ನೋಡುವ ವಸ್ತು ಒಂದೇ ಆಗಿದ್ದರೂ, ಅದು ನಮಗೆ ಕಂಡ ಹಾಗೆ ಇತರೆ ಪ್ರಾಣಿಗಳಿಗೆ ಕಾಣುವುದಿಲ್ಲ. ಕೆಲವೊಂದು ಪ್ರಾಣಿಗಳು ಬಣ್ಣ ಗುರುತಿಸಲಾರವು. ಆದರೆ ಬೆಕ್ಕುಗಳು ನಮಗಿಂತ ಹೆಚ್ಚು ಅಗಲದ ೨೦೦ ಡಿಗ್ರಿ ನೋಟವನ್ನು ನೋಡಬಲ್ಲವು. ಕತ್ತಲಾದರೆ ನಾವು ಮನೆ ಸೇರಿದರೆ, ಕಾಡಿನಲ್ಲಿನ ಬೇಟೆ ಪ್ರಾಣಿಗಳು ಹಾಗು ನಿಶಾಚರ ಹಕ್ಕಿಗಳು ಆಗ ಹೊರ ಬೀಳುವುದಿಲ್ಲವೇ? ಪ್ರಕೃತಿಯು ಅವುಗಳ ದೇಹವನ್ನು ಬೇರೆ ತರಹ ವಿನ್ಯಾಸ ಮಾಡಿ ಅವುಗಳ ಇಂದ್ರಿಯಗಳ ಸಾಮರ್ಥ್ಯವನ್ನು ಅವುಗಳ ಜೀವನ ಶೈಲಿಗೆ ಹೊಂದುವಂತೆ ಬದಲಾಯಿಸಿದೆ. ನಾಯಿಗಳ ವಾಸನೆ ಗುರುತು ಹಿಡಿಯುವ ಶಕ್ತಿ ನಮಗಿಂತ ಹೆಚ್ಚು ಇರುವ ಹಾಗೆ, ಹಾವುಗಳು ಸೂಕ್ಷ್ಮ ಕಂಪನಗಳನ್ನು ಗುರುತಿಸಿದ ಹಾಗೆ ಎಲ್ಲ ಪ್ರಾಣಿ, ಪಕ್ಷಿಗಳು ವಿವಿಧ ಸ್ಥರದಲ್ಲಿ ಇಂದ್ರಿಯ ಸಾಮರ್ಥ್ಯ ಹೊಂದಿವೆ. ಎಲ್ಲ ಜೀವಿಗಳಿಗೂ, ಕಾಣಿಸುವ ಬೆಳಕು, ಕೇಳಿಸುವ ಶಬ್ದ, ವಾಸನೆ, ರುಚಿ ಗುರುತಿಸುವಿಕೆ, ಹಾಗೆಯೆ ಸ್ಪರ್ಶದ ಅನುಭವಕ್ಕೆ ಬೇರೆ ಬೇರೆ ವ್ಯಾಪ್ತಿಗಳಿವೆ. ಅದರಾಚೆಗೆ ಇರುವುದು ಅವುಗಳ ಅನುಭವಕ್ಕೆ ಬರುವುದಿಲ್ಲ ಅಷ್ಟೇ. ಆದರೆ ಇರುವಿಕೆಯನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ.
ಹಾಗೆಯೇ
ನಿಮ್ಮ ಶ್ರವಣ ಶಕ್ತಿಗೆ ಒಂದು ಪುಟ್ಟ ಪರೀಕ್ಷೆ.
ಲಿಂಕ್ ನಲ್ಲಿರುವ ಧ್ವನಿಯನ್ನು ಆಲಿಸಿ. ಅದರ ಮೊದಲ ಕೆಲವು
ಕ್ಷಣಗಳು ಹಾಗು ಕೊನೆಯ ಕ್ಷಣಗಳು
ನಿಮಗೆ ಕೇಳಿಸದೇ ಹೋಗಬಹುದು. ಆದರೂ ಸಂಪೂರ್ಣ ಆಲಿಸಿ.
ನಂತರ ಮನೆಯಲ್ಲಿನ ಚಿಕ್ಕ ಮಕ್ಕಳಿಗೆ ಇದನ್ನು ಕೇಳಿಸಿ ನೋಡಿ. ನಿಮಗಿಂತ ಹೆಚ್ಚಿನ frequency ಅವರಿಗೆ ಕೇಳಿಸುವುದಾಗಿ ಹೇಳುತ್ತಾರೆ. ಆ ತರಂಗಾಂತರದಲ್ಲಿ ಶಬ್ದ
ಇದ್ದರೂ, ಅದು ಚಿಕ್ಕ ಮಕ್ಕಳಿಗೆ ಕೇಳಿಸಿದರೂ,
ನಮಗೆ ಮಾತ್ರ ಕೇಳಿಸದೇ ಹೋಗಿತ್ತು.
https://www.youtube.com/watch?v=PAsMlDptjx8
ವಿಜ್ಞಾನದ ತಿಳಿವು ಪಂಚೇಂದ್ರಿಯಗಳ ಸಾಮರ್ಥ್ಯಕ್ಕೆ ನಿಲುಕದ ಅನುಭೂತಿ ಮತ್ತು ಜ್ಞಾನವನ್ನು ನಮ್ಮದಾಗಿಸುತ್ತ ಹೋಗುತ್ತದೆ. ಪ್ರಕೃತಿಯ ರಹಸ್ಯಗಳು ತಮಗೆ ತಾವೇ ತೆರೆದುಕೊಳ್ಳುತ್ತಾ ಹೋಗುತ್ತವೆ. ಇದು ಎಷ್ಟು ಕುತೂಹಲಕಾರಿ ವಿಷಯ ಅಲ್ಲವೇ?
No comments:
Post a Comment