Thursday, December 3, 2020

ಕೈಯಲ್ಲಿನ ಫೋನ್ ಬದಲಿಸಿದ ನಮ್ಮ ಜೀವನ ಶೈಲಿಗಳು

"ಊರಿಗೆ ಹೋದ ಮೇಲೆ ಪತ್ರ ಬರಿ". ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬಸ್ ಸ್ಟಾಂಡ್ ನಲ್ಲಿ ಬಸ್ ಹತ್ತಿಸಲು ಬಂದವರು ಹೇಳುತ್ತಿದ್ದ ಸಾಮಾನ್ಯ ಮಾತು. ಇಂದಿಗೆ ಬಸ್ ಹತ್ತಿಸಲು ಬರುವವರ ಸಂಖ್ಯೆಯೂ ಕಡಿಮೆ. ಬರುವ ಒಬ್ಬಿಬ್ಬರು 'ಆಮೇಲೆ ಫೋನ್ ಮಾಡು' ಎಂದು ಹೇಳಿ ಹೊರಡುತ್ತಾರೆ. ಹೋಗುತ್ತಿರುವುದು ಖಾಸಗಿ ಬಸ್ ನಲ್ಲಾದರೆ ಸೀಟು ಹಿಡಿಯುವ ತಾಪತ್ರಯವು ಇಲ್ಲ ಮತ್ತು ಬ್ಯಾಗ್ ಎತ್ತಿಡಲು ಸಹಾಯವೂ ದೊರೆಯುತ್ತದೆ. ಹಾಗಾಗಿ ಊರಿಂದೂರಿಗೆ ಪ್ರಯಾಣ ಇವತ್ತಿಗೆ 'ಚಾ ಕುಡಿದ್ರಾ' ಎಂದು ಕೇಳಿದಷ್ಟೇ ಸುಲಭ. ಹಾಗಾಗಿ ಪ್ರಯಾಣಿಕರ ಮುಖದ ಮೇಲೆ ಯಾವುದೇ ಆತಂಕ ಕಾಣುವುದಿಲ್ಲ. ವಿದೇಶಕ್ಕೆ ಹೋಗುವವರು ಸಹ ಕೈ ಬೀಸಿ ಮುಗುಳ್ನಕ್ಕು ಮತ್ತೆ ಸಿಗುವ ಎನ್ನುವ ಮುಖ ಭಾವ ಹೊತ್ತು ಸಾಗುತ್ತಾರೆ. ಕೈಯಲ್ಲಿನ ಫೋನ್ ಮತ್ತು ನಮ್ಮ ಹೆಬ್ಬೆರಳ ತುದಿಯಲ್ಲಿ ಸಿಗುವ ಸಂಪರ್ಕ ವಿಶಾಲ ಜಗತ್ತನ್ನು ಒಂದು ಚಿಕ್ಕ ಹಳ್ಳಿಯನ್ನಾಗಿ ಮಾರ್ಪಡಿಸಿದೆ.


ಇಂದು ಮಳೆ ಬರಬಹುದೋ ಎಂದು ಆಕಾಶದೆಡೆಗೆ ತಲೆ ಎತ್ತಿ, ಅಂಗೈಯನ್ನು ಹಣೆಯ  ಮೇಲಿಟ್ಟುಕೊಂಡು, ಮೋಡಗಳನ್ನು ದಿಟ್ಟಿಸುವ ಕಾಲವೂ ಮುಗಿದು ಹೋಗಿದೆ. ಸ್ಮಾರ್ಟ್ ಫೋನ್ ನಲ್ಲಿ ಇರುವ ಗೂಗಲ್ ನಲ್ಲಿ ಮಳೆ ಬರುವುದರ ಮುನ್ಸೂಚನೆ ತಾಸು-ತಾಸಿನ ಲೆಕ್ಕದಲ್ಲಿ ಸಿಗುತ್ತದೆ. ಮೊನ್ನೆ ಬೆಂಗಳೂರಿನ ಎಫ್.ಎಂ. ರೇಡಿಯೋ ನಲ್ಲಿ, ಪಿ. ಬಿ. ಶ್ರೀನಿವಾಸ್ ರವರು ಹಾಡಿದ ಹಳೆಯ ಚಲನ ಚಿತ್ರ ಗೀತೆಗಳು  ಪ್ರಸಾರವಾಗುತ್ತಿದ್ದವು. ಅದರಲ್ಲಿ ಒಂದು ಹಾಡು ಹೀಗಿತ್ತು. 


"ಬೀಸೋ ಗಾಳಿಯಲಿ, ಹರಿವ ನೀರ ಅಲೆ

ಹೇಳು ಏನೆಂದಿದೆ ಓ ಗೆಳತಿ?"


ಪ್ರಕೃತಿಯ ಮಧ್ಯೆ ಬದುಕುವವರು ಬೀಸುವ ಗಾಳಿಯ, ಹರಿವ ನೀರಿನ ಸಂದೇಶಗಳನ್ನು ಸ್ವೀಕರಿಸುವುದು ಸಾಧ್ಯವಿತ್ತು, ಕಾಳಿದಾಸ ಮೇಘ ಸಂದೇಶಗಳನ್ನು ಉಪಯೋಗಿಸಿಕೊಂಡ ರೀತಿಯಲ್ಲಿ. ಆದರೆ ಬೆಂಗಳೂರಿನಲ್ಲಿ ಯಾವುದೇ ನದಿಗಳಿಲ್ಲ. ಇಲ್ಲಿ ಮಳೆ ನೀರು ಹರಿಯುವ ಗುಂಡಿಗೆ ಕೊಳಚೆಯೂ ಹರಿಯುತ್ತೆ. (ಅವಕ್ಕೆ ರಾಜ ಕಾಲುವೆ ಎಂದು ಬೇರೆ ಹೆಸರು). ಅವುಗಳ ಮೇಲೆ ಬೀಸುವ ಗಾಳಿ ಹೇಳುವುದು ಮೂಗು ಮುಚ್ಚಿಕೊಳ್ಳಿ ಎಂದು. ಪ್ರಕೃತಿಯನ್ನು ಕೃತಕವಾಗಿಸಿದ ಈ ಊರು ತಂತ್ರಜ್ಞಾನವನ್ನು ಬೆಳೆಸುತ್ತೆ ಆದರೆ ನಿಸರ್ಗವನ್ನು ಕಡೆಗಣಿಸುತ್ತದೆ. ಇಲ್ಲಿ ಎಲ್ಲರಿಗೂ ಪ್ರತಿ ದಿನ ಗೆಲ್ಲುವ ಧಾವಂತ. ಅವರಿಗೆ ಕೈಯಲ್ಲಿನ ಸ್ಮಾರ್ಟ್ ಫೋನ್ ಸಂಗಾತಿ, ಪ್ರಕೃತಿ ಅಲ್ಲವೇ ಅಲ್ಲ.


ನೀವು ಗೊತ್ತಿರದ ಹೊಸ ಜಾಗಗಳಿಗೆ ಹೋಗುತ್ತಿರುವಿರಿ. ಆದರೆ ದಾರಿ ಗೊತ್ತಿಲ್ಲದ ನಿಮಗೆ ಇಂದಿಗೆ ಜಿ.ಪಿ.ಎಸ್ ಇದೆ. ಆದರೆ ಹಿಂದೆ ರಸ್ತೆಯಲ್ಲಿ ಹೋಗುತ್ತಿರುವವರು ಅಥವಾ ಅಕ್ಕ ಪಕ್ಕದ ಅಂಗಡಿಗಳವರು  ನಿಮಗೆ ಮಾರ್ಗದರ್ಶನ ನೀಡುತ್ತಿದ್ದರು. ಸುಮಾರು ಹತ್ತು ವರ್ಷಗಳ ಹಿಂದೆ ಕೆಮ್ಮಣ್ಣುಗುಂಡಿಯ ಹತ್ತಿರ ನಾನು ದಾರಿ ಹೇಗೆ ಎಂದು ಕೇಳಿದ್ದು ರಸ್ತೆಯ ಹತ್ತಿರವೇ ಆಡಿಕೊಂಡಿದ್ದ ಚಿಕ್ಕ ಮಕ್ಕಳ ಗುಂಪನ್ನು. ಅವರು ಸರಿ ದಾರಿ ತೋರಿಸಿಯಾದ ಮೇಲೆ, ನಾನು 'ಥ್ಯಾಂಕ್ಸ್' ಹೇಳಿ ಮುಂದೆ ಬರುವಷ್ಟರಲ್ಲಿ, ಆ ಮಕ್ಕಳು ಜೋರಾಗಿ 'ಇವರು ಬೆಂಗಳೂರಿನವರು ಇರಬೇಕು, ಅದಕ್ಕೆ ಥ್ಯಾಂಕ್ಸ್ ಹೇಳುತ್ತಿದ್ದಾರೆ' ಎಂದು ಮಾತಾಡಿಕೊಳ್ಳುತ್ತಿದ್ದರು. ಈ ಥರದ ಅನುಭವಗಳು ಅಥವಾ ದಾರಿ ತಪ್ಪಿದ ಅನುಭವಗಳಿಗೆ ಇಂದಿಗೆ ಅವಕಾಶವೇ ಇಲ್ಲ. ಜಿ.ಪಿ.ಎಸ್ ಸರಿ ದಾರಿ ತೋರಿಸಿ, ನೀವು ಇಲ್ಲಿಗೆ ಬಂದಾಯಿತು ಎಂದು ಹೇಳಿ ಸುಮ್ಮನಾಗುತ್ತದೆ. ಅದಕ್ಕೆ ಮನುಷ್ಯ ಸಹಜ ಭಾವನೆಗಳು ಬರಲು ಹೇಗೆ ಸಾಧ್ಯ?


ಇಂದಿಗೆ ಫೇಸ್ ಬುಕ್ ನಿಮಗೆ ನೆನಪಿಸುತ್ತಿದೆ ವರ್ಷದ ಹಿಂದೆ ಅಥವಾ ಕೆಲವು ವರ್ಷಗಳ ಹಿಂದೆ ಈ ದಿನ ಏನು ಮಾಡುತ್ತಿದ್ದೀರಿ ಎಂದು. ಅದು ನಮ್ಮನ್ನು ಹಳೆಯ ನೆನಪಿಗಳಿಗೆ ಕರೆದೊಯ್ಯುತ್ತದೆ. ಆದರೆ ಸ್ಮಾರ್ಟ್ ಫೋನ್ ಇಲ್ಲದ ಕಾಲದಲ್ಲಿ ಬೆಳೆದ ನಮಗೆ ಗುಡ್ಡ ಹತ್ತಿದ್ದು, ಹಳ್ಳದಲ್ಲಿ ಆಡಿದ್ದು, ಕಾಲುವೆಯಲ್ಲಿ ಈಜು ಕಲಿತದ್ದು ನೆನಪಿಸಲು ಯಾವುದೇ ಸ್ಮಾರ್ಟ್ ಫೋನ್ ಮತ್ತು ಫೇಸ್ ಬುಕ್ ಸಹಾಯ ಬೇಕಿರಲಿಲ್ಲ ಅಲ್ಲವೇ. ಆದರೂ ಸ್ಮಾರ್ಟ್ ಫೋನ್ ಒಂದು ಹಿತ ನೀಡುವ ಸಂಗಾತಿಯಾಗಿದೆ. ಅದಕ್ಕೆ ಇರುವ ನೆನಪಿನ ಶಕ್ತಿಯ ಅಗಾಧತೆಯ ಮುಂದೆ ನಾವು ಕುಬ್ಜರು. 


ತಂತ್ರಜಾನದ ಬೆಳವಣಿಗೆ ಮತ್ತು ಅದು ಸ್ಮಾರ್ಟ್ ಫೋನ್ ಗಳಲ್ಲಿ ಜೋಡಿಗೊಂಡ ರೀತಿ ಅದ್ಭುತ. ಅದರಿಂದ ಆಗಿರುವ ಅನುಕೂಲಗಳನ್ನು ಅಲ್ಲಗೆಳೆಯಲು ಸಾಧ್ಯವೇ ಇಲ್ಲ. ಆದರೆ ಅದು ನಮ್ಮನ್ನು ಕೆಲವು ಸಲ ಭಾವನಾರಹಿತ ಮನುಜರನ್ನಾಗಿ, ನಮ್ಮ ಜೀವನ ಶೈಲಿ ಬದಲಾಯಿಸಿದರೂ ಅದನ್ನು ಸಹಿಸಿಕೊಳ್ಳಲೇ ಬೇಕು. ಇಂದಿಗೆ ನಾನು ನಿಮ್ಮನ್ನು ತಲುಪುತ್ತಿರುವುದು ಅದೇ ತಂತ್ರಜ್ಞಾನದ ಮೂಲಕ ಅಲ್ಲವೇ? ಎಲ್ಲ ಸ್ನೇಹಿತರ ಆಗು-ಹೋಗುಗಳನ್ನು ತಿಳಿದುಕೊಳ್ಳುವ ಸೌಲಭ್ಯ ಕಲ್ಪಿಸಿದ ಈ ತಂತ್ರಜಾನಕ್ಕೆ ಶರಣು. ಪೋಸ್ಟ್ ಆಫೀಸ್ ಮುಂದೊಂದು ದಿನ ಮುಚ್ಚಿ ಹೋದರೆ ಅಥವಾ ಬೇರೆ ಕಾರ್ಯಗಳಿಗೆ ಬದಲಾದರೆ ಏನಂತೆ? ನಾವೀಗಾಗಲೇ ವಾಟ್ಸ್ ಆಪ್ ಸೇರಿ ಆಗಿದೆಯಲ್ಲ. ಗೊತ್ತಿಲ್ಲದ ಊರೋ, ದಾರಿಯಲ್ಲಿ ಮಳೆ-ಚಳಿ ಎಲ್ಲದಕ್ಕೂ ನಮಗೆ ಮುನ್ಸೂಚನೆಗಾಗಿ, ದಾರಿ ದೀಪದಂತೆ ಕೈಯಲ್ಲಿ ಇದೆಯಲ್ಲ ನಮ್ಮ ಆಪ್ತ ಮಿತ್ರ, ನಮ್ಮ ಸ್ಮಾರ್ಟ್-ಫೋನ್. 

Monday, November 30, 2020

Esteem Needs: Becoming Rich, Famous and Powerful

Take a look at Maslow’s hierarchy of needs. The one step before you reach self-actualization is the Esteem needs. I would like to focus on it in this blog post. Three desires or needs to become Rich (financial strength, freedom), Famous (recognition) and Powerful (respect, status) shape your self-esteem.

 

Maslow's Hierarchy of Needs


It does not matter which part of the world you belong to or what your religion is or whether you are young or old, if you are a human being, you are driven by the desire of becoming “rich, famous and powerful”. Definition of becoming rich is gathering more wealth than you currently possess (and not to become wealthiest person of the world). Similarly, becoming famous can be known well in your own circles. Becoming powerful would mean expanding your control and influence beyond your own family and community to bigger span of things.


There are few who work on all three desires simultaneously. But there are many who would prioritize one among these three and you can easily spot them by the professions they choose. Those who chose to be wealthy (over fame and power) are likely to be found in business or trade. Those who want to be famous first are attracted to movie industry or sports. Those who prefer power, you will see them in key Govt jobs, politics or in the dreaded underworld.


You can say this theory is rubbish. But read little further before you conclude. Hippies who wander throughout the world do not want to conform to anything. They don’t want to become someone or something. When people started asking the reasons for this behavior, one hippie gave such a pleasing response, people started listening to him and he was sought after. He started becoming rich, famous and influential. See, that is what he wanted to avoid in the first place. Though he appeared rebel in the beginning, becoming rich or famous was driving him unconsciously. Better acknowledge these desires before they express themselves.


No matter where you start, your inclination towards these desires lets you pick relevant skills on the go. Manipulating people or situations becomes your natural part if you are power hungry and similarly you would know how to impress people if you wanted to become famous. And you would not leave money on the table and make best use of opportunities if you wanted to become wealthy. These characters will become part of your personality. You can see the same things from opposite angle too. If you had to lose money you would be a lot stressed if your root desire is to become wealthy. Losing your reputation would give you sleepless nights if you wanted to be famous and losing the position would drive you nuts if you are power oriented. These root desires will give you immense satisfaction when you achieve them and can cause great stress when challenged. 


These desires impact everyone. They let scientists make better inventions, sportsmen break older records, politicians solve societal issues. Scratch the surface of any person, you are sure to see them. With efforts, you will clearly identify the motivating factors of everyone around you (including yourself). They need to be transcended before you reach the final stage of self-actualization as defined by Maslow. This would roughly translate into becoming a spiritual being in another parlance.


Saturday, November 28, 2020

ಮುತ್ತು ರತ್ನ ಮಾರಿದ ನೆಲದ ಮಣ್ಣನ್ನೇ ಮಾರಿಕೊಳ್ಳುವ ದುರಾದೃಷ್ಟ

ಇಂದಿಗೆ ವಿಜಯನಗರ ಹೊಸ ಜಿಲ್ಲೆಯಾಗಿದೆ. ಆದರೆ ಐದು ಶತಮಾನಗಳ ಹಿಂದೆ ಇದು ಒಂದು ಸಾಮ್ರಾಜ್ಯವಾಗಿತ್ತಲ್ಲವೇ? ಮುತ್ತು ರತ್ನಗಳನ್ನು ಬೀದಿಯಲ್ಲಿ ವ್ಯಾಪಾರ ಮಾಡಿದ ಅಲ್ಲಿನ ಜನರು ಇಂದಿಗೆ ಹಿಂದುಳಿದ ಜಿಲ್ಲೆಗಳ ಜನರಾಗಿ ಪರಿವರ್ತತವಾದದ್ದು ಹೇಗೆ? ಹಂಪಿಯು ಭಾರತಕ್ಕೆ ಅಷ್ಟ ಅಲ್ಲ, ಬದಲಿಗೆ ಆವತ್ತಿನ ಕಾಲದಲ್ಲಿ ವಿಶ್ವದ ಪ್ರಮುಖ ನಗರಗಳಲ್ಲಿ ಒಂದಾಗಿತ್ತು. ಸಾಕಷ್ಟು ವಿದೇಶಿ ಪ್ರವಾಸಿಗರು ಹಂಪೆಯನ್ನು ರೋಮ್ ಗೆ ಹೋಲಿಸಿ ಕೊಂಡಾಡಿದ್ದರು. ಅಲ್ಲಿ ಆಡಳಿತ ಇದ್ದದ್ದು ಯಾವುದೊ ಸಣ್ಣ ಸಾಮಂತ ಅಥವಾ ಪಾಳೇಗಾರನದ್ದೋ ಅಲ್ಲವಲ್ಲ. ದಕ್ಷಿಣ ಭಾರತದ ಕೇಂದ್ರ ಬಿಂದು ಎನ್ನುವಂತೆ ೨೩೦ ವರ್ಷಗಳ ಕಾಲ ಗುರುತಿಸಿಕೊಂಡ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ಹಾಳು ಬೀಳುವಂತೆ ಮಾಡಿದ, ಮತ್ತೆ ಯಾವುದೇ ಕಾರಣಕ್ಕೆ ಪುನರುಜ್ಜಿವಿತಗೊಳ್ಳದಂತೆ ತಡೆದ ಕಾರಣಗಳು ಏನು? ಲಕ್ಷಾಂತರ ಜನ ಬದುಕಿದ ಒಂದು ಪಟ್ಟಣ ದುರಾದಷ್ಟದ ಹಣೆ ಪಟ್ಟಿ ಕಟ್ಟಿಕೊಂಡು ನೇಪಥ್ಯಕ್ಕೆ ಸರಿದು ಹೋದದ್ದು ಏಕೆ?


ದೆಹಲಿಯ ಚರಿತ್ರೆ ಗಮನಿಸಿ ನೋಡಿ. ಅಲ್ಲಿ ಸಾಕಷ್ಟು ರಾಜವಂಶಗಳು ಅಧಿಕಾರ ನಡೆಸಿ ಹೋಗಿವೆ. ಕೆಲವು ಹಿಂದೂ, ಕೆಲವು ಮುಸ್ಲಿಂ, ಆಮೇಲೆ ಬ್ರಿಟಿಷರು. ಆದರೂ ದೆಹಲಿ ಸ್ವತಂತ್ರ ಭಾರತದ ರಾಜಧಾನಿಯಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ಎಷ್ಟು ಬಾರಿ ಆಕ್ರಮಣಕ್ಕೊಳಗಾದರೂ ಮತ್ತೆ ಎದ್ದು ನಿಂತಿದೆ. ಅಥವಾ ಕಾಶಿ ಪಟ್ಟಣವನ್ನು ಗಮನಿಸಿ ನೋಡಿ. ಪುರಾತನ ಕಾಲದ ಈ ಪಟ್ಟಣ ಅಂದಿಗೂ, ಇಂದಿಗೂ ತನ್ನ ಇರುವಿಕೆಯನ್ನು ಮತ್ತು ಸ್ವಂತಿಕೆಯನ್ನು, ಕಾಲಾತೀತವೆನ್ನುವಂತೆ ಉಳಿಸಿಕೊಂಡು ಬಂದಿದೆ. ಬಹು ಜನ ಬದುಕಿದ್ದ ಪಟ್ಟಣಗಳೆಲ್ಲವೂ ತಮ್ಮ ವೈಭವವನ್ನು ಕಳೆದುಕೊಂಡರೂ ಜನರ ವಾಸಕ್ಕೆ ದೂರ ಎನ್ನುವಂತೆ ಮರೆಯಾಗಿ ಹೋಗಲಿಲ್ಲ.


ಆದರೆ ನಮ್ಮ ಹಂಪಿಯನ್ನೇ ನೋಡಿ, ಅದು ಇಂದಿಗೆ ಕರ್ನಾಟಕದ ಅಥವಾ ಆಂಧ್ರ ಪ್ರದೇಶದ ರಾಜಧಾನಿಯಾಗಿ ಬದಲಾಗಬೇಕಿತ್ತು. ಅದಿಲ್ಲದಿದ್ದರೆ, ಒಂದು ಜಿಲ್ಲಾ ಕೇಂದ್ರವೋ ಅಥವಾ ಒಂದು ದೊಡ್ಡ ಪಟ್ಟಣವೋ ಆಗಬೇಕಿತ್ತು. ಅವ್ಯಾವವೂ ಆಗಲಿಲ್ಲ. ೧೫೬೫ ರಲ್ಲಿ ಹಂಪಿಯನ್ನು ತೊರೆದ ಸಾಕಷ್ಟು ಜನ  ಆಶ್ರಯಿಸಿದ್ದು, ಹೊಸ ಊರನ್ನು ಕಟ್ಟಿಕೊಂಡಿದ್ದು ಹತ್ತಿರದ ಹೊಸಪೇಟೆಯಲ್ಲಿ. ಆದರೆ ಒಂದು ಸಾಮ್ರಾಜ್ಯವನ್ನು ಕಟ್ಟಬಲ್ಲ ಮತ್ತು ಅದನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಬಲ್ಲ ಚಾತುರ್ಯ ಮತ್ತು ನೈಪುಣ್ಯತೆ ಇದ್ದ ಜನರು ಈ ಪ್ರದೇಶವನ್ನು ಶಾಶ್ವತವಾಗಿ ಎನ್ನುವಂತೆ ತೊರೆದು ಹೋದರು. ಏಕೆಂದರೆ ಅವರನ್ನು ಹಿಡಿದಿಡುವ ಶಕ್ತಿ ವಿಜಯನಗರ ಸಾಮ್ರಾಜ್ಯದ ಅವನತಿಯೊಂದಿಗೆ ಮುಗಿದು ಹೋಗಿತ್ತು. ಯುದ್ಧ ಗೆದ್ದವರಿಗೂ, ಹಂಪಿಯನ್ನು ಹಾಳುಗೆಡುವುದರಲ್ಲಿ ಇದ್ದ ಉತ್ಸಾಹ ಅದನ್ನು ಕಾಪಾಡಿ ತಮ್ಮ ಆಳ್ವಿಕೆಗೆ ಒಳಪಡಿಸಿಕೊಳ್ಳುವದರ ಬಗ್ಗೆ ಇರಲಿಲ್ಲ. ಹಂಪಿಯು ಅವರ ಕಣ್ಣನ್ನು ಶತಮಾನಗಳ ಕಾಲ ಕುಕ್ಕಿತ್ತಲ್ಲ. ವೈಭವದ ಉತ್ತುಂಗ ಹೆಚ್ಚಿನ ಶತ್ರುಗಳನ್ನು ಸೃಷ್ಟಿ ಮಾಡುವುದು ಸಾಮಾನ್ಯ ವಿಷಯ ತಾನೇ? ಯುದ್ಧ ಸೋತ ಸುದ್ದಿ ತಲುಪಿದ ತಕ್ಷಣ, ರಾಮರಾಯನ ತಮ್ಮಂದಿರು, ವಂಶಸ್ಥರು ಸಾಧ್ಯವಾದಷ್ಟು ಸಂಪತ್ತನ್ನು ಆನೆಗಳ ಮೇಲೆ ಹೇರಿಕೊಂಡು ಪೆನುಗೊಂಡಗೆ ಸಾಗಿದರು. ಹಂಪಿಯ ರಕ್ಷಣೆ ವಿರೂಪಾಕ್ಷನ ಪಾಲಿಗೆ ಬಿತ್ತು. ಮೊದಲಿಗೆ ಸುತ್ತ ಮುತ್ತಲಿನ ಕಳ್ಳ-ಕಾಕರೇ ಹಂಪಿಯನ್ನು ದೋಚಿದರು. ನಂತರದ ದಿನಗಳು ಹಂಪಿಯ ಚರಿತೆಯಲ್ಲಿ ಕರಾಳ ದಿನಗಳು. ಆಗ ನಡೆದ ದೌರ್ಜನ್ಯದ ಭೀಕರತೆಗೆ ಸಾಕ್ಷಿಯಾಗಿ ಇಂದಿಗೂ ಭಗ್ನ ಅವಶೇಷಗಳು ನಿಂತಿವೆ. ತುಂಗಭದ್ರೆಯು ಹಂಪೆಯ ಎಲ್ಲ ರಕ್ತದ ಕಲೆಗಳನ್ನು ತೊಳೆದು ಹಾಕಿದರೂ, ಜನರ ಭೀತಿ ಮರೆಯಾಗಿ ಹೋಗಲೇ ಇಲ್ಲ. ಯಾರಿಗೂ ಬೇಡವಾಗಿ ಹೋದ ಹಂಪೆಯನ್ನು ಮತ್ತಷ್ಟು ಹಾಳುಗೆಡವಿದ್ದು ಕಾಲನ ಮಹಿಮೆ.


ಕಳೆದು ಹೋದ ಗತ ವೈಭವದ ಬಗ್ಗೆ ಮಾತನಾಡುವ ನಾವು, ವಿಜಯನಗರದ ಅರಸರಿಗೆ ಸಾಧ್ಯವಾಗಿದ್ದು ಅವರ ನಂತರದ ಸಮಾಜಕ್ಕೆ ಏಕೆ ಸಾಧ್ಯವಾಗಲಿಲ್ಲ ಎಂದು ಯೋಚಿಸುವುದಿಲ್ಲ. ಮುತ್ತು ರತ್ನ ಬೀದಿಗಳಲ್ಲಿ ಮಾರಿ ವೈಭವದ ತುದಿ ತಲುಪಿದ ಕೀರ್ತಿ ಅಂದಿನ ಅರಸರದಾದರೆ, ಅದೇ ಪ್ರದೇಶದ ಮಣ್ಣನ್ನು ವಿದೇಶಗಳಿಗೆ ಮಾರಿಕೊಳ್ಳುವ ಅಪಕೀರ್ತಿ ನಮ್ಮ ಇಂದಿನ ಸಮಾಜದ್ದು ಎನ್ನುವುದೇ ದುರಾದೃಷ್ಟ.


Picture Credit: Shivashankar Banagar

Monday, November 23, 2020

ಗಾನಕೆ ಮಣಿಯದ ಜೀವವೇ ಇಲ್ಲ

ಗಾನಕೆ ನಲಿಯದ ಮನಸೇ ಇಲ್ಲ,

ಗಾನಕೆ ಮಣಿಯದ ಜೀವವೇ ಇಲ್ಲ,

ಗಾನಕೆ ಒಲಿಯದ ದೇವರೇ ಇಲ್ಲ,

ಗಾನವೇ ತುಂಬಿದೆ ಈ ಜಗವೆಲ್ಲಾ

('ಉಪಾಸನೆ' ಚಿತ್ರದ 'ಭಾವವೆಂಬ ಹೂವು ಅರಳಿ' ಹಾಡಿನ ಸಾಲುಗಳು)


ಎಲ್ಲರಿಗೂ ಅವರ ಮನ ತಣಿಸುವ ಒಂದು ಹಾಡು ಇದ್ದೇ ಇರುತ್ತದೆ. ಅದು ಚಲನ ಚಿತ್ರದ ಹಾಡಾಗಿರಬಹುದು ಅಥವಾ ಭಾವಗೀತೆ ಇಲ್ಲವೇ ವಚನಗಳೋ ಇಲ್ಲವೋ ಭಕ್ತಿಗೀತೆಗಳೋ ಹೀಗೆ ಒಂದು ಹಾಡು ಕೇಳಿದ ತಕ್ಷಣ ಮನಸ್ಸು ಅದರಲ್ಲಿ ಲೀನವಾಗಿ ನಮ್ಮ ಭಾವನೆಗಳೆಲ್ಲ ಒಟ್ಟಾಗಿ ಹಾಡಾಗಿ ಹರಿಯುತಿದೆಯೋನೋ ಎನ್ನಿಸಿದ್ದರೆ ಅದು ನಿಮ್ಮ ಸುಪ್ತ ಮನಸ್ಸಿನ ಪ್ರತೀಕವಾದ ಹಾಡು. ಹಾಡನ್ನು ಆಸ್ವಾದಿಸುವುದರ ಜೊತೆಗೆ ಯಾವ ವಿಷಯ ಈ ಹಾಡನ್ನು ನಿಮಗೆ ಇಷ್ಟು ಹತ್ತಿರಕ್ಕೆ ತಂದಿದೆ ಎನ್ನುವ ಕಾರಣಗಳನ್ನು ಅವಲೋಕಿಸಿ ನೋಡಿ. ನೀವು ವ್ಯಕ್ತ ಪಡಿಸಲು ಸಾಧ್ಯವಾಗದ ಅನುಭೂತಿಗಳನ್ನು ಆ ಹಾಡು ಹೊರ ತಂದಿರುತ್ತದೆ ಮತ್ತು ನಿಮ್ಮ ಅಂತರಾಳದ ವಿಚಾರಗಳನ್ನು ಪ್ರತಿಬಿಂಬಿಸುತ್ತಿರುತ್ತದೆ.


ಕಥೆ-ಕಾದಂಬರಿಕಾರರಿಗಿಂತ, ಕವಿಗಳಿಗೆ ಭಾಷೆಯನ್ನು ಬಳಸುವ ಪ್ರಜ್ಞೆ ಸದಾ ಜಾಗೃತವಾಗಿರುತ್ತದೆ. ಬರಿ ಪ್ರಾಸಬದ್ಧ ಪದಗಳನ್ನು ಹುಡುಕುವುದಷ್ಟೇ ಅಲ್ಲವಲ್ಲ, ಬದಲಿಗೆ ಉಲ್ಲಾಸಗೊಳಿಸುವ ಇಲ್ಲವೇ ವಿಷಾದದ ಕೂಪಕ್ಕೆ ನೂಕುವ ಕೆಲಸ ಹಾಡಿನಿಂದಾಗಬೇಕು. ಅದಕ್ಕೆ ಕವಿಯ ಜೊತೆಗೆ, ಭಾವನೆಗಳಿಗೆ ಜೀವ ತುಂಬುವ ಕೆಲಸ ಗಾಯಕ/ಗಾಯಕಿಯರಿಂದ ಮತ್ತು ಹಾಡಿಗೆ ರಾಗ, ಪ್ರಾಸ ಜೋಡಿಸಿ ಸಂಗೀತ ಸಂಯೋಜಿಸುವವರ ಪ್ರಯತ್ನವೂ ಒಟ್ಟುಗೂಡಬೇಕು. ಆ ತಂಡ ಒಂದೇ ಲಹರಿಗೆ ಬಂದಾಗ ಒಂದು ಅದ್ಭುತ ಹಾಡು ಹುಟ್ಟುತ್ತದೆ.


ಇದನ್ನು ಮನಗಂಡಿದ್ದ ವಚನಕಾರರು, ಗ್ರಂಥಗಳನ್ನು ರಚಿಸದೇ ಸಾಮಾನ್ಯ ಮನುಷ್ಯನ ಮೇಲೇ ಅಳಿಯದ ಪ್ರಭಾವ ಬೀರುವಂತ ಗಾನಮಯವಾದ ವಚನಗಳನ್ನು, ಭಕ್ತಿ ಗೀತೆಗಳನ್ನು ರಚಿಸಿ ಅಜರಾಮರರಾದರು. ಇಂದಿಗೆ ಬಸವಣ್ಣನವರ ವಚನಗಳನ್ನು ವಿಮರ್ಶಿಸಿ, ಅರ್ಥೈಸಿ ನೂರಾರು ಪುಸ್ತಕಗಳು ಬಂದಿದ್ದರೂ, ಬಸವಣ್ಣನವರೇ ನಮಗೆ ಹೆಚ್ಚು ಹತ್ತಿರ  ಅಲ್ಲವೇ? ಅಕ್ಕ, ಸರ್ವಜ್ಞ, ಪುರಂದರ ದಾಸರು ಇದಕ್ಕೆ ಹೊರತಲ್ಲ. ಋಗ್ವೇದವನ್ನು ವ್ಯಾಖ್ಯಾನಗೊಳಿಸಲು ೧೦೮ ಉಪನಿಷತ್ತುಗಳು ಬಂದಿದ್ದರೂ, ಋಗ್ವೇದದ ಒಂದು ಮಂತ್ರವಾದ 'ಗಾಯತ್ರಿ ಮಂತ್ರ' ದ ಹಾಗೆ ಅವನ್ನು ಜಪಿಸಲು ಸಾಧ್ಯವೇ? ಶಿಶುನಾಳ ಶರೀಫರು ಆಧ್ಯಾತ್ಮದ ಸಾರವನ್ನು ತಮ್ಮ ಹಾಡೊಳಗೆ ತುಂಬಲಿಲ್ಲವೇ? ಜಾನಪದ ಜನರ ನಾಲಿಗೆಯ ಮೇಲೆ ಉಳಿದ ಬಗೆಯೂ ಇದೆ ಅಲ್ಲವೇ? ಮಂತ್ರಗಳಿಗೆ ಶಕ್ತಿ ಇದೆಯೋ ಇಲ್ಲವೋ, ಆದರೆ ಹಾಡುಗಳಿಗೆ ಮಂತ್ರಶಕ್ತಿ ಇದೆ ಅನ್ನಿಸುವುದು, ಎಷ್ಟೋ ವಚನ, ಕೀರ್ತನೆ ರಚಿಸಿದ ಕರ್ತೃಗಳು ಕಾಲವಾಗಿ ಶತಮಾನಗಳು ಕಳೆದು ಹೋದರೂ, ಅವರ ರಚನೆಗಳು ಕಾಲಾತೀತ ಎನ್ನುವಂತೆ ಉಳಿದುಕೊಂಡಿರುವುದನ್ನು ನೋಡಿ.


ನೀವು ಗಮನಿಸಿಯೇ ಇರ್ತೀರಿ. 'ಸಂಗೀತ ಸಂಜೆ' ಕಾರ್ಯಕ್ರಮಗಳಿಗೆ ಜನರನ್ನು ಒಟ್ಟುಗೂಡಿಸಲು ಯಾವ ಪ್ರಯತ್ನವೂ ಬೇಕಿಲ್ಲ. ಅವರು ತಾವಾಗಿಯೇ ಬರುತ್ತಾರೆ. ಒತ್ತಡದ ಚಾಕಟ್ಟು ದಾಟಿ, ಮನದಣಿಯೇ ಹಾಡು ಕೇಳಿ ಮೈ ಮರೆಯಲು ಮುತುವರ್ಜಿಯ ಆಹ್ವಾನ ಬೇಕೇ? ಬರೀ ಮನುಷ್ಯರಿಗೆ ಇಲ್ಲವೇ ದೇವರಿಗೆ ಪ್ರಿಯವಾದದ್ದು ಈ ಹಾಡು ಎಂದುಕೊಳ್ಳಬೇಡಿ. ಡಾ. ರಾಜಕುಮಾರ್ ರ ಹಾಡುಗಳನ್ನು ಕೇಳುತ್ತ ಹೆಚ್ಚು ಹಾಲು ಕರೆದ ಹಸು-ಎಮ್ಮೆಗಳ ಬಗ್ಗೆ ಓದಿದ್ದ ನೆನಪು ನನಗೆ ಇದೆ. ಹಿಂದೆ ದ್ವಾಪರ ಯುಗದಲ್ಲಿ, ಕೃಷ್ಣನ ಮುರಳಿಯ ಕರೆ ಕೂಡ ಗೋಕುಲದ ಹಸುಗಳಿಗೆ ಇದೆ ರೀತಿಯ ಮೋಡಿ ಮಾಡಿರಬೇಕು. ಹಾಗೆ ಕಿಂದರಿ ಜೋಗಿಯು ಮೊದಲಿಗೆ ಮೂಷಿಕಗಳನ್ನು, ನಂತರ ಊರಿನ ಮಕ್ಕಳನ್ನು ಮೋಹಿತಗೊಳಿಸಿದ್ದು ಸಣ್ಣ ವಿದ್ಯೆಯೇ?


ಕಲೆಯ ಪ್ರಾಕಾರಗಳಲ್ಲಿ ಯಾವುದು ಹೆಚ್ಚು ಅಥವಾ ಕಡಿಮೆ ಎನ್ನುವ ಜಿಜ್ಞಾಸೆ ನನ್ನದಲ್ಲ. ಆದರೆ ಸಾಮಾನ್ಯ ಜನರಲ್ಲಿ ಹೆಚ್ಚಿನ ಪರಿಣಾಮ ಬೀರುವುದು ಸಾಧ್ಯ ಎನ್ನಿಸುವುದು ಗೀತೆ-ಸಂಗೀತದ ಮೂಲಕ ಎನ್ನುವುದು ನನ್ನ ಅಭಿಪ್ರಾಯ ಅಷ್ಟೇ.


ಜೀವನದಲ್ಲಿ ಬೇಸರವಾದಾಗ, ಕಳೆದು ಹೋದ ಭಾವನೆ ಬಂದಾಗ ಮಾತ್ರ ಇಷ್ಟದ ಹಾಡುಗಳನ್ನು ಕೇಳಬೇಕು ಎಂದೆನಿಲ್ಲವಲ್ಲ. ಅದಕ್ಕಾಗಿಯೇ ನಾನು ಕಳೆದು ಹೋಗುವ ಮುನ್ನವೇ, ನನ್ನತನ ತುಂಬುವ ಹಾಡುಗಳ ಮೊರೆ ಹೋಗುತ್ತೇನೆ. ಎದೆಯ ಲಹರಿಯ ಪ್ರತಿಧ್ವನಿ ಆಗುತ್ತವೆ ಈ ಹಾಡುಗಳು ಮತ್ತು ಬದುಕುವ ಉತ್ಸಾಹ ಬಾಡಿ ಹೋಗದಂತೆ ನನ್ನನ್ನು ಕಾಪಾಡುತ್ತವೆ. ಅಂದ ಹಾಗೆ ನಿಮ್ಮ ಇಷ್ಟದ ಹಾಡುಗಳು ಯಾವವು?

 

Friday, November 20, 2020

Breathing efficiency

If we look at the frequency of the inputs we provide to our body, food intake is typically 3 times a day, water is more frequent, 8-10 times a day or even more. But breathing is round the clock, that continues even when we are sleeping. So, it would be interesting to understand the efficiency of breathing.


We inhale through nose, it travels through the passage, reaches lungs and there oxygen is absorbed into the body to join the bloodstream and further it travels to various parts of the body. Note that oxygen it is absorbed at lungs and not in the passage (nasal or throat region). If we are inhaling for 3 seconds on an average, the air we inhaled at the third second will be stopped before it reaches lungs and it will be forced to return halfway as exhalation begins. Similarly, when we exhale, the air which is carbon di-oxide primarily, does not completely get out of our body as some of it in the passage at the third second of exhalation will be forced to return due to inhalation. This suggests what we can make use of, whether inhalation or exhalation, is 2 out 3 seconds only. Thus we arrive at 66% of efficiency number. It does not look great for the thing we do throughout our life. What can be done about this?

 

Before we go to bed, when we are slowing down, we have few minutes to ourselves. Whether you are sitting or lying down, completely free up your body, avoid any smaller movements and ignore all those itches. When your body is at still, energy demand from body drops and breathing rate slows a little, inhale and exhale expands by a second (to 4 seconds from what we considered 3 seconds before). Now if we do the same math, 3 seconds of breathing out of 4 will be useful and efficiency is at 75%. As you know breathing also consumes some energy and when breathing becomes slow and efficiency increases, body’s energy demand drops little further. If you can close your eyes it will greatly help. Not just the energy consumption from eyes is saved, but the information flow from eyes to brain is cut-off and that means the part of the brain which processes information from eye can take rest as well. This would lead to longer breaths of 5-6 seconds of inhalation and exhalation. And efficiency would rise to above 90%. This is a good number and what is suggested by experts. You can further improve it if you can pause and hold breath after every inhalation. But that would require a longer practice before you can comfortably do it.

 

If you can repeat this exercise several times a day, even for small intervals, you will see your breaths begin to become deeper naturally. Deeper breathing has a bunch of benefits. Due to increased energy efficiency, there is a lesser load on your heart which results in lower blood pressure. Deeper breathing also calms and soothes nervous system. After couple of weeks of practice, you would notice a slightly calmer version of yourself. Your emotions would be in control and your brain will have lots of free capacity to do useful stuff. Pick a subject which was difficult for you to digest or get into the conversation which always troubled you in the past, you will be surprised to learn that you are doing a lot better this time. It happened to me and it would do the same thing for you or any other human being.


With few months of practice, energy levels further improve and need to sleep for longer hours will be gone. You will be much calmer. As you gain control over your breath, you will gain control over your mind. You would become aware of all your emotions, thinking patterns and deepest fears. Awareness levels of how you think, what you say or do will rise. You will get to know yourself better.


Along with deep breaths if you can put efforts to improve your emotional maturity (not to react immediately, see things from multiple perspectives etc.), it would transform your personality. Your ability to read other people and situations improves because you are in complete control of yourself, that lets you to see things as they are rather than your own emotions becoming a hindrance leading to misinterpretations. You would not overreact even when faced with difficult situations. You would not only live longer but also healthier and happier.