Sunday, January 17, 2021

Shortness of life

A cousin of mine, 7 years younger than me, who was in prime health died suddenly and unexpectedly yesterday. Though I don't know for sure if he had any undetected health issues but there were no visible signs of it. I feel a great loss losing such a gentle younger brother. The pain his wife and parents are going through can't be described in words. The person they invested in and cared for so long, was gone in no time. 

If this can happen to him, it can happen to anybody. When death strikes, one will not have time to say goodbye to even his loved ones. Such is shortness of life. But when we are alive, we behave like we are going to be here forever and make very long term plans but what is in store for us we are not sure. Life poses such an uncertainty too. What we need to realize is, life may not give us any options when it is time to end our story. But when there are options, we can choose wisely and live life as we aspired to rather than postponing it for another day.

I pray to God to bless my cousin so that his soul rests in peace. And also I pray to God bless us to realize what is important to us in our lives before the shortness of life ends it.

Saturday, January 16, 2021

DHFL Resolution: Winners & Losers

Disclaimer: I am invested in Piramal Enterprises (even before DHFL came into picture). My views might be biased, though I strive to be not.


After couple of rounds of bidding, finally Piramal Enterprises has emerged as the winner. Let us look into who would gain and at what cost. Also see why it would make sense to creditors and the banking, NBFC and regulatory system in large to conclude this deal. Also let us see who lost everything with this deal.

DHFL's books

First let us take a short look at DHFL's books. Their promoter is in jail for siphoning off of funds. Company's net worth is negative (Liabilities are more than assets). They have not honored the payments to their creditors for more than an year. They have serious asset liability mismatch and if there were no takers for it, this company had to be closed with a serious blow to the entire system.

 

Assets

Liabilities

DHFL

(Based on their investor presentations)

Loan Book: 87,000 crores

Borrowings: 91,000 crores

Wholesale Loans: ~50,000 crores

Retail Loans: Rest minus investments

~50% of borrowings are form banks (SBI Major lender: ~10,000 cores)

~10% deposits

Rest through bonds, ECB, NHB etc. 

Risk: ~20,000 crores loans may not be recovered

Banks have recognized the whole exposure as NPA

Depositors & bond holders are not paid interest and not able to liquidate.


What does Piramal offer? 

Let us see what Piramal is offering through their bid.

  • 37,250 crores Total
  • 12,700 crores of upfront cash and rest will be paid in 10 years
What Piramal would get back is assets (DHFL's loan book) of approx. 60,000 crores. The key risk is, they would get to know the real value of the loan book only after they get to manage it. Some more of bad loans which is not accounted so far may turnout out be additional hole in the balance sheet. The business will need new management and systems, so it will need fresh investments. Also it has to face many legal battles that would surely come in the way. Bigger risks and bigger payoffs are in store for Piramal and investors in his company.

What lenders would get?

Though they have to take significant hair cut, remember they have already written-off their exposure. Any money going back is profit for them now. Upfront cash payments from Piramal and rest amount becoming regular loans improve the situation of banks, so they accepted this deal. It is better to recover whatever is possible than losing the entire amount.

Are regulators happy?

Surely. If you look at IL&FS which went dead few years ago and still the issues not getting resolved, DHFL finding a suitor in less than 2 years is a good move for the whole industry and the system. One reduced headache for RBI, SEBI, NCLT and the insurance regulator IRDA. This improves the confidence in the system in resolving such large scale issues.

Who would lose out entirely?

The shareholders of DHFL. 39% holding by promoters, 55% holding by retail investors and 3.5% holding by LIC will find their investment written off completely. It's recent market capital was around 1,000 crores that would disappear. (Unless Piramal decides to run this company separately which is not their plan either).

What would DHFL's existing customers & employees get?

Piramal said they would not let go any of the existing employees. So it is a relief for them. For customers, this would be a good news as their interest payments would reduce in time as Piramal's credit cost would be lower and they would pass it to existing customers of DHFL benefitting them.

Conclusion: 

Promoters of DHFL have paid a huge price. (Though they are facing charges of siphoning of 30,000 crores). If they had shown integrity and patience, they still would have made good money legally and ethically. But now along with them, equity investors of DHFL are losing their money too. Lenders did lose partially and it is their business to take risk while lending.

Ajay Piramal, an opportunist risk taker, a honed businessman known to acquire and sell companies, is likely to manage this acquisition well, benefiting himself and his shareholders. It may take 2-3 years to integrate it fully into his business and give him the benefits of retail portfolio his company needed. Any risks, I suppose are already priced in and discounted for it. So there would be fewer negative surprises for his company. Positive surprises would not be many either.

Overall, this is a positive step for the financial system of India.

Sunday, January 10, 2021

ಅಭಯಾರಣ್ಯ ಮಧ್ಯದ ಶಿವಾಲಯ: ಬೇಲದಕುಪ್ಪೆ

ಕಳೆದ ವರ್ಷ ಶಿವರಾತ್ರಿ ಸಮಯದಲ್ಲಿ ಯಾವುದಾದರೂ ಹೊಸ ಜಾಗಕ್ಕೆ ಹೋಗಬೇಕು ಎಂದುಕೊಂಡಾಗ ಸಹೋದ್ಯೋಗಿಯೊಬ್ಬ ಸೂಚಿಸಿದ್ದು ಕಾಡಿನ ಮಧ್ಯೆ ಇರುವ ಈ ದೇವಾಲಯವನ್ನು. ಬೆಳಿಗ್ಗೆಯೇ ಬೆಂಗಳೂರನ್ನು ಬಿಟ್ಟು, ಮೈಸೂರು, ನಂಜನಗೂಡು ಮಾರ್ಗವಾಗಿ (ಹಾಗೆಯೆ ಅಲ್ಲಿ ತಿಂಡಿ ತಿಂದುಕೊಂಡು), ಗುಂಡ್ಲುಪೇಟೆ ಪಟ್ಟಣಕ್ಕಿಂತ ಮುಂಚೆಯೇ ಬಲಕ್ಕೆ ತಿರುಗಿ, ಅಲ್ಲಿಂದ ಅರ್ಧ ಗಂಟೆಗೂ ಹೆಚ್ಚಿನ ಪಯಣದಲ್ಲಿ ನಾವು ಬೇಲದಕುಪ್ಪೆ ತಲುಪಿದಾಗ ಮಧ್ಯಾಹ್ನದ ಹೊತ್ತು. ಈ ದೇವಸ್ಥಾನ ಇರುವುದು ಬಂಡೀಪುರದ ಅಭಯಾರಣ್ಯದಲ್ಲಿ. ದೇವಸ್ಥಾನಕ್ಕಿಂತ ೪ ಕಿ.ಮೀ. ಮುಂಚೆಯೇ ಇರುವ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ನಲ್ಲಿ ನಮ್ಮ ವಿವರ ಕೊಟ್ಟು ದಟ್ಟ ಕಾಡಿನ ಮಾರ್ಗವಾಗಿ ಸಾಗಬೇಕು. ಪ್ರಯಾಣಿಕರು ಮತ್ತು ಕಾಡು ಪ್ರಾಣಿಗಳು ಒಬ್ಬರಿಗೊಬ್ಬರು ತೊಂದರೆ ಕೊಡಬಾರದೆಂದು ಮಾರ್ಗಮಧ್ಯವಾಗಿ ಅರಣ್ಯ ಇಲಾಖೆಯ ಕಾವಲುಗಾರರು ಅಲ್ಲಿ ಸಶಸ್ತ್ರವಾಗಿ ನಿಂತಿರುತ್ತಾರೆ. ಹಚ್ಚ ಹಸಿರಿನ, ಪ್ರಶಾಂತ ಜಾಗದಲ್ಲಿ, ಮುಗಿಲು ಮುಟ್ಟಲು ಪೈಪೋಟಿ ನಡೆಸುವ ಹಾಗೆ ಬೆಳೆದ ನಿಂತ ಎತ್ತರದ ಮರಗಳ ಮಧ್ಯೆ, ಮಹದೇಶ್ವರ ದೇವಸ್ಥಾನವಿದೆ. ಪಕ್ಕದಲ್ಲೇ ಇರುವ ಹೊಂಡದಲ್ಲಿ ನೀರು ಕುಡಿಯಲು ಸಾಲು ಸಾಲು ಜಿಂಕೆಗಳು, ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ಕಾಡು ಹಂದಿಗಳನ್ನು ಕೂಡ ಕಾಣಬಹುದು. ದೇವಸ್ಥಾನದ ಮುಂದಿನ ವಿಶಾಲ ಬಯಲು, ದೈವ ಭಕ್ತರಿಗೂ, ಪರಿಸರ ಪ್ರಿಯರಿಗೂ ಹಾಗೆ ಮಕ್ಕಳಿಗೂ ಕೆಲ ಸಮಯ ಕಳೆಯಲು ಅವಕಾಶ ಮಾಡಿಕೊಡುತ್ತದೆ. ಕುಡಿಯುವ ನೀರಿನ ಸೌಲಭ್ಯವಿದ್ದು, ನೀವು ತಿಂಡಿಯನ್ನು ಕಟ್ಟಿಕೊಂಡು ಹೋದರೆ ಉತ್ತಮ.


ವಾಪಸ್ಸು ಗುಂಡ್ಲುಪೇಟೆಗೆ ಬಂದು, ಅಲ್ಲಿಂದ ಬಂಡೀಪುರದ ಅರಣ್ಯ ಸಫಾರಿಗೆ ಹೋದಾಗ ಅಲ್ಲಿ ಕಂಡದ್ದು ಅವೇ ಜಿಂಕೆಗಳು. ಆದರೆ ಅಪರೂಪಕ್ಕೆ ಎಂಬಂತೆ ಚಿರತೆ ಕೂಡ ಕಾಣಿಸಿತು. ಸಾಯಂಕಾಲಕ್ಕೆ ನಂಜನಗೂಡಿನಲ್ಲಿ ಶ್ರೀಕಂಠೇಶ್ವರನ ದರ್ಶನಕ್ಕೆಂದು ಹೋದರೆ, ಅಲ್ಲಿ ನೆರೆದದ್ದು ಲಕ್ಷಾಂತರ ಜನಸ್ತೋಮ. ಅವರೆಲ್ಲ ಶಿವರಾತ್ರಿಯನ್ನು ಶಿವನ ಸಾನ್ನಿಧ್ಯದಲ್ಲೆ ಕಳೆಯಲೆಂದು ಬಂದವರು.

 

ಈ ಪ್ರವಾಸಕ್ಕೆ ಹೋಗಿ ಬಂದು ಕೇವಲ ಒಂದೇ ವರ್ಷ ಕಳೆದಿದ್ದರೂ , ಎಷ್ಟೋ ಸಮಯ ಕಳೆದು ಹೋದ ಹಾಗೆ ಅನಿಸುತ್ತಿದೆ.



ಬಂಡೀಪುರ ಅಭಯಾರಣ್ಯದಲ್ಲಿರುವ ಬೇಲದಕುಪ್ಪೆ 



ಮಹದೇಶ್ವರನ ಸನ್ನಿಧಿಯಲ್ಲಿ



ದೇವಸ್ಥಾನ ಪಕ್ಕದ  ಹೊಂಡದಲ್ಲಿ ನೀರು ಕುಡಿಯಲು ಬಂದಿರುವ ಜಿಂಕೆಗಳು


ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯಂದು ನೆರೆದಿದ್ದ ಜನಸ್ತೋಮ


Thursday, December 31, 2020

ವಿದಾಯ ೨೦೨೦; ಸುಸ್ವಾಗತ ೨೦೨೧!

ಈ ವರ್ಷ ಉಂಟು ಮಾಡಿದ ಭೀತಿ, ಕಸಿದುಕೊಂಡ ಸ್ವಾತಂತ್ರ್ಯ, ಆರ್ಥಿಕ ವ್ಯವಸ್ಥೆಗೆ ಆದ ಹಾನಿ ಅಪಾರ. ನಾವಲ್ಲದಿದ್ದರೆ, ನಮ್ಮ ಸ್ನೇಹಿತರು, ಬಂಧುಗಳು ಕೊರೊನ ಧಾಳಿಯ ನೇರ ಸಂಕಟ ಅನುಭವಿಸಿದ್ದಾರೆ. ಮಕ್ಕಳು ಶಾಲೆಯ ಕಡೆಗೆ ತಲೆಯೇ ಹಾಕಲಿಲ್ಲ. ಎಷ್ಟೋ ತಿಂಗಳುಗಳ ಕಾಲ ರಸ್ತೆ, ಮಾರುಕಟ್ಟೆಗಳು ಮುಕ್ತವಾಗಿ ಇರದಿದ್ದರೂ, ಇಂಟರ್ನೆಟ್ ಮುಕ್ತವಾಗಿ ಇತ್ತಲ್ಲ. ನಾವುಗಳು ಮನೆಯ ಒಂದು ರೂಮಿನಲ್ಲಿ ಸೇರಿಕೊಂಡು ಆಫೀಸ್ ಕೆಲಸ ಮಾಡುತ್ತ ಬಂದದ್ದಾಯ್ತು. ಒಂದು ಬಾಗಿಲು ಮುಚ್ಚಿದರೆ ಇನ್ನೊಂದು ಬಾಗಿಲು ತೆರೆಯುತ್ತೆ ಅಂತಾರಲ್ಲ. ನಮಗೆ ಇದ್ದ ಅವಕಾಶಗಳಿಗೆ ಹೊಂದಿಕೊಂಡು, ಹಾಗೋ, ಹೀಗೋ, ವಿನೋದವೋ-ವಿಷಾದವೋ ಈ ವರ್ಷ ಕಳೆದದ್ದಾಯ್ತು.


ಸಾಂಕ್ರಾಮಿಕ ರೋಗಗಳು ನಮ್ಮ ಪೀಳಿಗೆಗೆ ಅನುಭವ ಇರದಿದ್ದರೂ, ಇತಿಹಾಸದ ಪುಸ್ತಕಗಳು ಅವು ಉಂಟು ಮಾಡಿದ ಅನಾಹುತಗಳನ್ನು ತಿಳಿಸಿ ಕೊಡುತ್ತವೆ. ಪ್ರಕೃತಿಯು ಕಾಲ ಕಳೆದಂತೆ ಹೊಸ ಜೀವಿಗಳನ್ನು ಹುಟ್ಟು ಹಾಕುತ್ತ,  ಇದ್ದವುಗಳನ್ನು ಮಾರ್ಪಡಿಸುತ್ತ, ಹೊಂದಾಣಿಕೆ ಮಾಡಿಕೊಳ್ಳದವನ್ನು ಹೊಸಕಿ ಹಾಕುತ್ತ ಹೋಗುತ್ತದೆ. ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಆಗದ ಎಷ್ಟೋ ಜೀವಿಗಳು, ಪ್ರಾಣಿ-ಪಕ್ಷಿಗಳು ಭೂಮಿಯಿಂದ ಕಣ್ಮರೆಯಾಗಿ ಹೋಗಿವೆ. ಆದರೆ ಮನುಷ್ಯ ಪ್ರಾಣಿ ತನ್ನ ಬುದ್ದಿವಂತಿಕೆಯಿಂದ ಪ್ರಕೃತಿಯನ್ನು ತುಳಿಯಲು ನೋಡುತ್ತಾನಾದರೂ, ಸಾಧ್ಯವಾಗದಿದ್ದಾಗ ಬಲು ಬೇಗ ಹೊಂದಾಣಿಕೆ ಮಾಡಿಕೊಂಡು ಬದುಕು ಉಳಿಸಿಕೊಳ್ಳುತ್ತಾನೆ. ಆ ಹೊಂದಾಣಿಕೆ ಅವನನ್ನು ಉಳಿದೆಲ್ಲ ಜೀವಿಗಳಿಗಿಂತ ಭಿನ್ನವಾಗಿಸಿ, ಭೂಮಿ ಇರುವವರೆಗೆ ಮಾನವನೂ ಇರಲು ಸಾಧ್ಯ ಎನ್ನುವಂತೆ ಮಾಡಿದೆ.   


ಬರುವ ವರ್ಷ ಶುಭವಾಗಿರಲಿ ಎಂದು ನಾವೆಲ್ಲ ಹಾರೈಸಿದರು, ಅದು ತನ್ನ ಒಡಲಲ್ಲಿ ಏನೆಲ್ಲಾ ಇಟ್ಟುಕೊಂಡಿದೆಯೋ ಕಾದು ನೋಡಬೇಕು. ಅದು ಹೂಮಳೆ ಸುರಿಸಿದರು ಇಲ್ಲ ವಿಷ ಕಾರಿದರು ಹೊಂದಿಕೊಂಡು ಹೋಗಬೇಕು. ಅದನ್ನೇ ನಾವು ನಿನ್ನೆಯಿಂದ ಕಲಿತಿರುವುದು ಮತ್ತು ನಾಳೆಗೆ ಕೊಂಡೊಯ್ಯುತ್ತಿರುವುದು. ಇದನ್ನೇ ಒಂದು ಹಾಡಾಗಿಸಿದ್ದರಲ್ಲ ಚಿ.ಉದಯಶಂಕರ್. ರಾಜಣ್ಣನ ಧ್ವನಿಯಲ್ಲಿರುವ ಈ ಗೀತೆ ಕಾಲಾತೀತವೆನ್ನುವಂತೆ, ಹಿಂದಿಗೂ, ಇಂದಿಗೂ ಮತ್ತು ಮುಂದೆಯೂ ನಮ್ಮ ಜೀವನಕ್ಕೆ ಅನ್ವಯಿಸುತ್ತದೆ.


"ಕಾಲವು ಕುಣಿಸಿದಂತೆ, ಆ ವಿಧಿ ಎಣಿಸಿದಂತೆ, 

ಆಡುವ ಸಮಯದ ಗೊಂಬೆ ಮಾನವ"   


ನಿಜ, ನಾವು ನೀವೆಲ್ಲರೂ ಸಮಯದ ಗೊಂಬೆಗಳಲ್ಲವೇ? ವರ್ಷ ಒಂದು ಕಳೆದು ಇನ್ನೊಂದು ಬಂದರೇನು? ಆದರೂ ರೂಢಿ ತಪ್ಪದೆ, ನಿಮಗೆ ಹೊಸ ವರ್ಷ ಶುಭ ತರಲೆಂದು ಕೋರುತ್ತೇನೆ.



Tuesday, December 29, 2020

ಅವರು ನಮಗೇನು ಸಹಾಯ ಮಾಡಿದ್ದಾರೆ ಎಂದು ಕೇಳುವ ಮುನ್ನ

ನಾವೇ ಅಲ್ಲದಿದ್ದರೆ, ನಮ್ಮ ನಿಮ್ಮ ನಡುವೆ ಅಲ್ಲೊಬ್ಬರು, ಇಲ್ಲೊಬ್ಬರು ಇರುತ್ತಾರೆ. ಅವರು ಯಾರಿಗಾದರೂ ಸಹಾಯ ಮಾಡುವ ಮುನ್ನ "ಅವರು ನಮಗೇನು ಸಹಾಯ ಮಾಡಿದ್ದಾರೆ?" ಎಂದು ಪ್ರಶ್ನೆ ಕೇಳುತ್ತಾರೆ. ಅವರಿಗೆ ಜೀವನ ಒಂದು ವ್ಯವಹಾರ ಎನಿಸಿದ್ದರೆ ಅದು ಅವರ ಅಭಿಪ್ರಾಯ. ಇದು ಲೌಕಿಕವಾಗಿ ಸಾಮಾನ್ಯ ವಿಷಯ ಎಂದು ಅನಿಸಿದರೂ ಇದರ ಬಗ್ಗೆ ಸ್ವಲ್ಪ ವಿಚಾರ ಮಾಡಿ ನೋಡೋಣ.


ನಾವು ಹುಟ್ಟಿದ್ದು ಅಸಹಾಯಕ ಪರಿಸ್ಥಿತಿಯಲ್ಲಿ. ನಾವು ಇನ್ನು ಕೂಸಾಗಿದ್ದಾಗ ಅಮ್ಮ, ಅಜ್ಜಿ, ಅಕ್ಕ ಹೀಗೆ ಹಲವಾರು ವ್ಯಕ್ತಿಗಳು ಲಾಲನೆ ಪಾಲನೆ ಮಾಡಬೇಕಿತ್ತಲ್ಲವೇ? ಹಾಗೆಯೆ ನಾವು ಸತ್ತಾಗ ಕೂಡ ಯಾರೋ ನಮ್ಮನ್ನು ಹೊತ್ತುಕೊಂಡು ಹೋಗಬೇಕು. ಹುಟ್ಟು, ಸಾವಿನ ನಡುವೆ ಕೂಡ  ನಾವು ಸಂಪೂರ್ಣ ಸ್ವಾವಲಂಬಿಯಾಗಿಲ್ಲ. ನಾವು ಶಾಲೆಯಲ್ಲಿದ್ದಾಗ ನಮ್ಮ ಪ್ರತಿಭೆ ಕಂಡು ಪ್ರೋತ್ಸಾಹಿಸಿದ ಶಿಕ್ಷಕರಿದ್ದರಲ್ಲವೇ? ಅವರು ಆ ಕೆಲಸ ಮಾಡದೇ, ಬರಿ ಪಾಠ ಮಾಡಿದ್ದರೂ ಕೂಡ ಅವರಿಗೆ ಸಂಬಳ ಬರುತ್ತಿತ್ತು. ಅವರು ಈ ಹುಡುಗ ತಮಗೆ ಯಾವ ಸಹಾಯ ಮಾಡಿದ್ದಾನೆ ಎಂದು ಕೇಳಿಕೊಳ್ಳಲಿಲ್ಲ. ಕೆಲವೊಮ್ಮೆ ಅವಸರದಲ್ಲಿದ್ದಾಗ ದಾರಿಯಲ್ಲಿ ನಮಗೆ ಲಿಫ್ಟ್ ಕೊಟ್ಟು ಸರಿಯಾದ ಸಮಯಕ್ಕೆ ನಮ್ಮನ್ನು ಸ್ಥಳಕ್ಕೆ ಮುಟ್ಟಿಸುತ್ತಾರಲ್ಲ ಅಪರಿಚಿತರು, ಅವರಿಗೆ ನಾವು ಯಾವ ಸಹಾಯ ಮಾಡಿದ್ದು? ಕೆಲವು ವರ್ಷಗಳ ಹಿಂದೆ ನಾನು ಓಡಿಸುತ್ತಿದ್ದ ಕಾರು ಅಪಘಾತಕ್ಕೀಡಾದಾಗ, ಅಲ್ಲೇ ಇದ್ದ ಕೆಲ ಮಂಗಳಮುಖಿಯರು ನಮ್ಮ ಸಹಾಯಕ್ಕಾಗಿ ಧಾವಿಸಿದ್ದರು. ನಮಗೆ ಅವರ ಪರಿಚಯ ಇದ್ದಿಲ್ಲ ಮತ್ತು ನಾವು ಅವರಿಗೆ ಹಿಂದೆ ಯಾವ ಸಹಾಯ ಮಾಡಿದ್ದಿಲ್ಲ. ಯಾವುದೊ ಕಷ್ಟದ ಸಮಯದಲ್ಲಿ ನಮ್ಮ ಜೊತೆಗೆ ನಿಲ್ಲುವ ಸ್ನೇಹಿತನಿಗೆ ನಾವು ಹಿಂದೆ ಸಹಾಯ ಮಾಡಿರಲೇಬೇಕು ಎಂದೇನಿದೆ? ಅವರೆಲ್ಲರೂ "ಇವರು ನಮಗೇನು ಸಹಾಯ ಮಾಡಿದ್ದಾರೆ?" ಎಂದು ನಮ್ಮ ಬಗ್ಗೆ ಕೇಳಿಕೊಂಡಿದ್ದರೆ ನಮ್ಮ ಜೀವನ ಹೇಗಿರುತ್ತಿತ್ತು?


ಜಗತ್ತಿನಲ್ಲಿ ಸ್ವಾರ್ಥಿಗಳೇ ತುಂಬಿರಬಹುದು. ಆದರೆ ಸ್ವಾರ್ಥವನ್ನು ಮೆಟ್ಟಿ ನಿಲ್ಲುವ ಜನರೂ ಇದ್ದಾರಲ್ಲ. ಸ್ವತ ಬ್ರಹ್ಮಚಾರಿಯಾದ ಶಿವಕುಮಾರ ಸ್ವಾಮಿಗಳು ಸಿದ್ಧಗಂಗೆಯಲ್ಲಿ ಮಠ ಕಟ್ಟಿ, ಸಾವಿರಾರು ಜನರ ಮಕ್ಕಳಿಗೆ ಆಸರೆಯಾಗಲಿಲ್ಲವೇ? ಅವರ ಮನಸ್ಸಿನಲ್ಲಿ "ಇವರು ನಮಗೇನು ಸಹಾಯ ಮಾಡಿದ್ದಾರೆ?" ಎನ್ನುವ ಪ್ರಶ್ನೆ ಯಾವತ್ತೂ ಬಂದಿರಲಿಕ್ಕಿಲ್ಲ. ದಿನ ನಿತ್ಯ ದಾಸೋಹ ನಡೆಸುವ ಧರ್ಮಸ್ಥಳದ ಹೆಗ್ಗಡೆಯವರು ಬಂದಿರುವ ಭಕ್ತರಿಗೆ "ಇವರು ನಮಗೇನು ಸಹಾಯ ಮಾಡಿದ್ದಾರೆ?" ಎಂದು ಯಾವತ್ತಾದರೂ ಕೇಳಿದ್ದಾರೆಯೇ? ಸ್ವಾರ್ಥಿಗಳು ಸಾವಿರಾರು ಜನ ಇದ್ದರೂ, ಅದನ್ನು ಮೆಟ್ಟಿ ನಿಲ್ಲುವ ಒಬ್ಬೊಬ್ಬ ವ್ಯಕ್ತಿ ಸಮಾಜವನ್ನು ಮುನ್ನಡೆಸುತ್ತಾ ಹೋಗುತ್ತಾನೆ.


ನಾವು ಅಂತಹ ಮಹಾ ಪುರುಷರು ಆಗದಿದ್ದರೂ ಪರವಾಗಿಲ್ಲ. ಆದರೆ ನಮ್ಮ ಕೈಲಾಗುವ ಸಣ್ಣ ಪುಟ್ಟ ಸಹಾಯ ಮಾಡಲು ನಾವು "ಅವರು ನಮಗೇನು ಸಹಾಯ ಮಾಡಿದ್ದಾರೆ?" ಎಂದು ಪ್ರಶ್ನೆ ಕೇಳಿಕೊಳ್ಳಬೇಕೇ? ಯಾರೋ ವಂಚಕರಿಗೆ ಸಹಾಯ ಮಾಡಿ ಎಂದು ನಾನು ಹೇಳುತ್ತಿಲ್ಲ. ಇಲ್ಲವೇ ಉದಾರಿಯಾಗಿ ದಾನ ಧರ್ಮಕ್ಕೆ ನಿಲ್ಲಿ ಎಂದೂ ಹೇಳುತ್ತಿಲ್ಲ. ಆದರೆ ನಿಜ ಅವಶ್ಯಕತೆ ಇದೆ ಎಂದು ನಮಗೆ ಅನಿಸಿದಲ್ಲಿ ಮತ್ತು ಆ ಸಹಾಯದಿಂದ ನಾವು ಹೆಚ್ಚು ಏನು ಕಳೆದುಕೊಳ್ಳುವಿದಿಲ್ಲ ಎಂದಲ್ಲಿ, ಆಗ ನಾವು ಪ್ರಶ್ನೆ ಕೇಳಿಕೊಳ್ಳುವ ಅಗತ್ಯವೇನಿದೆ? ನಮ್ಮಿಂದ ಸಹಾಯ ಪಡೆದ ಜನರಿಗೆ ನಮಗೆ ಸಹಾಯ ಮಾಡುವ ಸಾಮರ್ಥ್ಯ ಇರದೇ ಇರಬಹುದು ಅಥವಾ ಅಂತಹ ಪರಿಸ್ಥಿತಿ  ಬರದೇ ಹೋಗಬಹುದು. ಅಥವಾ ಅವರು ನಮ್ಮನ್ನು ಮರೆತು ಕೂಡ ಹೋಗಬಹುದು. ಯಾವುದೇ ಸಹಾಯಕ್ಕೆ ಮುನ್ನ ಅದರಿಂದ ನಮಗೇನು ಲಾಭ ಎಂದು ಕೇಳಿಕೊಳ್ಳುತ್ತಾ ಹೋದರೆ, ನಮ್ಮ ಸುತ್ತ ಮುತ್ತ ಅಂತಹ ಜನರೇ ತುಂಬುತ್ತ ಹೋಗುವುದಿಲ್ಲವೆ?


ಆದರೆ ನಮ್ಮ ಕುಟುಂಬದಲ್ಲೇ ಆ ಪ್ರಶ್ನೆ ಕೇಳುವ ಜನರಿದ್ದರೆ ಏನು ಮಾಡುವುದು? ಮತ್ತು ಅವರು ನಿಮ್ಮ ಕೈ ತಡೆದರೆ ನೀವು ಆಗೇನು ಮಾಡುವಿರಿ? ನನ್ನನ್ನು ಕುಟುಂಬದವರು ಬುದ್ಧಿಗೇಡಿ ಎಂದು ಕರೆದರೂ, ನನಗೆ ಮಾತ್ರ ಆ ಪ್ರಶ್ನೆ ಕೇಳಿಕೊಳ್ಳಲು ಆಗುತ್ತಿಲ್ಲ. ನನಗೆ ಹಿಂದೆ ಸಹಾಯ ಮಾಡಿದ ಅನೇಕ ಅಪರಿಚಿತರೇ ನನಗೆ ಆದರ್ಶ. ಅವರು ನನ್ನ ಜೊತೆ ಯಾವುದೇ ವ್ಯವಹಾರದ ಅಥವಾ ಋಣ ಸಂದಾಯದ ಮಾತು ಆಡಲಿಲ್ಲ. ಸ್ವಾರ್ಥಿಗಳು, ವಂಚಕರ ನಡುವೆಯೂ ಸಮಾಜದ ಬಗ್ಗೆ ವಿಶ್ವಾಸ ಹುಟ್ಟಿಸುವ ವ್ಯಕ್ತಿಗಳು, ಪ್ರತಿಫಲ ಬಯಸದೆ ಮಾಡುವ ಕೆಲಸಗಳು ಉಂಟು ಮಾಡುವ ನೆಮ್ಮದಿಯನ್ನು ತೋರಿಸಿಕೊಡುತ್ತಾರೆ ಅಲ್ಲವೇ? ಅವರು ಕೇಳಿಕೊಳ್ಳದ ಪ್ರಶ್ನೆ ನಾವೇಕೆ ಕೇಳಿಕೊಳ್ಳಬೇಕು?