Showing posts with label ಕನ್ನಡ ಪುಸ್ತಕ ಪರಿಚಯ. Show all posts
Showing posts with label ಕನ್ನಡ ಪುಸ್ತಕ ಪರಿಚಯ. Show all posts

Thursday, March 17, 2022

ಕವನ ಸಂಕಲನ: ಹರಿದ ಹೊಕ್ಕಳ ಬಳ್ಳಿ; ಲೇಖಕರು: ವರದೇಂದ್ರ

ಚೊಚ್ಚಲ ಕವನ ಸಂಕಲನವನ್ನು ಹೊರ ತಂದಿರುವ ಗೆಳೆಯ ವರದೇಂದ್ರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಬರೀ ಅಕ್ಷರ ಪ್ರೇಮವಿದ್ದರೆ ಸಾಲದು, ಭಾವನೆಗಳ ತುಡಿತವಿರದೆ ಯಾರೂ ಕವಿಯಾಗಲಾರರು. ಕಥೆಗಳನ್ನು ಕಥೆಗಾರ ಸೃಷ್ಟಿಸಿದರೆ, ಕಾವ್ಯಗಳೇ ಕವಿಯನ್ನು ಸೃಷ್ಟಿಸುತ್ತವೆ. ಭಾವನೆಗಳು ತೀವ್ರವಾದಾಗ, ತಾಳಲಾರದ ಪ್ರಸವ ವೇದನೆಯಂತೆ ಕಾವ್ಯ ಮೈದಳೆಯುತ್ತದೆ.


ಕಾದಂಬರಿಕಾರ ನೂರಾರು ಪುಟಗಳಲ್ಲಿ ಹೇಳುವುದನ್ನು ಕಥೆಗಾರ ನೂರಾರು ಸಾಲುಗಳಲ್ಲಿ ಹೇಳಿ ಮುಗಿಸುತ್ತಾನೆ. ಆದರೆ ಕವಿ ಹತ್ತಾರು ಪದಗಳಲ್ಲಿ ಹೆಚ್ಚಿನ ಸರಕನ್ನು ಸಾಗಿಸಿ ಬಿಡುತ್ತಾನೆ. ಅವ್ಯಕ್ತ ಭಾವನೆಗಳು ಪದ ಜೋಡಣೆಯೊಳಗೆ ತೂರಿಕೊಂಡು ಕಾವ್ಯವನ್ನು ಜೀವಂತವಾಗಿಸುತ್ತವೆ. ಕಾಳಿದಾಸನಿಂದ ಕುವೆಂಪುವರೆಗೆ ನೂರಾರು ಕವಿಗಳು ಕಾವ್ಯಗಳನ್ನು ರಚಿಸಿದರೂ ಅದಕ್ಕೆ ಸ್ಪೂರ್ತಿ ಮಾತ್ರ ಪ್ರಕೃತಿ ಮತ್ತು ಅವರ ಸಮಾಜದ ಒಡನಾಟಗಳು. ಕವಿ ತಾನಿರುವ ಕಾಲದ ಸಂಸ್ಕೃತಿಯನ್ನು, ಸಮಾಜವನ್ನು ಪ್ರತಿಬಿಂಬಿಸುತ್ತಾನೆ. ಕಾವ್ಯಗಳು ಅಂದಿನ ಸಮಾಜದ ಭಾವನೆಗಳ ಪ್ರತಿರೂಪವಾಗಿರುತ್ತವೆ. ಮತ್ತೆ ಕೆಲವು ಕಾಲಾತೀತವಾಗಿ ಮಾನವ ಬದುಕಿನ ಸಂಗಾತಿಯಾಗುತ್ತವೆ.  ಅದಕ್ಕೆ ನೋಡಿ ಕರ್ತೃ ಯಾರು ಎಂದು ಗೊತ್ತಿರದಿದ್ದರೂ ಜಾನಪದ ಗೀತೆಗಳು ನಮ್ಮ ಮನದಿಂದ ಮರೆಯಾಗದೆ ಹೋಗದಿರುವುದು.


ಕವಿ ವರದೇಂದ್ರ ಅವರು ನಮ್ಮ-ನಿಮ್ಮ ಅನುಭವಗಳನ್ನೇ ಕಾವ್ಯವನ್ನಾಗಿಸಿದ್ದಾರೆ. ಶಬ್ದ ಜೋಡಣೆ ಅವರದಾದರೂ, ಅನುಭವಗಳು ನಮ್ಮವೂ ಕೂಡ. ಈ ಸಂಕಲನದ ಕವಿತೆಗಳ ಕೆಲ ಸಾಲುಗಳನ್ನು ಓದಿ ನೋಡಿ.


'ಕಲ್ಲೊಳಗೆ ಹುಟ್ಟುವ ಸಸಿಗೆ ವಿಶ್ವಾಸ' (ಬಾ ಯುಗಾದಿ ಮತ್ತೆ)

 

'ಚಟ್ಟಕೆ ದಾರಿ ಮಾಡಿದವರು, ಆದರೂ ಇವರು ನಮ್ಮವರು' (...ವರು)


'ಬೆಳಕ ಕಂಡು ಬೆಂಕಿಯೆಂದರೆ  ಕತ್ತಲೆನು ಮಾಡಿತು' (ದಾರಿ ದೀಪ)


'ಸಾಧನೆಗೆ ಎಲ್ಲೇ ಮೀರುವ ಹಸಿವು'   (ಹಸಿವು)


ವರದೇಂದ್ರ ಅವರ ಸಾಹಿತ್ಯ ಸೇವೆ ಹೀಗೆ ಮುಂದುವರೆಯಲಿ, ಅವರ ಕವಿತೆಗಳು ಓದುಗರ ಮನಗಳ ಸಂಗಾತಿಯಾಗಲಿ ಎಂದು ಹಾರೈಸುವೆ.

(Author Contact: Varadendra, 9945253030)



Sunday, July 25, 2021

ಪುಸ್ತಕ ಪರಿಚಯ: ತೇಜೋ-ತುಂಗಭದ್ರಾ (ಲೇಖಕರು: ವಸುಧೇಂದ್ರ)

ಇದು ಹದಿನೈದನೇ ಶತಮಾನದಲ್ಲಿ ನಡೆಯುವ ಕಥಾ ವಸ್ತುವನ್ನು ಹೊಂದಿದೆ. ಪೋರ್ಚುಗೀಸ್ ದೇಶದ ತೇಜೋ ನದಿ ದಡದ, ಲಿಸ್ಬನ್ ನಗರದಲ್ಲಿ ವಾಸಿಸುವ ಗೇಬ್ರಿಯಲ್ ಮತ್ತು ವಿಜಯನಗರ ಸಾಮ್ರಾಜ್ಯದಲ್ಲಿ, ತುಂಗಭದ್ರಾ ನದಿ ದಡದಲ್ಲಿರುವ ತೆಂಬಕಪುರದಲ್ಲಿ ವಾಸಿಸುವ ಹಂಪಮ್ಮ ಈ ಕಾದಂಬರಿಯ ಕೇಂದ್ರ ಬಿಂದುಗಳು. ಅವರಲ್ಲದೇ ಇನ್ನೂ ಹತ್ತಾರು ಪಾತ್ರಗಳು ತಮ್ಮ ಕಥೆಗಳನ್ನು ಹೇಳುತ್ತಾ ವಿಶಿಷ್ಟ ಛಾಪು ಮೂಡಿಸುತ್ತಾರೆ.


ಕ್ರಿಶ್ಚಿಯನ್ ಆದ ಗೇಬ್ರಿಯಲ್ ಗೆ, ಯಹೂದಿ ಧರ್ಮಕ್ಕೆ ಸೇರಿದ ಬೆಲ್ಲಾಳನ್ನು ಮದುವೆಯಾಗುವ ಆಸೆ. ಆದರೆ ಅವಳ ಅಪ್ಪ ಶ್ರೀಮಂತರಿಗೆ ಮಾತ್ರ ತನ್ನ ಮಗಳು ಸಿಗುವುದು ಎಂದು ಸ್ಪಷ್ಟ ಪಡಿಸಿದ ಮೇಲೆ, ಹೇಗಾದರೂ ತನ್ನ ಬಡತನ ಕಳೆದುಕೊಳ್ಳುವ ಉದ್ದೇಶದಿಂದ, ಶ್ರೀಮಂತಿಕೆ-ವೈಭವದಿಂದ ಮೆರೆಯುವ ಭಾರತಕ್ಕೆ, ಹಣ ಗಳಿಸುವುದಕ್ಕಾಗಿ ತೆರಳುತ್ತಾನೆ. ಅಷ್ಟರಲ್ಲಾಗಲೇ ವಾಸ್ಕೋ-ಡಾ-ಗಮ ಭಾರತಕ್ಕೆ ಸಮುದ್ರ ಮಾರ್ಗ ಕಂಡು ಹಿಡಿದಿದ್ದನಲ್ಲ. ಅವನ ಹಡಗುಗಳು ಮಸಾಲೆ, ರತ್ನ-ವೈಡೂರ್ಯಗಳನ್ನು ಹೊತ್ತು ತಂದು, ಅವನ ಜೊತೆಗಾರರನ್ನು ಶ್ರೀಮಂತರನ್ನಾಗಿಸುವುದಲ್ಲದೆ ರಾಜ ಮನೆತನದ ಬೊಕ್ಕಸವನ್ನು ಕೂಡ ತುಂಬಿದ್ದವು. ಭಾರತದೊಡನೆ ವ್ಯಾಪಾರ ಮಾಡಿದರೆ ಬಡತನ ಕಳೆದುಹೋಗುವುದು ಸುಲಭ ಎನ್ನುವುದು ಎಲ್ಲ ಸಾಮಾನ್ಯ ಜನರಿಗೂ ಗೊತ್ತಾಗಿ ಹೋಗಿತ್ತು.


ತೆಂಬಕಪುರದಲ್ಲಿ ಹಂಪಮ್ಮಳನ್ನು ಮದುವೆಯಾಗುವ ಉದ್ದೇಶದಿಂದ ಇಬ್ಬರು ಜಟ್ಟಿಗಳು ಕಾಳಗಕ್ಕೆ ಇಳಿದಿದ್ದರು. ಸೋತವನು ಸತ್ತರೆ, ಗೆದ್ದವನಿಗೆ ಹಂಪಮ್ಮಳ ಕೈ ಹಿಡಿಯುವ ಅದೃಷ್ಟ. ಆ ಕಾಳಗ ನೋಡಲು, ಸ್ವತಃ ಶ್ರೀಕೃಷ್ಣದೇವರಾಯರೇ ತಮ್ಮ ರಾಣಿಯರ ಜೊತೆ ತೆಂಬಕಪುರಕ್ಕೆ ಆಗಮಿಸಿದ್ದರಲ್ಲ. ಅದರಲ್ಲಿ ಗೆದ್ದ ಕೇಶವ ಹಂಪಮ್ಮಳನ್ನು ಮದುವೆಯಾದರೂ, ಕೆಲವೇ ವರುಷಗಳಿಗೆ ಕೃಷ್ಣದೇವರಾಯರಿಗೆ ಗಂಡು ಮಗುವಾದಾಗ, ಲೆಂಕನಾಗಿ ಪ್ರಾಣ ತೆರುತ್ತಾನೆ. ಸಹಗಮನಕ್ಕೆ ಒಪ್ಪದ, ಆಗಲೇ ಗರ್ಭಿಣಿಯಾಗಿದ್ದ ಹಂಪಮ್ಮ, ತಪ್ಪಿಸಿಕೊಂಡು ನದಿ ದಾಟುತ್ತಾಳೆ.


ಭಾರತಕ್ಕೆ ಬಂದು ತಲುಪಿದ ಗೇಬ್ರಿಯಲ್, ಗೋವಾದಲ್ಲಿ ಬಿಜಾಪುರ ಸುಲ್ತಾನರ ಕೈಗೆ ಸಿಕ್ಕು, ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು, ಅಹ್ಮದ್ ಖಾನ್ ನಾಗಿ ಬದಲುಗುತ್ತಾನೆ. ಮತ್ತೆ ಪೋರ್ಚುಗೀಸ್ ರ ಧಾಳಿಗೆ ಸಿಕ್ಕು ತನ್ನ ಕಿವಿ-ಮೂಗುಗಳನ್ನು ಕೊಯ್ಯಿಸಿಕೊಂಡು ವಿರೂಪಗೊಳ್ಳುತ್ತಾನೆ. ಕೊನೆಗೆ ವಿಜಯನಗರಕ್ಕೆ ಬಂದು ನೆಲೆಗೊಳ್ಳುತ್ತಾನೆ. ಅವನ ಹೆಸರು ಕನ್ನಡಕ್ಕೆ ರೂಪಾಂತರಗೊಂಡು  ಅಮ್ಮದಕಣ್ಣ ನಾಗಿ ಬದಲಾಗುತ್ತದೆ.


ನದಿ ದಾಟಿ ಬಂದ ಹಂಪಮ್ಮಳಿಗೆ, ಅವಳನ್ನು ಕೊಲ್ಲಲು ಹಿಂದೆ ಬೆನ್ನಟ್ಟಿ ಬರುತ್ತಿರುವವರಿಂದ ಕಾಪಾಡುವ ಉದ್ದೇಶದಿಂದ ಅಮ್ಮದಕಣ್ಣ, ಹಂಪಮ್ಮಳನ್ನು ತನ್ನ ಕುದುರೆಯ ಮೇಲೆ ಗೋವಾ ಗೆ ಕರೆದೊಯ್ಯುತ್ತಾನೆ. ಮಾರ್ಗ ಮಧ್ಯದಲ್ಲಿ ಪುರಂದರ ದಾಸರ ದರ್ಶನವಾಗಿ ಅವರು ಇವರನ್ನು ಹರಸುತ್ತಾರೆ. ಗೋವಾ ತಲುಪಿ ಪೋರ್ಚುಗೀಸ್ ರ ಆಶ್ರಯ ಪಡೆಯುವ ಹಂಪಮ್ಮ, ತನಗೆ ನೆರವಾದ ಅಮ್ಮದಕಣ್ಣನನ್ನು ತನಗೆ ಜೋಡಿಯಾಗುವಂತೆ ಕೇಳಿಕೊಳ್ಳುತ್ತಾಳೆ.


ಪರದೇಶದವನಿಗೆ ಆಶ್ರಯ ಕೊಟ್ಟ ಹಂಪೆ, ತನ್ನದೇ ನಾಡಿನವಳಿಗೆ ಹೊರ ಹೋಗುವಂತ ಸನ್ನಿವೇಶ ಸೃಷ್ಟಿಸುವ ವಿಪರ್ಯಾಸ ಈ ಕಥೆಯಲ್ಲಿದೆ. ಸಣ್ಣ ಕಥೆಗಳಲ್ಲಿರುವ ಸೂಕ್ಷ್ಮತೆ, ಆರ್ದ್ರತೆ ಈ ಕಾದಂಬರಿ ಉದ್ದಕ್ಕೂ ಕಾಪಾಡಿಕೊಂಡು ಬಂದಿದ್ದಾರೆ ಲೇಖಕರು. ಐದು ನೂರು ವರುಷಗಳ ಹಿಂದೆ ಇದ್ದ ಸಮಾಜದ ಸಂಸ್ಕೃತಿ, ಧರ್ಮ-ಅಧರ್ಮದ ವಿಮರ್ಶೆ, ಸಾಮಾಜಿಕ ಸ್ಥಿತಿ-ಗತಿಗಳು, ಮತ್ತು ಜೀವನಶೈಲಿ ಇವುಗಳನ್ನು ವಾಸ್ತವಕ್ಕೆ ಹತ್ತಿರವಾಗಿ ಅಕ್ಷರಗಳಲ್ಲಿ ಈ ಕೃತಿಯ ಮೂಲಕ ಮೂಡಿಸಿದ್ದಾರೆ ಲೇಖಕ ವಸುಧೇಂದ್ರ. ಬಡತನ-ಹಸಿವು, ಧರ್ಮ ಮತ್ತು ರಾಜಭಕ್ತಿಗಳನ್ನು ಮೀರಿದ್ದು, ಹಾಗೆಯೇ ಮನುಷ್ಯ ತನ್ನ ಅಧಿಕಾರ ದಾಹಕ್ಕೆ ಧರ್ಮ ಮತ್ತು ಕ್ರೌರ್ಯಗಳನ್ನು ಹೇಗೆ ಬಳಸಿಕೊಳ್ಳುತ್ತಾನೆ ಎಂದು ಈ ಕಾದಂಬರಿಯ ಕೆಲವು ಪಾತ್ರಗಳು ಸ್ಪಷ್ಟ ಪಡಿಸುತ್ತವೆ. 


ಇತಿಹಾಸಕ್ಕೆ, ಸಮಾಜಕ್ಕೆ ಮತ್ತು ಮನುಷ್ಯ ವರ್ಗಕ್ಕೆ ಕನ್ನಡಿ ಹಿಡಿಯುವ ಕೃತಿಯಾಗಿದೆ ಈ ಕಾದಂಬರಿ.




Tuesday, November 17, 2020

ಪುಸ್ತಕ ಪರಿಚಯ: ಪೆದ್ದಚೆರುವಿನ ರಾಕ್ಷಸ (ಪೂರ್ಣ ಚಂದ್ರ ತೇಜಸ್ವಿ)

 ಇಂದು ನಾವು ಹುಲಿ ನೋಡಬೇಕೆಂದರೆ ಮೃಗಾಲಯಕ್ಕೆ ಹೋಗಬೇಕು. ಬಂಡೀಪುರ, ನಾಗರಹೊಳೆ ಕಾಡಿನಲ್ಲಿ ಸಫಾರಿ ಹೋದರೂ, ಹುಲಿರಾಯನ ದರ್ಶನವಾಗುವುದು ಅತಿ ವಿರಳ. ಆದರೆ ಕೇವಲ ೬೦- ೭೦ ವರ್ಷಗಳ ಹಿಂದೆ ಕಾಡಿನ ವಿಸ್ತಾರ ದೊಡ್ಡದಿದ್ದು, ಹುಲಿಗಳು ಕಾಡಿನಂಚಿನ ಹಳ್ಳಿಗಳಿಗೆ ನುಗ್ಗಿ ದನಗಳನ್ನು ಬೇಟೆಯಾಡುವುದು ಮತ್ತು ಅಪರೂಪಕ್ಕೆ ನರಭಕ್ಷಕನಾಗುವುದು, ಜನರು ಅದರ ಭೀತಿಯಲ್ಲಿ ಹೊತ್ತಿಗೆ ಮುಂಚೆ ಮನೆ ಸೇರುವುದು ಇವೆಲ್ಲ ಸರ್ವೇ ಸಾಮಾನ್ಯ ಸಂಗತಿಯಾಗಿತ್ತು ಎನ್ನುವುದು ಇಂದಿನ ನವ ಪೀಳಿಗೆಗೆ ಆಶ್ಚರ್ಯಕರ ಸಂಗತಿ ಎನ್ನಿಸಬಹುದು. ಒಂದು ಹುಲಿ ನರಭಕ್ಷಕನಾದಾಗ ಬೇರೆ ದಾರಿಯಿಲ್ಲದೆ ಆ ಹುಲಿಯನ್ನು ಮುಗಿಸಲು ಬೇಟೆಗಾರರಿಗೆ ಕರೆ ಹೋಗುತ್ತಿತ್ತು. ಅದರಲ್ಲಿ ಮುಖ್ಯವಾದವರು - ಉತ್ತರ ಭಾರತದಲ್ಲಿ ಜಿಮ್ ಕಾರ್ಬೆಟ್ ಮತ್ತು ದಕ್ಷಿಣದಲ್ಲಿ ಕೆನೆತ್ ಆಂಡರ್ಸನ್. ನಮ್ಮ ದಕ್ಷಿಣ ಭಾಗದ ಹಲವಾರು ನರಭಕ್ಷಕ ಹುಲಿ-ಚಿರತೆಗಳಿಗೆ ಮುಕ್ತಿ ಕಾಣಿಸಿದವರು ಕೆನೆತ್ ಆಂಡರ್ಸನ್. ಅವರು ಜನರಿಗೆ ತೀವ್ರ ಉಪಟಳ ಕೊಟ್ಟ ಪ್ರಾಣಿಗಳನ್ನು ಬೇಟೆಯಾಡುವುದಲ್ಲದೇ, ಒಳ್ಳೆಯ ಬರಹಗಾರರೂ ಆಗಿದ್ದರು. ಅವರು ಇಂಗ್ಲಿಷ್ ನಲ್ಲಿ ರಚಿಸಿದ ಕಾಡಿನ ಕಥೆಗಳನ್ನು ಕನ್ನಡ ಭಾಷೆಗೆ ರೂಪಾಂತರ ತಂದವರು ತೇಜಸ್ವಿ. ಇದನ್ನು ಅನುವಾದ ಎನ್ನದೇ ರೂಪಾಂತರ ಎಂದು ಕರೆಯುವ ಕಾರಣ ತೇಜಸ್ವಿಯವರಿಗೆ ಕಾಡು-ಪರಿಸರದ ಬಗ್ಗೆ ಇದ್ದ ಜ್ಞಾನ. ಹಾಗಾಗಿ ಈ ಕಥೆಗಳನ್ನು ಕನ್ನಡಕ್ಕೆ ಯಥಾವತ್ತಾಗಿ ಭಟ್ಟಿ ಇಳಿಸುವ ಬದಲಿಗೆ ಜೀವ ತುಂಬುವ ಪ್ರಕ್ರಿಯೆ ಅವರಿಂದ ಸಾಧ್ಯವಾಯಿತು.

 

ಈ ಕಾಡಿನ ಕಥೆಗಳು ನಾಲ್ಕು ಪುಸ್ತಕಗಳಾಗಿ ಹೊರ ಬಂದಿವೆ. ಅದರಲ್ಲಿ ಎರಡನೇ ಭಾಗವಾದ ಪೆದ್ದಚೆರುವಿನ ರಾಕ್ಷಸ ಪುಸ್ತಕವನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಇದು ಮೂರು ಚಿಕ್ಕ ಕಥೆಗಳನ್ನು (ಪೆದ್ದಚೆರುವಿನ ರಾಕ್ಷಸ, ತಾಳವಾಡಿಯ ಮೂಕರಾಕ್ಷಸ ಮತ್ತು ಲಕ್ಕವಳ್ಳಿಯ ಹೆಬ್ಬುಲಿ) ಹೊಂದಿದೆ. ಅದರಲ್ಲಿನ 'ಲಕ್ಕವಳ್ಳಿಯ ಹೆಬ್ಬುಲಿ' ಯ ಕಥೆಯನ್ನು ಸ್ವಲ್ಪ ವಿವರದಲ್ಲಿ ನೋಡೋಣ.

 

ಕೆನೆತ್ ಆಂಡರ್ಸನ್ ಅವರಿಗೆ  ಲಕ್ಕವಳ್ಳಿಗೆ (ಚಿಕ್ಕ ಮಗಳೂರು ಜಿಲ್ಲೆ- ಭದ್ರ ಜಲಾಶಯ ಹಾಗೂ ಹುಲಿ ಅಭಯಾರಣ್ಯಕ್ಕೆ ಹೊಂದಿಕೊಂಡ ಹಳ್ಳಿ) ಬರಲು ಆಹ್ವಾನ ನೀಡುತ್ತಾರೆ ಅಲ್ಲಿನ ಆಣೆಕಟ್ಟಿನ ಜವಾಬ್ದಾರಿ ಹೊತ್ತ ಇಂಜಿನಿಯರ್ ಒಬ್ಬರು. ವಿಷಯ ಕೆದಕಿದಾಗ ತಿಳಿದು ಬರುವುದು ಇಷ್ಟು. ಒಂದು ದೊಡ್ಡ ಹುಲಿ ಲಕ್ಕವಳ್ಳಿ ರಸ್ತೆಯ ಕಾಡಿನಲ್ಲಿ ಸೇರಿಕೊಂಡು ಅಲ್ಲಿ ಮೇಯಲು ಹೋಗುತ್ತಿದ್ದ ದನಗಳನ್ನು ದಿನಂಪ್ರತಿ ಹಿಡಿದು ತಿನ್ನಲು ಶುರು ಮಾಡಿತ್ತು. ದಿನ ಕಳೆದಂತೆ ದನ ಕಾಯುವರ ಕೋಪ ಹಾಗೂ ಹುಲಿಯ ಧೈರ್ಯ ಎರಡೂ ಹೆಚ್ಚುತ್ತಾ ಹೋಗಿ, ಇಬ್ಬರೂ ಮುಖಾ-ಮುಖಿಯಾದರು. ಹುಲಿ ಅವನನ್ನು ಕೊಂದು ಅರ್ಧಂಬರ್ಧ ತಿಂದು, ದನವನ್ನೂ ಹೊತ್ತುಕೊಂಡು ಹೋಯಿತು. ನಂತರ ಸರಣಿ ಕೊಲೆಗಳನ್ನು ನಡೆಸುತ್ತ ಸಂಪೂರ್ಣ ನರಭಕ್ಷಕನಾಗಿ ಬದಲಾಯಿತು. ಅದನ್ನು ಬೇಟೆಯಾಡಲು ಲಕ್ಕವಳ್ಳಿಗೆ ಬಂದ ಕೆನೆತ್ ರಿಗೆ, ಹುಲಿ ಆಗ ತಾನೇ ಒಬ್ಬ ಕೂಲಿಯವನೊಬ್ಬನನ್ನು ಹೊತ್ತುಕೊಂಡು ಹೋಗಿರುವುದು ತಿಳಿಯುತ್ತದೆ. ಜಾಡು ಹಿಡಿದು ಕಾಡು ಹೊಕ್ಕರೆ, ಕೊಂಚ ಕಾಲದಲ್ಲೇ ಹೆಜ್ಜೆ-ಗುರುತು, ರಕ್ತದ ಕಲೆಗಳು ಕಾಣುವುದು ನಿಂತು ಹೋಗುತ್ತದೆ. ವಾಪಸ್ಸು ಬಂದು ಅರಣ್ಯ ಇಲಾಖೆಯವರಲ್ಲಿ ಅವರು ಯಾವುದಾದರೂ ಗುಹೆಯನ್ನು ನೋಡಿದ್ದಾರೆಯೇ ಎಂದು ವಿಚಾರಿಸಿದಾಗ, ಕಾಡಿನಲ್ಲಿ ಒಂದು ಪಾಳು ಬಿದ್ದ ಗುಡಿಯ ಬಗ್ಗೆ ತಿಳಿಯುತ್ತದೆ. ಅಲ್ಲಿ ಹೋಗಿ ಪರಿಶೀಲಿಸಿದರೆ ಹುಲಿ ಅದನ್ನು ತನ್ನ ವಾಸ ಸ್ಥಾನ ಮಾಡಿಕೊಂಡಿಲ್ಲ ಎಂದು ತಿಳಿಯುತ್ತದೆ. ನಂತರ ಒಬ್ಬ ದನ ಮೇಯಿಸುವವನಿಂದ ಪಾಳು ಗುಡಿಯ ಒಂದು ಮೈಲಿಯಾಚೆ ಗುಹೆ ಇರುವುದಾಗಿ ತಿಳಿಯುತ್ತದೆ. ಆ ಗುಹೆಯ ಹತ್ತಿರ ಹೋದಾಗ ಅತಿ ಸನಿಹದಲ್ಲೇ ಮೇಲೆರಗಲು ಸಿದ್ಧವಾಗಿದ್ದ ಹುಲಿರಾಯನ ದರ್ಶನವಾಗುತ್ತದೆ. ಬದುಕು-ಸಾವಿನ ಕೆಲವು ಕ್ಷಣಗಳ ಮಧ್ಯದಲ್ಲೇ ಗುರಿಯಿಟ್ಟು ಗುಂಡು ಹಾರಿಸಿ ಪಕ್ಕಕ್ಕೆ ಉರುಳುತ್ತಾರೆ ಬೇಟೆಗಾರ ಕೆನೆತ್. ಇವರ ಮೇಲೆ ಹಾರಿದ ಹುಲಿ ಸತ್ತು ಬೀಳುತ್ತದೆ. ಸತ್ತ ಮೇಲೆ ಪರೀಕ್ಷಿಸಿದಾಗ ಅದೊಂದು ವಯಸ್ಸಾದ, ಬೇಟೆಯಾಡಲು ಅಸಮರ್ಥವಾದ ಪ್ರಾಣಿ ಎಂದು ತಿಳಿಯುತ್ತದೆ. ಕತ್ತಲಾದರೂ ನಿರ್ಭಿತಿಯಿಂದ ಮರಳುತ್ತಾರೆ ಬೇಟೆಗಾರ ಮತ್ತು ಅವನ ಜೊತೆಗಾರ.

 

ಈ ಪುಸ್ತಕದ ಕರ್ತೃ ಪೂರ್ಣ ಚಂದ್ರ ತೇಜಸ್ವಿಯವರದು ಬಹು ಮುಖ ಪ್ರತಿಭೆಯ ವ್ಯಕ್ತಿತ್ವ. ಕಥೆ-ಕಾದಂಬರಿಗಳಿಂದ ಜನಪ್ರಿಯರಾಗಿರುವ ತೇಜಸ್ವಿ ಅವರು ಛಾಯಾಗ್ರಾಹಣ, ಸಹಜ ಕೃಷಿ, ಬೇಟೆ, ವೈಜ್ಞಾನಿಕ ಬರಹಗಳನ್ನು ಕೂಡ ಪ್ರಿಯವಾಗುವ ಹಾಗೆ ಬರೆಯಬಲ್ಲರು. ಅದಕ್ಕೆ ಈ ಪುಸ್ತಕ ಒಂದು ಉದಾಹರಣೆ ಮಾತ್ರ.




ಪುಸ್ತಕ ಪರಿಚಯ: ಕುವೆಂಪು ಸಂಚಯ

 "ವಸಂತ ವನದಲಿ ಕೂಗುವ ಕೋಗಿಲೆ

ರಾಜನ ಬಿರುದು ಬಯಸುವುದಿಲ್ಲ;

ಹೂವಿನ ಮರದಲಿ ಜೇನುಂಬುಳುಗಳು

ಮೊರೆವುದು ರಾಜನ ಭಯದಿಂದಲ್ಲ"       ("ಕವಿ" ಕವಿತೆಯಿಂದ)

 

"ದೇಶ ಕೋಸಲಮಿಹುದು ಧನ ಧಾನ್ಯ ಜನ ತುಂಬಿ

ಸರಯೂ ನದಿ ಮೇಲೆ. ಮೆರೆದುದು ವಿಷಯ ಮಧ್ಯೆ

ರಾಜಧಾನಿ ಅಯೋಧ್ಯೆ"         ("ಶ್ರೀ ರಾಮಾಯಣ ದರ್ಶನಂ" ನಿಂದ)

 

"ಧನ್ಯನ್ ನೀನ್, ಏಕಲವ್ಯ, ಧನ್ಯನೆ ದಿಟಂ"    ("ಬೆರಳ್ ಗೆ ಕೊರಳ್" ನಾಟಕದಿಂದ)

 

"ದೂರದ ಗಿರಿಗಳ ಏರುವೆ ನೀನು;

ದೂರದ ಪುರಗಳ ನೋಡುವೆ ನೀನು"          (""ಮೋಡಣ್ಣನ ತಮ್ಮ" ಶಿಶು ಸಾಹಿತ್ಯದಿಂದ)

 

"ರಂಗಯ್ಯನು ಕುಳಿತನು. ಸ್ವಲ್ಪ ಹೊತ್ತು ತನ್ನ ಕೋವಿಯನ್ನು ಕೈಯಲ್ಲಿ ಹಿಡಿದುಕೊಂಡು ದಿಕ್ಕು ದಿಕ್ಕುಗಳನ್ನು ನೋಡಿದನು. ಸುತ್ತಲೂ ವೀಣಾವಾದ್ಯ ಧ್ವನಿಗೈಯುತ್ತ ಸೊಳ್ಳೆಗಳು ಹಾರಾಡಿ ಕಡಿಯುತ್ತಿದ್ದವು"          ("ಬಂದನಾ ಹುಲಿರಾಯನು" ಕಥೆಯಿಂದ)

 

"ಹೂವಯ್ಯನ ಮುಖವು ಭಾವೋತ್ಕರ್ಷದಿಂದಲೂ ಹರ್ಷದಿಂದಲೂ ಆಗ ತಾನೇ ಅಭ್ಯಂಜನ ಮಾಡಿದವನ ಮುಖದಂತೆ ಕೆಂಪಾಗಿತ್ತು. ಕಣ್ಣು ಸಲೀಲಾವೃತವಾಗಿ ಮಿರುಗುತ್ತಿದ್ದವು. ಸೀತೆ ನೋಡುತ್ತಿದ್ದ ಹಾಗೆಯೆ ಮೆಲ್ಲೆಲರು ಬೀಸಿದಾಗ ಹೂವಿನಿಂದ ಹನಿಗಳುದುರುವಂತೆ ಅವನ ಕಣ್ಣುಗಳಿಂದ ವಾರಿಬಿಂದುಗಳೂ ಸೂಸತೊಡಗಿದವು"        ("ಕಾನೂರು ಹೆಗ್ಗಡಿತಿ" ಕಾದಂಬರಿಯಿಂದ)

 

"ಇಂಗ್ಲಿಷ್ ಸಾಹಿತ್ಯವನ್ನು ಅಮೂಲಾಗ್ರವಾಗಿ ಓದಿದವರು ಬೆಕ್ಕಸಬಡುವಂತಹ ಸಾಹಿತ್ಯ ಶೃಂಗಗಳು ಕನ್ನಡದಲ್ಲಿ ಕೆಲವಾದರೂ ಮೂಡಿವೆ"     ("ನಮಗೆ ಬೇಕಾಗಿರುವ ಇಂಗ್ಲಿಷ್" ಲೇಖನದಿಂದ)

 

"ನನಗೆ ಗುಡ್ಡ ಕಾಡುಗಳಲ್ಲಿ ಗದ್ದೆ ತೋಟಗಳಲ್ಲಿ ಹೊಳೆತೊರೆಗಳೆಡೆ ಅಲೆಯುವುದಂದರೆ ಚಿಕ್ಕಂದಿನಿಂದಲೂ ಇಷ್ಟ. ಸಹ್ಯಾದ್ರಿಯ ನೈಸರ್ಗಿಕ ರಮಣೀಯತೆಯ ಸುವಿಶಾಲ ಸರೋವರದಲ್ಲಿ ನನ್ನ ಬಾಲ ಚೇತನ ಮರಿ ಮೀನಾಗಿ ಓಲಾಡಿ ತೇಲಾಡುತ್ತಿತ್ತು"     ("ನೆನಪಿನ ದೋಣಿಯಲ್ಲಿ" ಆತ್ಮಚರಿತ್ರೆಯಿಂದ)

 

ಕನ್ನಡದ  ಕಂಪು ಕುವೆಂಪು. ಅವರ ಕಾವ್ಯ, ನಾಟಕ, ಶಿಶು ಸಾಹಿತ್ಯ, ಕಥೆ, ಲೇಖನ, ಕಾದಂಬರಿಗಳ ಆಯ್ದ ಭಾಗಗಳು ಇವೆಲ್ಲವುಗಳನ್ನು "ಕುವೆಂಪು ಸಂಚಯ" ಒಂದೇ ಪುಸ್ತಕದಲ್ಲಿ ಓದುವುದು ಸಾಧ್ಯ. ಸುಮಾರು ಎಂಟು ನೂರು ಪುಟಗಳ ಪುಸ್ತಕವನ್ನು ಸಂಪಾದಿಸಿದ್ದಾರೆ ಕನ್ನಡದ ಮೂವರು ಹಿರಿಯ ಲೇಖಕರು. ಇದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟಿಸಲ್ಪಿಟ್ಟಿದೆ. (ಪ್ರಾಧಿಕಾರದ ಕಾರ್ಯಾಲಯಗಳಲ್ಲಿ ಆಕರ್ಷಕ ರಿಯಾಯಿತಿ ದರದಲ್ಲಿ ಪುಸ್ತಕ ದೊರೆಯುತ್ತದೆ. ನಾನು ಬೆಂಗಳೂರಿನ ಮಲ್ಲತ್ತ ಹಳ್ಳಿಯ ಕೇಂದ್ರದಿಂದ ಖರೀದಿಸಿದ್ದು).

 

ಕುವೆಂಪುರವರ ಕೃತಿಗಳನ್ನು ಓದುತ್ತ ಬೆಳೆದ ನಮಗೆ ಅವರ ಸಾಹಿತ್ಯ ಕೃಷಿಯ ಪರಿಚಯ ಇದ್ದೇ ಇದೆ. ಆದರೆ ಅವರ ಕೃತಿಗಳಲ್ಲಿ ಕಾಣುವ ಪೃಕೃತಿ ಸೌಂದರ್ಯ, ಬಾಳಿನ ಮಾಧುರ್ಯ, ಭಾಷಾ ಸಂಪತ್ತು ಮತ್ತೆ ಮತ್ತೆ ಓದುವ ಪ್ರೇರೇಪಣೆ ಮೂಡಿಸದೆ ಇರದು. ಅದರಲ್ಲೂ ಕುವೆಂಪುರವರ ಕನ್ನಡ ಪ್ರೇಮ ಅಪರಿಮಿತವಾದದ್ದು. ಅದಕ್ಕೇನೇ ಅವರು ನಮಗೆ ಹೇಳಿದ್ದು:

 

"ಎಲ್ಲಾದರೂ ಇರು, ಎಂತಾದರು ಇರು;

ಎಂದೆಂದಿಗೂ ನೀ ಕನ್ನಡವಾಗಿರು"




Saturday, November 14, 2020

ಪುಸ್ತಕ ಪರಿಚಯ: ಜಿ.ಎಸ್.ಶಿವರುದ್ರಪ್ಪ ಸಂಚಯ

"ಎಲ್ಲೋ ಹುಡುಕಿದೆ ಇಲ್ಲದ ದೇವರ

ಕಲ್ಲು ಮಣ್ಣುಗಳ ಗುಡಿಯೊಳಗೆ

ಇಲ್ಲೇ ಇರುವ ಪ್ರೀತಿ-ಸ್ನೇಹಗಳ

ಗುರುತಿಸದಾದೆನು ನಮ್ಮೊಳಗೆ"

 

"ಹಾಡು ಹಳೆಯದಾದರೇನು

ಭಾವ ನವನವೀನ"

 

ಭಾವಗೀತೆಗಳು ಹೃದಯಕ್ಕೆ ಎಷ್ಟು ಹತ್ತಿರ ಎನಿಸುತ್ತವೆ ಅಲ್ಲವೇ? ಅಷ್ಟೇ ಸುಲಲಿತವಾಗಿ ಓದಿಸಿಕೊಂಡು ಹಾಗೆಯೇ ವೈಚಾರಿಕತೆಯ ಚಾಟಿ ಏಟನ್ನು ಬೀಸುತ್ತವೆ ಶಿವರುದ್ರಪ್ಪನವರ ಕಾವ್ಯ ವಿಮರ್ಶೆಗಳು. "ವಚನಕಾರರ ವಿಚಾರಕ್ರಾಂತಿ" ಎನ್ನುವ ವಿಮರ್ಶೆಯಲ್ಲಿ ಅವರು ಹೀಗೆ ಬರೆಯುತ್ತಾರೆ.

 "ವಚನಕಾರರು ಅಥವಾ ಶಿವಶರಣರು ಮೂಲತ: ನಿಷ್ಠುರ ವಿಮರ್ಶಕರು. ಅವರು ವೇದ, ಶಾಸ್ತ್ರಗಳ ಮಾತಿಗಿಂತ, ತಮ್ಮ ಸುತ್ತಣ ಪರಿಸರದಲ್ಲಿ ಯಾವುದು ಸ್ವಂತ ಅನುಭವಕ್ಕೆ ಬರುತ್ತದೋ, ಸ್ವಾನುಭವವೇ ಎಲ್ಲಕಿಂತ ಮಿಗಿಲಾದುದು ಎಂದು ಕಂಡು ಕೊಂಡರು.

 ವೇದಕ್ಕೆ ಒರೆಯ ಕಟ್ಟುವೆ. ಶಾಸ್ತ್ರಕ್ಕೆ ನಿಗಳನಿಕ್ಕುವೆ - ಎಂದು ಬಸವಣ್ಣ ನವರು ಸವಾಲು ಹಾಕಿದರು.

 ವೇದಶಾಸ್ತ್ರ ಪುರಾಣಾಗಮಗಳೆಂಬ ಕೊಟ್ಟಣವ ಕುಟ್ಟುತ್ತ ನುಚ್ಚು ತೌಡು ಕಾಣಿರೋ - ಎಂದು ಅಕ್ಕಮಹಾದೇವಿ ಅವುಗಳ ನಿರರ್ಥಕತೆಯನ್ನು ಘೋಷಿಸಿದಳು.

 ಧರ್ಮವೆಂದರೆ ಬದುಕಿಗೆ ಇಳಿಯಲಾರದ ಆದರ್ಶಗಳ, ವಿಚಾರಗಳ, ನಂಬಿಕೆಗಳ ಒಂದು ಕಂತೆ ಎಂದು ವಚನಕಾರರು ಭಾವಿಸಲಿಲ್ಲ. ಧ್ಯಾನ, ಪೂಜೆ, ಪ್ರಾರ್ಥನೆಗಳು ಇರುವುದು ವ್ಯಕ್ತಿಯ ಅಂತರಂಗವನ್ನು ಪರಿಶುದ್ಧಗೊಳಿಸಲು. ಇವು ಬಹಿರಂಗದ ನಡುವಳಿಕೆಗಳಲ್ಲಿ ಪ್ರಕಟವಾಗದಿದ್ದರೆ ಅಂತರಂಗದ ಆಧ್ಯಾತ್ಮಿಕ ಸ್ಥಿತಿಗೆ ಏನೂ ಅರ್ಥವಿಲ್ಲ."

 ಹೀಗೆ ಇತರೆ ಕವಿಗಳಾದ ಪಂಪ, ಹರಿಹರ, ರಾಘವಾಂಕ, ಸರ್ವಜ್ಞ, ಕುವೆಂಪು, ಬೇಂದ್ರೆಯವರ ಕಾವ್ಯ ವಿಮರ್ಶೆಗಳು ಪುಸ್ತಕದಲ್ಲಿವೆ.

 ಜಾನಪದ, ನವೋದಯ, ಹೊಸಗನ್ನಡ ಕಾವ್ಯ, ಸಾಹಿತ್ಯ ಚಳವಳಿಗಳು ಮತ್ತು ಸಾಹಿತ್ಯ ಪರಂಪರೆ ಇವೆಲ್ಲ ವಿಷಯಗಳ ಮೇಲೆ ಲೇಖಕರು ರಚಿಸಿರುವ ಹಲವಾರು ಮೀಮಾಂಸೆಗಳು ಪುಸ್ತಕದಲ್ಲಿವೆ. ಅವು ಓದುಗರಿಗೆ ಜ್ಞಾನಾರ್ಜನೆ ಮತ್ತು ಹೊಸ ಬರಹಗಾರರಿಗೆ ಮಾರ್ಗದರ್ಶನ ನೀಡಬಲ್ಲವು.

 ಪ್ರವಾಸ ಸಾಹಿತ್ಯ ವಿಭಾಗದಲ್ಲಿ ಲೇಖಕರು ರಚಿಸಿದ ನಾಲ್ಕು ಕೃತಿಗಳು - "ಟಾಲ್ ಸ್ಟಾಯ್ ಬೆಳೆದ ಮಲೆನಾಡಿನಲ್ಲಿ", "ವಿವೇಕಾನಂದರ ಹೆಜ್ಜೆಯ ಹಿಂದೆ", "ಸರೋವರ ಮಂಡಲಗಳ ಮಧ್ಯೆ" ಮತ್ತು "ಕೇದಾರನಾಥಕ್ಕೆ" ಕೂಡ ಪುಸ್ತಕದ ಭಾಗವಾಗಿವೆ.

 ಲೇಖಕರು ರಚಿಸಿದ "ಶಿವಯೋಗಿ ಸಿದ್ಧರಾಮ" ಕಾದಂಬರಿಯ ಆಯ್ದ ಭಾಗ ಆಕರ್ಷಿತವಾಗಿದೆ ಮತ್ತು  ಲೇಖಕರಿಗಿದ್ದ ಅಧ್ಯಾತ್ಮದ ಒಲವನ್ನು ಸ್ಪಷ್ಟ ಪಡಿಸುತ್ತದೆ. ಲೇಖಕರ ಆತ್ಮಕಥೆಯಾದ "ಚತುರಂಗ" ಆಯ್ದ ಭಾಗ, ಲೇಖಕರ ಶಾಲಾ ದಿನಗಳು, ಅವರು ಬಾಲಕರಾಗಿದ್ದಾಗ ರಚಿಸಿದ ಕವಿತೆಗಳು, ಅವರ ಸಾಹಿತ್ಯಾಸಕ್ತಿ ರೂಪುಗೊಂಡ ಬಗೆ ಇವುಗಳ ಪರಿಚಯ ಮಾಡಿಸುತ್ತದೆ.

 ಸುಮಾರು ೪೫೦ ಪುಟಗಳ, ಅತ್ಯುತ್ತಮ ಗುಣಮಟ್ಟದ ಕಾಗದದಲ್ಲಿ ಮುದ್ರಿಸಲ್ಪಟ್ಟ ಪುಸ್ತಕ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟಿಸಲ್ಪಿಟ್ಟಿದು, ರಿಯಾಯಿತಿ ದರದಲ್ಲಿ ಲಭ್ಯವಿದೆ.

  ಪುಸ್ತಕ ಒಂದೇ ಸಲಕ್ಕೆ ಓದಿ ಮುಗಿಸುವ ಕಾದಂಬರಿಯಲ್ಲ. ಬದಲಿಗೆ ನಿಧಾನವಾಗಿ ಮತ್ತು ನಿರಂತರವಾಗಿ ಓದಿದರೆ ಹೃದಯಕ್ಕೆ ತಂಪನ್ನು ತಂದುಕೊಡಬಲ್ಲ ಪುಸ್ತಕ. ಕವಿಗಳ ಮತ್ತು ವಚನಕಾರರ ಮನದಾಳಕ್ಕೆ ಇಳಿಯುತ್ತ, ಸಾಹಿತ್ಯ ಪ್ರೇಮವನ್ನು ಗಟ್ಟಿಗೊಳಿಸಲು ನೆರವಾಗುವ ಪುಸ್ತಕ.




Thursday, April 23, 2015

ಪುಸ್ತಕ ಪರಿಚಯ:ಅವಧೇಶ್ವರಿ (ಲೇಖಕರು: ಶಂಕರ ಮೊಕಾಶಿ ಪುಣೆಕರ)

Seals from Harappan times (Source: Harappa.com)
ಇದು ವೇದ ಕಾಲೀನ ರಾಜಕೀಯ ಕಾದಂಬರಿ. ಋಗ್ವೇದದ ಮಂತ್ರಗಳು ಮತ್ತು ಹರಪ್ಪ ಕಾಲದ ಮುದ್ರಿಕೆಗಳು ಈ ಕೃತಿಗೆ ಆಧಾರ.

ಬಹು ಕಾಲದ ಹಿಂದೆ, ಶ್ರೀರಾಮನ ಪೂರ್ವಜನಾದ ಪುರುಕುತ್ಸನು ಅಯೋಧ್ಯೆಯನ್ನು ಆಳುತಿದ್ದ ರಾಜ. ಅವನ ತಂಗಿ ಪುರುಕುತ್ಸಾನಿಯೇ ಅವನ ಪತ್ನಿ. ರಾಜ ಮನೆತನದ ಆಗಿನ ಪದ್ದತಿಯಂತೆ ಸೋದರ-ಸೋದರಿಯ ನಡುವೆ ವಿವಾಹ ಜರುಗಿತ್ತು. ಆದರೆ ದಾಂಪತ್ಯ ಜೀವನ ಅವರಿಂದ ಸಾಧ್ಯವಾಗದೆ, ಪುರುಕುತ್ಸನು ವಿಲಾಸಿ ಜೀವನದಲ್ಲಿ ಮುಳುಗುತ್ತಾನೆ.   ರಾಜ್ಯ ನಿಭಾಯಿಸುವ ಹೊಣೆ ಹಂತ ಹಂತವಾಗಿ ರಾಣಿಯ ಕಡೆಗೆ ವಾಲುತ್ತದೆ. ಶತ್ರು ದೇಶದ ಆಕ್ರಮಣವೊಂದರಲ್ಲಿ, ಪುರುಕುತ್ಸ ಬಂಧಿಯಾಗಿ ಅಯೋಧ್ಯೆಯಿಂದ ಬೇರ್ಪಡುತ್ತಾನೆ. ಆಗ ರಾಜ್ಯದ ಸಂಪೂರ್ಣ ಜವಾಬ್ದಾರಿ ರಾಣಿಯ ಹೆಗಲೇರುತ್ತದೆ.

ತುಂಬ ಮುಂದಾಲೋಚಾನೆಯಿದ್ದ ರಾಣಿ, ಅಯೋಧ್ಯೆಯ ಹಿತವನ್ನು ಸಮರ್ಥವಾಗಿ ಕಾಪಾಡಿ ಕೊಂಡು ಬರುತ್ತಾಳೆ. ರಾಜ್ಯದ ಆಂತರಿಕ ಸಮಸ್ಯೆಗಳನ್ನು ಮತ್ತು ಹೊರ ಶತ್ರುಗಳ ಭಾಧೆಯನ್ನು ಬುದ್ದಿವಂತಿಕೆಯಿಂದ ಪರಿಹರಿಸಿಕೊಳ್ಳುತ್ತಾಳೆ. ಆದರೆ ಅವಳಿಗಿರುವ ನೋವೆಂದರೆ ಸಂತಾನವಿಲ್ಲದಿರುವುದು. ಇದಕ್ಕೆ ಪರಿಹಾರವಾಗಿ ನಿಯೋಗದಿಂದ ಸಂತಾನ ಪಡೆಯುವಂತೆ ಸೂಚಿಸುತ್ತಾರೆ ಅವಳ ಧರ್ಮ ಗುರುಗಳು. ಹೊರ ಲೋಕಕ್ಕೆ ರಾಜ ಪುರುಕುತ್ಸನೇ ಗರ್ಭಧಾರಣೆಗಾಗಿ ಕೆಲ ಕಾಲ ಸೆರೆಯಿಂದ ಹೊರಬಂದಂತೆ ಸನ್ನಿವೇಶ ಸ್ರಷ್ಟಿಸಿ, ಸಿಂಹಭಟ್ಟನೆಂಬ ಬ್ರಾಹ್ಮಣನಿಂದ ಪುತ್ರ ಸಂತಾನವನ್ನು ಪಡೆಯುವ ರಾಣಿ ಮಗುವಿನ ಬೆಳವಣಿಗೆಯಲ್ಲಿ, ರಾಜ್ಯದ ಪಾಲನೆಯಲ್ಲಿ ಮುಳುಗಿ ಹೋಗುತ್ತಾಳೆ.ಅವಳ ಮಗ ತ್ರಸದಸ್ಸ್ಯು ಬೆಳೆದು, ರಾಜ್ಯದ ಅಧಿಕಾರವನ್ನು ವಹಿಸಿಕೊಳ್ಳುತ್ತಾನೆ. ತಾಯಿಯ ಬಲಗೈ ಬಂಟ ತಾರ್ಕ್ಷ್ಯನೇ ಅವನಿಗೆ ಸಮರ ಕಲೆಗಳನ್ನು ಕಲಿಸುವ ಗುರುವಾಗುತ್ತಾನೆ. ತದ ನಂತರ ರಾಣಿ ಪುರುಕುತ್ಸಾನಿ ರಾಜಕೀಯವನ್ನು ತೊರೆದು ಆಶ್ರಮವಾಸಿಯಗುತ್ತಾಳೆ.
           
ತರುಣ ರಾಜ ತ್ರಸದಸ್ಸ್ಯು ವಿಲಕ್ಷಣ ಸಂಧರ್ಭವೊಂದರಲ್ಲಿ ತನ್ನ ಗೆಳೆಯ ವೃಶಭಟ್ಟನೊಂದಿಗೆ ವಾಜ್ಯಕ್ಕೆ ಇಳಿಯುತ್ತಾನೆ. ಇದನ್ನು ನಿಶ್ಪಕ್ಷಪಾತಿಯಾಗಿ ಬಗೆ ಹರಿಸಲು ಪಕ್ಕದ ಕಾಶಿ ರಾಜ್ಯದ ದೊರೆಗೆ ಅಹ್ವಾನ ಹೊಗುತ್ತದೆ. ರಾಜ ತ್ರಸದಸ್ಸ್ಯುವಿನ ಮಾನ ತೆಗೆಯಲು ಪಣ ತೊಟ್ಟ ವೃಶಭಟ್ಟ ರಾಜನ ಜನ್ಮ ರಹಸ್ಯದ ಬಗ್ಗೆ ಪ್ರಶ್ನಿಸುತ್ತಾನೆ. ಸಂಶಯದ ಅನುಮಾನ ಹೊಕ್ಕ  ತ್ರಸದಸ್ಸ್ಯು ತಾಯಿಯನ್ನು ಮತ್ತು ಗುರುಗಳನ್ನು ಪ್ರಶ್ನಿಸಲು ಆಶ್ರಮಕ್ಕೆ ತೆರಳುತ್ತಾನೆ. ಅವನು ದೈವಾಂಶದಿಂದ ಹುಟ್ಟಿದವನೆಂದು ಅವನಿಗೆ ಭೊಧನೆಯಗುತ್ತದೆ. ಆಶ್ರಮದಲ್ಲಿ  ಮತಿ ಭ್ರಮಣೆಗೊಂಡಿರುವ ಸಿಂಹಭಟ್ಟ ರಾಣಿಯನ್ನು ತನ್ನ ಪತ್ನಿ ಎಂದು ಹೇಳುವುದು ಮತ್ತು ಪುರುಕುತ್ಸಾನಿ ಕರುಣೆಯಿಂದ ಅವನಿಗೆ ಲೈಂಗಿಕ ಸಹಕಾರ ನೀಡುವುದು ಗೊತ್ತಾಗುತ್ತದೆ.

ಅಯೋಧ್ಯೆಗೆ ಮರಳುವ ರಾಜನಿಗೆ ನೆರೆ ದೇಶಗಳು ಯುದ್ಧ, ಸಂಘರ್ಷಗಳಲ್ಲಿ ತೊಡಗಿರುವುದು ತಿಳಿಯುತ್ತದೆ. ರಾಜ್ಯಕ್ಕಿರುವ ಅಪಾಯವನ್ನು ಮನಗಂಡು ಸೂಕ್ತ ಮಾರ್ಗದರ್ಶನ ಕೊಡುವದಕ್ಕಾಗಿ ರಾಣಿ ರಾಜಕೀಯಕ್ಕೆ ಮರಳುತ್ತಾಳೆ. ತಾರ್ಕ್ಷ್ಯನ ತೆಕ್ಕೆಯಲ್ಲಿ ಮತ್ತೆ ಜೀವನಾನಂದ ಹೊಂದುವ ಆಕೆ, ರಾಜ್ಯದ ರಕ್ಷಣೆಗೆ ಸೂಕ್ತ ಉಪಾಯಗಳನ್ನು ಹೆಣೆಯುತ್ತಾಳೆ. ತ್ರಸದಸ್ಸ್ಯು ಯುದ್ಧದಲ್ಲಿ ಪಾಲ್ಗೊಂಡು ಬಂಧನದಲ್ಲಿದ್ದ  ತಮ್ಮ ಸ್ನೇಹಿತ ಕಾಶಿ ರಾಜನನ್ನು ಬಿಡುಗಡೆ ಮಾಡುತ್ತಾನೆ.
     
ಇದೊಂದು ವಿಶಿಷ್ಟ ಕೃತಿ. ಲೇಖಕರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ತಂದು ಕೊಟ್ಟ ಕಾದಂಬರಿ. ಇದು ಪ್ರಾಚೀನ ಕಾಲದ ಜನರ ಜೀವನ ಶೈಲಿ, ಅವರ ನ್ಯಾಯ-ಅನ್ಯಾಯದ ವಿಮರ್ಶೆ, ಋಗ್ವೇದದ ದೇವರುಗಳು ಮತ್ತು ಅಥರ್ವ ವೇದದ ಕ್ಷುದ್ರ ಶಕ್ತಿಗಳ ಆರಾಧನೆ, ಇತಿಹಾಸವನ್ನು ದಾಖಲಿಸಲು ಮೊಹರು, ಫಲಕಗಳ ಬಳಕೆ ಮುಂತಾದ ವಿಷಯಗಳ ಮೇಲೆ ಅರಿವು ಮೂಡಿಸುತ್ತದೆ. ಲೇಖಕರು ಇದನ್ನು ಇತಿಹಾಸದಂತೆ ಓದದೆ, ಕಾಲ್ಪನಿಕ ಕೃತಿಯಂತೆ ಓದುವ ಸಲಹೆ ನೀಡುತ್ತರಾದರೂ, ಈ ಪುಸ್ತಕ ನೀಡುವ ಮಾಹಿತಿ ಅಲ್ಲಗೆಳೆಯುವಂತಿಲ್ಲ. ಅದರಲ್ಲಿ ಗಮನಿಸ ಬೇಕಾದ ಒಂದು ಅಂಶವೆಂದರೆ, ಋಗ್ವೇದದ ಎಲ್ಲ ಶ್ಲೋಕಗಳು ದೇವರ ಕೀರ್ತನೆಯಲ್ಲ. ಮನುಷ್ಯ ಶೋಕದ ಆಲಾಪಗಳು ಸೇರಿವೆ ಎನ್ನುವುದು .    

ಶಂಕರ  ಮೊಕಾಶಿ ಪುಣೆಕರ ಅವರ ಸಂಶೋಧನಾ ಸಾಮರ್ಥ್ಯ ಅದ್ಭುತವದದ್ದು. 'ಗಂಗವ್ವ ಗಂಗಾಮಾಯಿ' ಕಾದಂಬರಿಯಿಂದ ಜನಪ್ರಿಯತೆ ಪಡೆದ ಅವರು, ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಇನ್ನು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಧಾರವಾಡ ಅವರ ಹುಟ್ಟೂರು. ವೃತ್ತಿಯಿಂದ ಶಿಕ್ಷಕರು. ಅವರ ಸಾಹಿತ್ಯ ಸೇವೆ ಅವರನ್ನು ಅಜರಾಮರನ್ನಾಗಿಸಿದೆ.

ಈ ಕಾದಂಬರಿ ಪ್ರಸ್ತಾಪಿಸುವ ವಿಷಯಗಳ ಸತ್ಯಾಸತ್ಯತೆಯನ್ನು ಒಪ್ಪುವುದು, ಬಿಡುವುದು ಆಯಾ ಓದುಗರಿಗೆ ಬಿಟ್ಟ ವಿಚಾರ. ಆದರೆ ನಮ್ಮ ಸಾಹಿತ್ಯದ ಪರಿವಿಧಿಯನ್ನು ವಿಸ್ತರಿಸಿಕೊಳ್ಳುವದಕ್ಕೆ ಇದರ ಓದು ಅತ್ಯಗತ್ಯ.


Sunday, April 19, 2015

ಪುಸ್ತಕ ಪರಿಚಯ: ಅಮ್ಮ ಸಿಕ್ಕಿದ್ಲು (ರವಿ ಬೆಳಗೆರೆ)

ಈ ಕಥಾ ವಸ್ತುವಿನ ಪ್ರಮುಖ ಪಾತ್ರ ರವಿ ಬೆಳಗೆರೆ. (ಈ  ಕಾದಂಬರಿ ಕಾಲ್ಪನಿಕವಾದರೂ, ನಿಜ ಜೀವನದ ನಾಮಧೇಯಗಳನ್ನು ಉಪಯೋಗಿಸುತ್ತದೆ). ಈತ ಒಬ್ಬ ಕುಸ್ತಿ ಪಟು. ನಂತರ ಪತ್ರಕರ್ತ. ಕುಡಿತದ ದಾಸನಾಗಿ ಕುಟುಂಬ ಸಂಬಂಧಗಳನ್ನು ಕಳೆದುಕೊಳ್ಳುತ್ತಾನೆ. ಆದರೂ ಕುಡಿತವನ್ನು ಬಿಡಲಾರ. ಅದರ ಪ್ರತಿಫಲವಾಗಿ ತನ್ನ ಜೀವನವನ್ನು ಕೊನೆಗಳಿಸುಕೊಳ್ಳುವ ನಿರ್ಧಾರಕ್ಕೆ ಬರುತ್ತಾನೆ. ಆದರೆ ಅದಕ್ಕೆ ಸೂಕ್ತ ಸ್ಥಳವಾಗಿ ತನ್ನೂರಾದ ಬಳ್ಳಾರಿಗೆ ಅರ್ಧ ರಾತ್ರಿಯಲ್ಲಿ ಸ್ಕೂಟರ್ ನಲ್ಲಿ ಬೆಂಗಳೂರಿಂದ ಹೊರಡುತ್ತಾನೆ.ಊರು ಮುಟ್ಟುವದರಲ್ಲಿ ಅಪಘಾತ ಆಗುತ್ತೆ. ಗಾಯಗೊಂಡು ಬಂದ ಮಗನಿಗೆ ಶ್ರುಶೂಸೆ, ಉಪಚಾರ ಮಾಡುತ್ತಾಳೆ ಅವನ ಅಮ್ಮ. ಅವಳ ಆರೈಕೆಯಲ್ಲಿ ಚೇತರಿಸುಕೊಳ್ಳುವ ಮಗ, ತನ್ನಲ್ಲಾಗುವ ಬದಲಾವಣೆಗಳನ್ನು ಗಮನಿಸುಕೊಳ್ಳುತ್ತಾನೆ. ಕುಡಿತವಿಲ್ಲದೆ ಕೆಲವು ಗಂಟೆ ಕಳೆಯಲಾರದ ತನಗೆ, ಪೂರ್ತಿ ಒಂದು ದಿನ ಅದರಿಂದ ದೂರವಿರುವುದು ಅರಿವಿಗೆ ಬರುತ್ತದೆ. ಸಾಕಷ್ಟು ವರ್ಷಗಳವರೆಗೆ ಅವಳನ್ನು ಉಪೇಕ್ಷಿಸಿದ ಅವನಿಗೆ ನೆನಪುಗಳು ಮರುಕಳಿಸುತ್ತವೆ. ತನ್ನನ್ನು ಓದಿಸಲು ಅವಳು ಪಟ್ಟ ಕಷ್ಟಗಳ ಅರಿವಾಗುತ್ತದೆ. ಇನ್ನು ಹೆಚ್ಚಿನ ಸಮಯ ಅಮ್ಮನೊಂದಿಗೆ ಕಳೆಯಬಯಸುವ ಮಗನನ್ನು ನಿಜ ಜೀವನಕ್ಕೆ ತಳ್ಳುತ್ತಾಳೆ ಅಮ್ಮ. ಏಕೆಂದರೆ ಅವಳು ಸತ್ತು ಈಗಾಗಲೇ ಇಪ್ಪತ್ತು ವರ್ಷಗಳಾಗಿವೆ. ಮರು ದಿನ ಹೊಸ ಜೀವನ ಕಣ್ತೆರೆಯುತ್ತದೆ.
                    
ಈ ಪುಸ್ತಕ ಕುಡುಕನೊಬ್ಬನ ಸ್ವಗತ ಎನ್ನುವಂತೆ ತೋರುತ್ತದೆ. ರವಿ ಬೆಳಗೆರೆಯವರ  'ಖಾಸ್ ಬಾತ್ ' ಅಂಕಣಗಳನ್ನು ಓದಿದವರಿಗೆ ಹೆಚ್ಚು ಹೊಸತು ಕಾಣದಿದ್ದರೂ, ಹೊಸ ಓದುಗರಿಗೆ ಲೇಖಕನೊಬ್ಬನ ಜೀವನದ ಆಳ, ಎಲ್ಲೆಗಳ ಸಂಪೂರ್ಣ ಪರಿಚಯವಾಗಿ ಅಚ್ಚರಿ ಮೂಡಬಹುದು.


ಈ ಕಿರು ಕಾದಂಬರಿ ಸ್ವಲ್ಪ ಕಾಲ್ಪನಿಕ, ಬಹುತೇಕ ನಿಜ ಜೇವನ. ಕುಡಿತ ಎನ್ನುವದು ಮೊದ ಮೊದಲು ಜೀವನದ ಸೋಲುಗಳಿಂದ ವಿಮುಖರಾಗಿಸುವ ಸಾಧನವಾಗಿ, ನಂತರ ಹೆಚ್ಹಿನ ಸೋಲುಗಳಿಗೆ ಕಾರಣವಾಗಿ, ಒಬ್ಬರ ಜೀವನವನ್ನು ಹೇಗೆ ಹಂತ ಹಂತವಾಗಿ ಅಧಪಥನಕ್ಕೆ ತಳ್ಳುತ್ತದೆ ಎನ್ನುವದನ್ನು ಎಳೆ, ಎಳೆಯಾಗಿ ಬಿಚ್ಚಿಡುವದರಲ್ಲಿ ಲೇಖಕರು ಸಂಪೂರ್ಣ ಯಶಸ್ವಿಯಾಗಿದ್ದಾರೆ. ಆದರೆ ಇದಕ್ಕೂ ಹೆಚ್ಚಿನ ಉದ್ದೇಶ ಲೇಖಕರದ್ದು. ಈ ಖಾಯಿಲೆಗೆ ಮದ್ದು ಕೊಡಬಲ್ಲ ಎಕ್ಯಕ ಜೀವವೆಂದರೆ ಅಮ್ಮ. ಅವಳು ಎಲ್ಲ ದುಃಖವನ್ನು ಮರೆಸಬಲ್ಲಳು. ಎಲ್ಲ ತಪ್ಪುಗಳನ್ನು ಮನ್ನಿಸಬಲ್ಲಳು. ಒಬ್ಬಂಟಿ ಎಂದುಕೊಳ್ಳುವರ  ಜೀವನಕ್ಕೆ ಆಸರೆಯಾಗಿ, ಕುಡಿತದ ತೆಕ್ಕೆಯಿಂದ ಹೊರ ತರಬಲ್ಲಳು. ಇದು ಈ ಪುಸ್ತಕದ ಸಂದೇಶ. 

Wednesday, February 4, 2015

Book Review: Nammamma Andre Nangishta (Short Essays collection in Kannada) by Vasudhendra

This is a collection of twelve life stories; half of them are experiences of author in association with his mother, so the anthology takes the name ‘I like my mother’. They all exhibit ground to earth lifestyle of the author, his innocent upbringing and less materialistic but more humanistic approach towards life. Few essays are descriptive incidents and other follow the author from his childhood to adulthood. Two of them made me re-read as I enjoyed them most and I would like to expand on here.

Stainless Steel Utensils: Author’s mother had a strange fascination towards stainless steel utensils which were a symbol of prestige in homes few decades ago. After her marriage, she finds that there are no steel utensils in her husband’s house. Though it depresses her, she takes oath to fill the house with what she adores. And the opportunity comes soon. When she gets pregnant, her husband asks what her desire is, that is when the first stainless steel plate finds way into the house. When her son (author of this book) grows up and begins his earning in Madras, he takes her into a multi-storied shop selling stainless steel utensils, she becomes speechless with wonder seeing all that is on display. Her son comforts her putting hand around her shoulders and all those shining utensils reflect their joy. But this strong fascination of her does not get carried to her children. The author retains few utensils in memory of his mother and the touch of them brings him the memory and the feeling of motherly touch.



Annavru visiting my town: People of Karnataka identify Rajkumar, veteran actor of Kannada film industry as ‘Annavru’ (elder brother). When this popular movie star visits the small town of the author, all the population of the town waits in front of the house where the actor was taking rest. All of them wanted to see the actor whom they had seen only on movie screen before. Rajkumar comes out along with little his son, waves hands at all of those who had gathered there and disappears back into home. Author’s mother puts her young son on her shoulders so that he can take a look at the actor though she fails to see the actor herself. While returning home, mother and son visit Lord Hanuman temple, sit down in the temple as mother exchanges casuals with temple priest. That is when the priest requests author’s mother to sing devotional songs. When she begins singing, closing her eyes with involvement, two cars arrive at the temple silently. And the actor Rajkumar walks into the temple to offer his prayer. When author’s mother stops singing in wonder, he gestures her not to stop singing. After Pooja gets over, before leaving the temple, the actor checks with author (who was young then) what he is studying and advises him to do well. After this memorable experience, the same night author checks with her mother if she will perform the act of warding off the evil’s eye. She firmly rejects it claiming the actor is a good person so only good thing can happen to her son.


Though I liked the above two life stories most, other essays too are enjoyable reads. An essay titled ‘Guest and the monkey’ summarizes a funny experience of the author that makes the reader laugh out aloud. Priced at Rs. 60, this book is a steal. This book has won award from Karnataka Shaitya Academy as well. For all Kannada book readers, this book is enjoyable experience as it makes you both inward and lighter. For those considering to gift books, this is a perfect match as it comes in pocket size and easy to send it across.


Monday, February 2, 2015

Book Review: Yaana (A Kannada novel) by S L Bhyrappa

This is the story of space travelers. Two astronauts carefully chosen for the mission of exploring space are expected to produce their offspring in spaceship who would continue the mission which runs for decades. The children of those two astronauts, one male and another female are supposed to produce their next generation. When they are set to marry, they raise the question - how can siblings get married? They put forward this question to their parents and history unravels through the notes documented by their parents. Their find out that their parents are not married, were brought together only for this mission. They also learn that their parents are not biological parents but surrogate parents as the kids they raised were born out of embryo created from sperm and egg donors. That solves the dilemma ensuring space mission is unaffected.



Though this novel has scientific background, it is the psychological exploration of characters which takes the center stage (as always). This novel is another feather in Bhyrappa’s cap who has explored people from all walks of life, musicians, politicians, mythological characters and this time the space travelers. A must read for fans of Bhyrappa and this novel is brief (210 pages long), makes it a quick read and transports the readers to an experience beyond the Earth.

Tuesday, November 11, 2014

ಪುಸ್ತಕ ಪರಿಚಯ: ಹುಚ್ಚು ಮನಸಿನ ಹತ್ತು ಮುಖಗಳು (ಶಿವರಾಮ ಕಾರಂತ)

ಇದು 'ಕಡಲ ತಡಿಯ ಭಾರ್ಗವ' ಎನಿಸಿಕೊಂಡಿರುವ ಶಿವರಾಮ ಕಾರಂತರ ಆತ್ಮ ಚರಿತ್ರೆ. ಈ ಪುಸ್ತಕದಲ್ಲಿ ಅವರು ತಮ್ಮ ಜೀವನದ ಬಹು ಮುಖ್ಯ ಘಟ್ಟಗಳನ್ನು ಮೆಲುಕು ಹಾಕಿ, ತಾವು ಸಾಗಿ ಬಂದ ಹಾದಿಯನ್ನು ವಿಶ್ಲೇಸಿಸುತ್ತ, ತಮ್ಮ ಬದುಕು ಹಾಗೂ ವ್ಯಕ್ತಿತ್ವ ರೂಪುಗೊಂಡ ಬಗೆಯನ್ನು ಅನಾವರಣಗೊಳಿಸುತ್ತ ಹೊಗುತ್ತಾರೆ.

ಅಪರಿಮಿತ ಕುತೂಹಲ ತುಂಬಿದ, ಜೀವನ್ಮುಖಿಯಾದ ಒಬ್ಬ ವ್ಯಕ್ತಿ ಜಗತ್ತಿನ ಅನ್ವೇಷಣೆಗೆ ತೊಡಗಿದಾಗ, ಆತ ಹಲವಾರು ವಿಷಯಗಳಲ್ಲಿ ಸುಲಭದಲ್ಲಿ ಹಿಡಿತ ಸಾಧಿಸುತ್ತ, ಸಾಹಿತ್ಯ, ಸಂಗೀತ, ನೃತ್ಯಗಳನ್ನು ಒಲಿಸಿಕೊಂಡು, ಇತಿಹಾಸ, ರಾಜಕೀಯ, ತತ್ವಶಾಸ್ತ್ರಗಳಲ್ಲಿ ಪ್ರೌಢಿಮೆ ತನ್ನದಾಗಿಸಿಕೊಂಡು, ಜಗತ್ತಿನ ಉದ್ದಗಲಕ್ಕೂ ಅಲೆಯುತ್ತಾ, ನಾನಾ ಸಂಸ್ಕೃತಿಗಳ, ವಿವಿಧ ವ್ಯಕ್ತಿತ್ವಗಳ ಪರಿಚಯ ಮಾಡಿಕೊಳ್ಳುತ್ತ, ಅದುವರೆಗೂ ಜನ ಗಮನಿಸದಂತ ವಿಷಯಗಳನ್ನು ಗ್ರಹಿಸುತ್ತಾ ಸಾಗುತ್ತಾನೆ. ಅವನ ಜ್ಞಾನದ ಪರಿಮಿತಿ ವಿಸ್ತಾರಗೊಳ್ಳುತ್ತ, ಅವನು 'ನಡೆದಾಡುವ ಜ್ಞಾನಕೋಶ' ಎನಿಸಿಕೊಳ್ಳುತ್ತಾನೆ.

ಒಬ್ಬ ಬರಹಗಾರ ತನ್ನ ಜೀವನ ಅನುಭವದ ತಳಹದಿಯ ಮೇಲೆ, ತನ್ನ ಕಥೆ, ಕಾದಂಬರಿಯ ಪಾತ್ರಗಳನ್ನು ಸೃಷ್ಟಿಸುತ್ತಾನೆ. ಬರಹಗಾರನ ಬದುಕು ಎಷ್ಟು ವಿಸ್ತಾರವಾಗಿರುತ್ತದೋ ಅಷ್ಟು ಅವನ ಕೃತಿಗಳು ಸಂಪತ್ದ್ಭರಿತ ವಾಗಿರುತ್ತವೆ. 'ಚೋಮನ ದುಡಿ' ಯಿಂದ 'ಮೂಕಜ್ಜಿಯ ಕನಸು'  ವರೆಗಿನ ಕಾದಂಬರಿಗಳಲ್ಲಿ ಕಾಣ ಬರುವ ಪಾತ್ರಗಳ ವೈವಿಧ್ಯತೆಗಳು, ಕಥೆಯ ಸಾರ, ಅವುಗಳ ಕರ್ತೃವಿನ ಜೀವನಾನುಭವ ಸೂಚಿಸುತ್ತವೆ. ಬಹು ಮುಖ ಪ್ರತಿಭೆಯ, ಪ್ರತಿಯೊಂದನ್ನು ಪ್ರತಿಶೋಧನಗೆ, ತುಲನೆಗೆ ಒಳ ಪಡಿಸುವ ವ್ಯಕ್ತಿಗೆ, ಬರೆಯುವ ಕಲೆ ಸಹಜವಾಗಿ ಸಿದ್ದಿಸಿ ಬಂದಿತ್ತು. ಕಲೆಯ ಇತರೇ ಪ್ರಾಕಾರಗಳು ಈ ಸರಸ್ವತಿ ಪುತ್ರನಲ್ಲಿ ಮಿಳಿತಗೊಂಡಿದ್ದವು. ಶಿವರಾಮ ಕಾರಂತರು ಕಾಲೇಜು ಪದವಿ ಪಡೆಯದಿದ್ದರೂ, ಎಂಟು ವಿಶ್ವ ವಿದ್ಯಾನಿಲಯಗಳಿಂದ ಗೌರವ ಪೂರ್ವಕ ಪ್ರಧಾನ ಮಾಡಿದಂತ ಡಾಕ್ಟರೇಟ್ ಪದವಿಗಳು, ಅವರ ಬೌದ್ಧಿಕ ಆಳ ಮತ್ತು ಸಾಹಿತ್ಯ ಸಾಧನೆಗಳನ್ನು ಎತ್ತಿ ಹಿಡಿಯುತ್ತವೆ.

ಶಿವರಾಮ ಕಾರಂತರ ಜೀವನ ಚರಿತ್ರೆ ತಿಳಿದುಕೊಳ್ಳಲು ಆಸಕ್ತಿ ಇರುವವರಿಗೆ ಅವರದೇ ಬರವಣಿಗೆ ಇರುವ ಈ ಪುಸ್ತಕ ಉತ್ತಮ ಆಯ್ಕೆ. ಅವರ ಕಾದಂಬರಿಗಳಲ್ಲಿ ಕಂಡು ಬರುವ ಜೀವನ ಸ್ಪೂರ್ತಿ, ಈ ಪುಸ್ತಕದ ಉದ್ದಕ್ಕೂ ಕಾಣಬಹುದು. ಕಾರಂತರು ಈ ಪುಸ್ತಕಕ್ಕೆ 'ಹುಚ್ಚು ಮನಸಿನ ಹತ್ತು ಮುಖಗಳು' ಎಂದು ಹೆಸರಿಟ್ಟರೂ, ನನ್ನ ಪ್ರಕಾರ ಕನ್ನಡ ನಾಡು ಕಂಡ ಹತ್ತು ಪ್ರತಿಭಾನ್ವತರಲ್ಲಿ ಅವರು ಒಬ್ಬರು.

-0-

This is the autobiographical work of veteran writer Shivaram Karanth. In this book he revisits the major milestones of his long and fulfilling life.

When a curious person begins exploring the life, he quickly learns the subject of his interest and moves to another (Literature, Music, Dance, History, Politics, Philosophy and so on), travels from one place to another (all over the world), meets variety of people, witnesses strange incidents and observes what many others overlooked. As the repository of knowledge gets bigger and bigger, he becomes a ‘Walking Encyclopedia’.


A writer, a novelist in particular, creates characters for his fictional work from his own life experiences. Wider the experience of the writer, richer is the novel. From ‘Chomana Dudi’ to award winning ‘Mookajjiya Kanasugalu’ characters and plot of the novels show the breadth and depth of life experiences of their creator. For the multi-talented, well-traveled, exploratory nature person, writing came naturally as a form of creative expression but he was equally successful in other forms of arts as well. Shivaram Karnath did not have a college degree, but the honorary Ph. D’s from at least 8 universities were more of a tribute to his intellectual depth and literary achievements.


For those who are interested in knowing the making and personal life of Shivaram Karanth, this book serves best in his own words. Like in his fictional works, one can observe presence of the life force throughout the length of this autobiography. Though this book is named ‘Ten Faces of a Crazy Mind’, I think Shivaram Karnath is one of the ten wisest men Karnataka has seen.

Book Review: Tabbaliyu Neenade Magane (A Kannada novel) by S L Bhyrappa

'ಧರಣಿ ಮಂಡಲ ಮಧ್ಯದೊಳಗೆ

ಮೆರೆಯುತಿಹ ಕರ್ಣಾಟ ದೇಶದಿ'

 

ಪುಣ್ಯಕೋಟಿ ಎಂಬ ಗೋವು ಇದ್ದ ದೊಡ್ಡಿಯ ವಂಶಸ್ಥನಾದ ಕಾಳಿಂಗಗೌಡನೊಂದಿಗೆ ಶುರುವಾಗುವ ಕಾದಂಬರಿ ಅವನ ಮೊಮ್ಮಗನಾದ ಕಾಳಿಂಗ (ಅಜ್ಜನ ಹೆಸರು ಮೊಮ್ಮಗನಿಗೆ ಇಡುವುದು ವಂಶದ ವಾಡಿಕೆ) ನೊಂದಿಗೆ ಕೊನೆಗೊಳ್ಳುತ್ತದೆ.

 

ಕಾಳಿಂಗಗೌಡ ಹಾಲಿನ ಆಸೆಗಾಗಿ ಗೋವನ್ನು ಸಾಕಿದವನಲ್ಲ. ಮನುಷ್ಯ ತಾಯಿಗಿಂತ ಗೋಮಾತೆಯ ಪುಣ್ಯ ದೊಡ್ಡದು ಎನ್ನುವುದು ಅವನ ಅಚಲ ನಂಬಿಕೆ. ತನ್ನ ದೊಡ್ಡಿಯಲ್ಲಿರುವ ಎಲ್ಲ ಹಸುಗಳಿಗೂ ಅವನು 'ಗಂಗೆ', 'ಗೌರಿ' ಎಂದು ದೇವತೆಗಳ ಹೆಸರು ಹಿಡಿದೇ ಕರೆಯುತ್ತಾನೆ. ಅದರಲ್ಲೂ ಪುಣ್ಯಕೋಟಿ ತಳಿಯ ಬಗ್ಗೆ ಗೌಡನಿಗೆ ಎಲ್ಲಿಲ್ಲದ ವಿಶ್ವಾಸ. ಅವನ ಮೊಮ್ಮಗ ಇನ್ನೂಕೂಸಾಗಿರುವಾಗ, ತಾಯಿಯ ಎದೆ ಹಾಲು ಸಾಲದಾಗಿ ಪುಣ್ಯಕೋಟಿ ಹಾಲು ಕುಡಿದೆ ದೊಡ್ಡವನಾಗಿದ್ದು. ಕಾಡಿಗೆ ಹಸು ಮೇಯಿಸಲು ಹೋದಾಗ ಅಲ್ಲಿ ಪುಣ್ಯಕೋಟಿ  ಮೇಲೆ ಎರಗಿದ ಕಿರುಬನ ಜೊತೆ ಕಾಳಗದಲ್ಲಿ ಮಡಿದ ಮಗ ಕೃಷ್ಣನನ್ನು ಮತ್ತು ಕೆಲವೇ ದಿನಗಳಿಗೆ ಮಡಿದ ಪುಣ್ಯಕೋಟಿ ಹಸುವನ್ನು ಅಕ್ಕ ಪಕ್ಕದಲ್ಲೇ ಮಣ್ಣು ಮಾಡಿ ತನ್ನ ಸಂಸ್ಕಾರ ಮೆರೆದಿದ್ದ ಕಾಳಿಂಗಗೌಡ. ಅಲ್ಲದೆ ಪುಣ್ಯಕೋಟಿ ಹಾಡಿನಲ್ಲಿ ಬರುವ ಹಸು ಹೆಬ್ಬುಲಿಯನ್ನು ಪರಿವರ್ತಿಸಿದ ಜಾಗವಾದ ಅರುಣಾದ್ರಿ ಬೆಟ್ಟದಲ್ಲಿ ಒಂದು ದೇವಸ್ಥಾನ ಮತ್ತು ಕಲ್ಯಾಣಿಯನ್ನು ಕಟ್ಟಿ ತನ್ನ ಅಭಿಮಾನ ವ್ಯಕ್ತಗೊಳಿಸಿದ್ದ.

 

ಅವನ ಮೊಮ್ಮಗ ಕಾಳಿಂಗ ತನ್ನ ವಂಶದಲ್ಲೇ ಮೊದಲ ಬಾರಿಗೆ ಶಾಲೆಯ ಮೆಟ್ಟಿಲು ಹತ್ತಿ, ಹೈ ಸ್ಕೂಲು, ಕಾಲೇಜು ಪಾಸಾಗಿ, ಇಂಗ್ಲೀಷು ಕಲಿತು, ವಿದೇಶಕ್ಕೆ ಹೆಚ್ಚಿನ ಅಭ್ಯಾಸಕ್ಕೆ ತೆರಳಿದ್ದಅಜ್ಜಿಯ ತಿಥಿಗೆ ವಾಪಸ್ಸು ಮರಳಿದ ಕಾಳಿಂಗನಿಗೆ, ಅಜ್ಜ ಎಲ್ಲೆಂದು ಕೇಳಿದಾಗ, ಅಜ್ಜಿಯ ತಿಥಿ ಮುಗಿದು ಹೋಗಿ, ನಂತರ ಕಾಲವಾದ ಅಜ್ಜನ ತಿಥಿಗೆ ಎಲ್ಲರು ಅಣಿಯಾಗುತ್ತಿರುವುದು ತಿಳಿಯಿತು. ಅಲ್ಲಿಂದ ಅಜ್ಜನ ಎಲ್ಲ ಆಸ್ತಿಯ ಹೊಣೆಗಾರಿಕೆ ಅವನ ಹೆಗಲೇರಿತು. ತನ್ನ ಸ್ನೇಹಿತ ಮತ್ತು ಅವನ ಅಜ್ಜ ಕಟ್ಟಿಸಿದ ದೇವಸ್ಥಾನದ ಅರ್ಚಕನಾದ ವೆಂಕಟರಮಣನಿಂದ ತನ್ನ ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳನ್ನು ಕೇಳಿ ತಿಳಿದುಕೊಂಡ.

 

ಆಧುನಿಕ ವಿಚಾರಗಳನ್ನು ಮೈಗೂಡಿಸಿ ಕೊಂಡಿದ್ದ ಕಾಳಿಂಗನ ವಿಚಾರಗಳು ಅವನ ಅಜ್ಜನವಕ್ಕಿಂತ ಸಂಪೂರ್ಣ ವಿಭಿನ್ನವಾಗಿದ್ದವು. ಹಸು ಒಂದು ಹಾಲು ಕೊಡುವ ಪ್ರಾಣಿ ಮತ್ತು ಅದು ಹಾಲು ಕೊಡುವುದು ನಿಲ್ಲಿಸಿದಾಗ ಅದನ್ನು ಮಾಂಸಕ್ಕೆ ಉಪಯೋಗಿಸುವುದು ಸೂಕ್ತ ಎನ್ನುವುದು ಅವನ ಅಭಿಪ್ರಾಯ. ಹಾಗಾಗಿಯೇ ಅವನು ತನ್ನ ದೊಡ್ಡಿಯಲ್ಲಿದ್ದ ಗೊಡ್ಡು ಹಸುಗಳನ್ನು ಮಾರಿ ಹಾಕಿದ. ಅಜ್ಜ ದೇವಸ್ಥಾನಕ್ಕೆಂದು ಕಲ್ಯಾಣಿ ಕಟ್ಟಿಸಿದ್ದರೂ, ಅದಕೆ ಪಂಪ್ ಜೋಡಿಸಿ ತನ್ನ ಹೊಲಕ್ಕೆ ನೀರು ಬಿಟ್ಟುಕೊಂಡ. ಟ್ರ್ಯಾಕ್ಟರ್ ತರಿಸಿ ಹೊಗೆಸೊಪ್ಪು ಉಳುಮೆ ಮಾಡತೊಡಗಿದ. ಅಮೇರಿಕೆಯಿಂದ ತನ್ನ ಹೆಂಡತಿ ಮತ್ತು ಮಗುವನ್ನು ಕರೆಸಿಕೊಂಡ. ತೋಟದಲ್ಲೇ ಮನೆ ಕಟ್ಟಿಕೊಂಡು ವಾಸ ಮಾಡ ತೊಡಗಿದ. ಕಾಳಿಂಗನ ವರ್ತನೆ ಮತ್ತು ವಿಚಾರಗಳು ಅವನ ಮನೆಯವರಿಗೆ ಹಾಗೂ ಹಳ್ಳಿಯವರಿಗೆ ದಿಗ್ಭ್ರಮೆ ತಂದವು. ಯಾವುದಕ್ಕೂ ಕಿವಿಗೊಡದ ಕಾಳಿಂಗ ಗೆಳೆಯ ವೆಂಕಟರಮಣನ ಮಾತುಗಳನ್ನು ಸಹ ಉಪೇಕ್ಷಿಸಿಸಿದ. ಇದೆಲ್ಲ ಬೆಳವಣಿಗೆಗಳ ನಡುವೆ, ಬದಲಾದ ಮಗನ ನಡುವಳಿಕೆಯಿಂದ ಬೇಸತ್ತು, ಕಾಳಿಂಗನ ತಾಯಿ ಉಳಿದ ಪುಣ್ಯಕೋಟಿ ಹಸುಗಳನ್ನು ವೆಂಕಟರಮಣನಿಗೆ ದಾನ ಕೊಟ್ಟು ಜೀವ ಬಿಟ್ಟಳು. ಅವಳ ಶವಸಂಸ್ಕಾರವನ್ನು ಊರಿನ ಜನರೇ, ಕಾಳಿಂಗನಿಗಾಗಿ ಕಾಯದೆ, ಕರೆಯದೆ, ತಾವೇ ಮಾಡಿ ಮುಗಿಸಿದರು.


ಕಾಳಿಂಗನ ಹೆಂಡತಿ ಹಿಲ್ಡಾಳಿಗೆ ಸ್ಥಾನ ಕ್ಯಾನ್ಸರ್ ಎಂದು ಗೊತ್ತಾಯಿತು. ಎದೆ ಹಾಲು ಕುಡಿಯುವ ಅವನ ಪುಟ್ಟ ಮಗು ಬಾಟಲಿ ಹಾಲನ್ನು ನಿರಾಕರಿಸಿ ಸೊರಗಲಾರಂಭಿಸಿತು. ಆಗ ನೆನಪಾಗಿದ್ದು ತಾನು ಚಿಕ್ಕವನಾಗಿದ್ದಾಗ ಪುಣ್ಯಕೋಟಿ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿದ ವಿಷಯ. ಅವನ ದೊಡ್ಡಿಯಲ್ಲಿ ಯಾವುದೇ ಪುಣ್ಯಕೋಟಿ ಹಸು ಉಳಿದಿರಲಿಲ್ಲ. ಅವನ ತಾಯಿ ತನ್ನ ಸಾವಿಗೆ ಮುಂಚೆ ಅವನ್ನೆಲ್ಲ ಅರ್ಚಕ ವೆಂಕಟರಮಣನಿಗೆ ದಾನ ಕೊಟ್ಟಿದ್ದಳು. ಕಾಳಿಂಗ ತನ್ನ ಗೆಳೆಯ ವೆಂಕಟರಮಣನ ಹತ್ತಿರ ಸಮಸ್ಯೆ ಹೇಳಿಕೊಂಡು ಒಂದು ಪುಣ್ಯಕೋಟಿ ಹಸುವನ್ನು ಕೆಲ ದಿನಗಳ ಮಟ್ಟಿಗಾದರೂ ಕೊಡುವಂತೆ ಬೇಡಿ ಕೊಳ್ಳುತ್ತಾನೆ. ವೆಂಕಟರಮಣ ಕಾಳಿಂಗನನ್ನು ಹೀಯಾಳಿಸಿದರೂ, ಒಂದು ಹಸುವನ್ನು ಅದನ್ನು ಯಾವುದೇ ಕಾರಣಕ್ಕೆ ಸಾಯಿಸಬಾರದು ಎನ್ನುವ ಕರಾರು ಹಾಕಿ ಕೊಡುತ್ತಾನೆ. ಕಾಳಿಂಗನ ಪುಟ್ಟ ಮಗು ಪುಣ್ಯಕೋಟಿ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿಯಲು ಪ್ರಾರಂಭಿಸುತ್ತದೆ. ಅಲ್ಲಿಯರೆಗೆ ತನ್ನ ವರ್ತನೆಯಲ್ಲಾದ ಲೋಪ ದೋಷಗಳ ಅರಿವು ಕಾಳಿಂಗನಿಗಾಗುತ್ತದೆ. ಅವನು ಕೆಲವೇ ದಿನಗಳ ಹಿಂದೆ ಕಟುಕರಿಗೇ ಮಾರಿದ್ದ ದನಗಳನ್ನು ವಾಪಸ್ಸು ತರುವ ಉದ್ದೇಶದಿಂದ ಅವುಗಳನ್ನು ಹುಡುಕಿಕೊಂಡು ಮುಂಬೈ ತಲುಪುತ್ತಾನೆ. ಅಲ್ಲಿ ಬಯಲಲ್ಲಿರುವ ಸಾವಿರಾರು ದನಗಳಲ್ಲಿ ತನ್ನವು ಯಾವೆಂಬುದು ಗುರುತು ಸಿಗುವುದಿಲ್ಲ. ಮತ್ತು ಅವೆಲ್ಲ ತನ್ನವೇ ಎನ್ನುವ ಭಾವ ಬರುತ್ತದೆ. ಆದರೆ ಅವುಗಳನ್ನು ತಾನು ಉಳಿಸಲಾರದ ಅಸಹಾಯಕತೆ ಅವನರಿವಿಗೆ ಬರುತ್ತದೆ. ಇದ್ದಕ್ಕಿದ್ದ ಹಾಗೆ ತಾಯಿಯ ನೆನಪು ಬರುತ್ತದೆ ಮತ್ತು ಅವ್ವ ಸಾಯಬಾರದಾಗಿತ್ತು ಎನಿಸುತ್ತದೆ. ಅವನು ತಬ್ಬಲಿಯಾಗುವುದು ಅನಿವಾರ್ಯವಾಗಿತ್ತೋ  ಎನ್ನುವ ವಿಷಯ ಅವನ ಗ್ರಹಿಕೆಗೆ ಸಿಕ್ಕದೆ ಹೋಗುತ್ತದೆ.


The story of this Kannada novel is set in the 1960s’ in a typical village of India. Tabbaliyu Neenade Magane can be roughly translated to “You've become an orphan, Son”.

The family of Kalinge Gowda belongs to the tribes who rear the cattle. Kalinge Gowda and his family believe that cows are no ordinary animals but representation of Gods. They get no less care than his family members. His affection towards cows is appreciated ad reciprocated by the whole village at large. His son died a brave death fighting a wolf trying to kill his cow. His grandson, also named Kalinga (as per family tradition of passing the name of grandfather to grandson across generations), was fed by a cow during his infancy when the child’s mother did not produce sufficient breast milk. These experiences had made his life more interwoven with that of cows and he goes on to build a temple at the place memorized as the meeting place of a cow ‘Punyakoti’ belonging to his ancestors with a tiger and it was believed that tiger gave up its life as it was moved by truthfulness of the cow for keeping the promise it made to the tiger for coming back to it to become food for it. In this background, grandson Kalinga grows up, completes his schooling and heads to USA for higher studies in Agriculture and related sciences.



The final days turn tragic for the contented old man Kalinge Gowda. Govt. begins to construct a road across his farm dividing the land he owns and also running over the burial place of his son. Moved by this Kalinge Gowda’s wife dies and Kalinge Gowda too departs soon. Grandson Kalinga returns to homeland to find that both of his grandparents are dead. He cannot communicate effectively with his mother as she is mute, cannot talk.

Kalinga approaches the Govt. officials for compensation for the land lost towards road construction and the land where his grandfather had built the temple in return. As a well-educated and foreign returned individual he commands respect among the Govt. officials with ease. He puts efforts in bringing the modern methods of farming to his village, buys a tractor and makes use of a water-pump to lift water. He meets up with his childhood friend Venkataramana who is also a priest performing Pooja at the temple built by his grandfather. He informs him that he is already married to an American and has a son and talks of his arrangements to bring them to the village. They too arrive soon. 

All the villagers are partially scared with the developments in the family of the offspring of their beloved Kalinge Gowda. Kalinga after his return is a changed person and has very different perspectives than those of his grandfather. He now thinks that the cows which are old of no use and sells them to butchers. This angers the villagers and they begin to develop hatred towards Kalinga. Kalinga’s wife Lydia thinks that animals are a means to human welfare and they should be put to productive use else should be killed. She is a regular meat eater like many of her country people. She one day kills a cow and cooks the meat for her family. Once the news of this spreads in the village, furious villagers attack Kalinga’s farm, destroy his crops and put him to a village court which fines him and bars him from killing any more cows. And the decision was supported by Kalinga’s mother and Venkataramana.


Kalinga’s mother saddened by the behavior of her son dies but the villagers perform the last rites keeping Kalinga out of the scene. Kalinga learns about all this. Though he was pained by his mother’s death, he is afraid of villagers insulting him if he went any near to them. He develops a dilemma and starts thinking what steps of his went wrong. In a few days after his mother’s death, Kalinga’s second child, a daughter is born and soon after the delivery due to medical complications his wife is unable to feed breast milk to the new born. The baby is starved as it refused to accept bottled milk and reaches the verge of life and death and that is when Kalinga goes to Venkataramana and begs him to lend him a cow to feed his baby and thus saves his child. That incident brings clarity to the thoughts Kalinga had and he decides to save the old cows his wife had sold to a butcher few days ago. Tracing them he reaches Mumbai but fails identify his cows among thousands of cows in the butcher house. All begin to appear like his cows but with the money he has he cannot save all of them. Again he begins to retrospect his life.


 This is a masterpiece and a critical work by S L Bhyrappa. This was first published in 1968. It was made into a movie in Kannada and Hindi languages. Though it was written four decades ago, readers of the present times can read it for the clarity of thought and to get the perspectives of moral rightness. Having read most of Bhyrappa’s work, I rate this book and his other novel ‘Parva’ the best among all of his works.