊಂಡ ಹಳ್ಳಿ) ಬರಲು ಆಹ್ವಾನ ನೀಡುತ್ತಾರೆ ಅಲ್ಲಿನ ಆಣೆಕಟ್ಟಿನ ಜವಾಬ್ದಾರಿ ಹೊತ್ತ ಇಂಜಿನಿಯರ್ ಒಬ್ಬರು. ವಿಷಯ ಕೆದಕಿದಾಗ ತಿಳಿದು ಬರುವುದು ಇಷ್ಟು. ಒಂದು ದೊಡ್ಡ ಹುಲಿ ಲಕ್ಕವಳ್ಳಿ ರಸ್ತೆಯ ಕಾಡಿನಲ್ಲಿ ಸೇರಿಕೊಂಡು ಅಲ್ಲಿ ಮೇಯಲು ಹೋಗುತ್ತಿದ್ದ ದನಗಳನ್ನು ದಿನಂಪ್ರತಿ ಹಿಡಿದು ತಿನ್ನಲು ಶುರು ಮಾಡಿತ್ತು. ದಿನ ಕಳೆದಂತೆ ದನ ಕಾಯುವರ ಕೋಪ ಹಾಗೂ ಹುಲಿಯ ಧೈರ್ಯ ಎರಡೂ ಹೆಚ್ಚುತ್ತಾ ಹೋಗಿ, ಇಬ್ಬರೂ ಮುಖಾ-ಮುಖಿಯಾದರು. ಹುಲಿ ಅವನನ್ನು ಕೊಂದು ಅರ್ಧಂಬರ್ಧ ತಿಂದು, ದನವನ್ನೂ ಹೊತ್ತುಕೊಂಡು ಹೋಯಿತು. ನಂತರ ಸರಣಿ ಕೊಲೆಗಳನ್ನು ನಡೆಸುತ್ತ ಸಂಪೂರ್ಣ ನರಭಕ್ಷಕನಾಗಿ ಬದಲಾಯಿತು. ಅದನ್ನು ಬೇಟೆಯಾಡಲು ಲಕ್ಕವಳ್ಳಿಗೆ ಬಂದ ಕೆನೆತ್ ರಿಗೆ, ಹುಲಿ ಆಗ ತಾನೇ ಒಬ್ಬ ಕೂಲಿಯವನೊಬ್ಬನನ್ನು ಹೊತ್ತುಕೊಂಡು ಹೋಗಿರುವುದು ತಿಳಿಯುತ್ತದೆ. ಜಾಡು ಹಿಡಿದು ಕಾಡು ಹೊಕ್ಕರೆ, ಕೊಂಚ ಕಾಲದಲ್ಲೇ ಹೆಜ್ಜೆ-ಗುರುತು, ರಕ್ತದ ಕಲೆಗಳು ಕಾಣುವುದು ನಿಂತು ಹೋಗುತ್ತದೆ. ವಾಪಸ್ಸು ಬಂದು ಅರಣ್ಯ ಇಲಾಖೆಯವರಲ್ಲಿ ಅವರು ಯಾವುದಾದರೂ ಗುಹೆಯನ್ನು ನೋಡಿದ್ದಾರೆಯೇ ಎಂದು ವಿಚಾರಿಸಿದಾಗ, ಕಾಡಿನಲ್ಲಿ ಒಂದು ಪಾಳು ಬಿದ್ದ ಗುಡಿಯ ಬಗ್ಗೆ ತಿಳಿಯುತ್ತದೆ. ಅಲ್ಲಿ ಹೋಗಿ ಪರಿಶೀಲಿಸಿದರೆ ಹುಲಿ ಅದನ್ನು ತನ್ನ ವಾಸ ಸ್ಥಾನ ಮಾಡಿಕೊಂಡಿಲ್ಲ ಎಂದು ತಿಳಿಯುತ್ತದೆ. ನಂತರ ಒಬ್ಬ ದನ ಮೇಯಿಸುವವನಿಂದ ಪಾಳು ಗುಡಿಯ ಒಂದು ಮೈಲಿಯಾಚೆ ಗುಹೆ ಇರುವುದಾಗಿ ತಿಳಿಯುತ್ತದೆ. ಆ ಗುಹೆಯ ಹತ್ತಿರ ಹೋದಾಗ ಅತಿ ಸನಿಹದಲ್ಲೇ ಮೇಲೆರಗಲು ಸಿದ್ಧವಾಗಿದ್ದ ಹುಲಿರಾಯನ ದರ್ಶನವಾಗುತ್ತದೆ. ಬದುಕು-ಸಾವಿನ ಕೆಲವು ಕ್ಷಣಗಳ ಮಧ್ಯದಲ್ಲೇ ಗುರಿಯಿಟ್ಟು ಗುಂಡು ಹಾರಿಸಿ ಪಕ್ಕಕ್ಕೆ ಉರುಳುತ್ತಾರೆ ಬೇಟೆಗಾರ ಕೆನೆತ್. ಇವರ ಮೇಲೆ ಹಾರಿದ ಹುಲಿ ಸತ್ತು ಬೀಳುತ್ತದೆ. ಸತ್ತ ಮೇಲೆ ಪರೀಕ್ಷಿಸಿದಾಗ ಅದೊಂದು ವಯಸ್ಸಾದ, ಬೇಟೆಯಾಡಲು ಅಸಮರ್ಥವಾದ ಪ್ರಾಣಿ ಎಂದು ತಿಳಿಯುತ್ತದೆ. ಕತ್ತಲಾದರೂ ನಿರ್ಭಿತಿಯಿಂದ ಮರಳುತ್ತಾರೆ ಬೇಟೆಗಾರ ಮತ್ತು ಅವನ ಜೊತೆಗಾರ.

 

ಈ ಪುಸ್ತಕದ ಕರ್ತೃ ಪೂರ್ಣ ಚಂದ್ರ ತೇಜಸ್ವಿಯವರದು ಬಹು ಮುಖ ಪ್ರತಿಭೆಯ ವ್ಯಕ್ತಿತ್ವ. ಕಥೆ-ಕಾದಂಬರಿಗಳಿಂದ ಜನಪ್ರಿಯರಾಗಿರುವ ತೇಜಸ್ವಿ ಅವರು ಛಾಯಾಗ್ರಾಹಣ, ಸಹಜ ಕೃಷಿ, ಬೇಟೆ, ವೈಜ್ಞಾನಿಕ ಬರಹಗಳನ್ನು ಕೂಡ ಪ್ರಿಯವಾಗುವ ಹಾಗೆ ಬರೆಯಬಲ್ಲರು. ಅದಕ್ಕೆ ಈ ಪುಸ್ತಕ ಒಂದು ಉದಾಹರಣೆ ಮಾತ್ರ.